Advertisement

ನಿಕಾನ್ ಡಿ780 ಕ್ಯಾಮರಾ ಭಾರೀ ಜನಪ್ರಿಯತೆ ಪಡೆಯಲು ಕಾರಣವೇನು, ಏನಿದರ ವಿಶೇಷತೆ?

10:24 AM Jan 22, 2020 | Mithun PG |

ಛಾಯಾಗ್ರಹಣ ಎಂಬುದು ಇಂದು ಹಲವರ ಆಸಕ್ತಿಯ ಕ್ಷೇತ್ರ. ಡಿಜಿಟಲ್ ಕ್ಯಾಮರಾ ಬಂದ ನಂತರವಂತೂ ಪ್ರತಿಯೊಬ್ಬರು   ಇಂದು ಫೋಟೋಗ್ರಾಫರ್ ಗಳಾಗಿ ಬದಲಾಗಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ನಿಕಾನ್ ಮತ್ತು ಕ್ಯಾನನ್ ಕ್ಯಾಮರಾಗಳು ಹೆಚ್ಚು ಜನಾಕರ್ಷಣೆ ಪಡೆದಿವೆ. ಅದರಲ್ಲೂ ಕ್ಯಾಮರಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಿಕಾನ್ ಸಂಸ್ಥೆ ಇದೀಗ ಎಫ್‍ ಎಕ್ಸ್ ಫಾರ್ಮೆಟ್‍ ನ ಡಿ780 ಕ್ಯಾಮರಾವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅತಿ ವೇಗದಲ್ಲಿ ಫೋಟೋಗಳನ್ನು ಕ್ಲಿಕ್ಕಿಸಲು ಹಾಗೂ ಅತ್ಯುತ್ತಮ ಗುಣಮಟ್ಟದ ಫೋಟೋಗಳನ್ನು ಸೆರೆಹಿಡಿಯಲು ಈ ಕ್ಯಾಮರಾ ಸಹಕಾರಿಯಾಗಲಿದೆ.

Advertisement

ಹೌದು. ನಿಕಾನ್‌ನ ಹೊಸ ಸರಣಿಯ ಕ್ಯಾಮರಾ ದೇಶದಲ್ಲಿ ಬಿಡುಗಡೆಯಾಗಿದೆ. ಹವ್ಯಾಸಿ ಮತ್ತು ವೃತ್ತಿಪರ ಛಾಯಾಗ್ರಾಹಕರಿಗೆ ಅನುಕೂಲವಾಗುವಂತಹ ವಿವಿಧ ಆಯ್ಕೆಗಳನ್ನು ನಿಕಾನ್ ನೂತನ ಕ್ಯಾಮರಾ ಹೊಂದಿದೆ. ನಿಕಾನ್​ ಪರಿಚಯಿಸಿದ ಕ್ಯಾಮರಾಗಳ ಪೈಕಿ ಅತಿ ವೇಗವಾಗಿ ಕೆಲಸ ನಿರ್ವಹಿಸುವ ಸಾಲಿಗೆ ಡಿ780 ಕ್ಯಾಮರಾ ಕೂಡ ಸೇರುತ್ತದೆ. ಇನ್ನು, ಕಡಿಮೆ ಬೆಳಕಿದ್ದಾಗ ಛಾಯಾಗ್ರಾಹಕ ಫೋಕಸ್​ ಮಾಡಲು ಹರಸಾಹಸ ಪಡಬೇಕು. ಆದರೆ, ಡಿ780ಯಲ್ಲಿ ಈ ಸಮಸ್ಯೆ ಎದುರಾಗುವುದೇ ಇಲ್ಲ. ಇದರಲ್ಲಿ ಇಂಟರ್​ ಚೇಂಜೇಬಲ್ ಎಫ್ ಮೌಂಟ್ ಲೆನ್ಸ್ ಇದ್ದು, ಬ್ಯಾಟರಿ ಬಾಳಿಕೆ ಹೆಚ್ಚಿದೆ. ಇದರ ಪರಿಣಾಮ ಅತ್ಯುತ್ಕೃಷ್ಠವಾದ ರೀತಿಯಲ್ಲಿ ಶೂಟಿಂಗ್‍ನೊಂದಿಗೆ ಅತ್ಯಧಿಕ ನಿಖರತೆಯನ್ನು ಕ್ಷಿಪ್ರವಾಗಿ ಪಡೆದುಕೊಳ್ಳಬಹುದಾಗಿದೆ ಮತ್ತು ಅತ್ಯುತ್ತಮವಾದ ಸ್ಪಷ್ಟತೆಯನ್ನು ಪಡೆಯಬಹುದು.

