ಮುಂಬೈ: ಒಂದು ದಶಕದ ಹಿಂದೆ 42 ಬಿಲಿಯನ್ ಡಾಲರ್ (2.70 ಲಕ್ಷ ಕೋಟಿ ರೂ.) ಶ್ರೀಮಂತನಾಗಿದ್ದ ಉದ್ಯಮಿ ಅನಿಲ್ ಅಂಬಾನಿ ಈಗ ಶತಕೋಟ್ಯಧಿಪತಿ ಪಟ್ಟಿಯಿಂದಲೇ ಹೊರಬೀಳುವ ಸಾಧ್ಯತೆಯಿದೆ.
ಮಂಗಳವಾರ ಷೇರುಪೇಟೆ ವಹಿವಾಟು ಮುಕ್ತಾಯಗೊಂಡಾಗ ಅನಿಲ್ ಅಂಬಾನಿ ಒಡೆತನದ ಒಟ್ಟು ಕಂಪನಿಗಳ ಮೌಲ್ಯ 5400 ಕೋಟಿ ರೂ. ಆಗಿತ್ತು. ಈ ಪೈಕಿ ಎಲ್ಲ ಕಂಪನಿಗಳಲ್ಲೂ ಅನಿಲ್ ಶೇ. 75 ಕ್ಕಿಂತ ಕಡಿಮೆ ಪಾಲುದಾರಿಕೆ ಹೊಂದಿದ್ದಾರೆ. ಸಾಮಾನ್ಯವಾಗಿ 1 ಬಿಲಿಯನ್ ಡಾಲರ್ (6,500 ಕೋಟಿ ರೂ.) ಮೌಲ್ಯದ ಸ್ವತ್ತು ಹೊಂದಿದ್ದರೆ ಮಾತ್ರ ಶತಕೋಟ್ಯಧಿಪತಿಗಳ ಪಟ್ಟಿಯಲ್ಲಿ ಉದ್ಯಮಿಗಳನ್ನು ಪರಿಗಣಿಸಲಾಗುತ್ತದೆ.
Advertisement
ಕೆಲ ತಿಂಗಳ ಮೊದಲು 2 ಬಿಲಿಯನ್ ಡಾಲರ್ (13,500 ಕೋಟಿ ರೂ.) ಮೌಲ್ಯದ ರಿಲಯನ್ಸ್ ನಿಪ್ಪಾನ್ ಲೈಫ್ ಅಸೆಟ್ಸ್ ಮ್ಯಾನೇಜ್‌ಮೆಂಟ್ ಕಂಪನಿಯನ್ನು ಪಾಲುದಾರ ಕಂಪನಿ ನಿಪ್ಪಾನ್ ಲೈಫ್ಗೆ ಮಾರಾಟ ಮಾಡಲಾಗಿತ್ತು.