ಈ ಹೊಸ ಡಿ780 ಕ್ಯಾಮರಾ ಸುಲಭವಾಗಿ ದೃಷ್ಟಿ ಹರಿಸಬಲ್ಲ ವ್ಯೂ ಫೈಂಡರ್ ಹೊಂದಿದೆ. ಈ ಕ್ಯಾಮರಾದಿಂದ ನಿಸರ್ಗದ ಅದ್ಭುತ ಸೌಂದರ್ಯವನ್ನು ಮತ್ತು ಬೆರಗುಗೊಳಿಸುವ ರಸಕ್ಷಣಗಳನ್ನು ಸರಿಸಾಟಿಯಿಲ್ಲದ ರೀತಿಯಲ್ಲಿ ಸೆರೆ ಹಿಡಿಯಬಹುದಾಗಿದೆ. ಫೋಟೋಗ್ರಾಫರ್‌ಗಳು ಮತ್ತು ವಿಡಿಯೋಗ್ರಾಫರ್‌ಗಳು ಸ್ವಿಫ್ಟ್ ಮೋಶನ್ ಅನ್ನು ಅತ್ಯಂತ ಚಾಕಚಕ್ಯತೆಯಿಂದ ಕ್ಲಿಕ್ಕಿಸಬಹುದು.

ಈ ಕ್ಯಾಮರಾ ಸಿಎಂಓಎಸ್ ಸೆನ್ಸಾರ್ ಅನ್ನು ಒಳಗೊಂಡಿದ್ದು ನಿಕಾನ್ ಡಿ750 ಮಾದರಿಯಲ್ಲೇ 24. 5 ಮೆಗಾಫಿಕ್ಸೆಲ್ ನಲ್ಲಿ ಚಿತ್ರಗಳನ್ನು ತೆಗೆಯಬಹುದು.  ಈ ಕ್ಯಾಮಾರದಲ್ಲಿ ಕಲರ್ ಮತ್ತು ಕ್ವಾಲಿಟಿ ಅತ್ಯುತ್ತಮವಾಗಿದೆ. 6 ಇಮೇಜ್ ಪ್ರೊಸೆಸರ್ ಹೊಂದಿದ್ದು 4K UHD ವಿಡಿಯೋ ರೆಕಾರ್ಡ್ ಮಾಡುವ ಅವಕಾಶವಿದೆ.  ಐಎಸ್ ಓ ರೇಂಜ್ ಕೂಡ ಮೈನವಿರೇಳಿಸುವಂತಿದ್ದು 51,200 ಇದ್ದು 204,800 ವರೆಗೂ ವಿಸ್ತರಿಸಬಹುದು.  ಒಂದು ಸೆಕೆಂಡ್ ಗೆ 1/8000 ಶಟರ್ ಸ್ಪೀಡ್  ಈ ಕ್ಯಾಮಾರದಲ್ಲಿ ಕಂಡುಬರಲಿದೆ.

Advertisement

ನಿಕಾನ್ ಕಾರ್ಪೊರೇಶನ್ ಟೋಕಿಯೋದ ಅಂಗಸಂಸ್ಥೆಯಾಗಿರುವ ನಿಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಈ ಹೊಸ ಕ್ಯಾಮೆರಾವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ನಿಕಾನ್ ಡಿ780 ಬೆಲೆ: ಹೊಸ ನಿಕಾನ್  ಡಿ780 Body 1,98,995 ರೂ. 24-120 ಎಂಎಂ ವಿಆರ್ ಲೆನ್ಸ್ ನೊಂದಿಗೆ ನಿಕಾನ್ ಡಿಜಿಟಲ್ ಕ್ಯಾಮರಾ ಡಿ780 ಕಿಟ್ ಬೆಲೆ 2,42,495 ರೂಪಾಯಿಗಳು. ಬ್ಲೂಟೂತ್​ ಹಾಗೂ ವೈಫೈ ವ್ಯವಸ್ಥೆ ಕೂಡ ಇದಕ್ಕಿದೆ. 3.2 ಇಂಚು ಉದ್ದದ ಸ್ಕ್ರೀನ್ ​ಅನ್ನು ಇದು ಹೊಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next