Advertisement

US Election: ಪರಸ್ಪರ ಕೂಗಾಡಿದ ನಿಕ್ಕಿ-ವಿವೇಕ್‌

09:17 PM Aug 24, 2023 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್‌ ಪಕ್ಷದಿಂದ ಅಭ್ಯರ್ಥಿಗಳಾಗಲು ಹೊರಟಿರುವ ನಿಕ್ಕಿ ಹ್ಯಾಲೆ ಮತ್ತು ವಿವೇಕ್‌ ರಾಮಸ್ವಾಮಿ ಚರ್ಚೆಯೊಂದರಲ್ಲಿ ಪರಸ್ಪರ ವಾಕ್ಸಮರ ನಡೆಸಿದ್ದಾರೆ. ಮಾತ್ರವಲ್ಲ ಪರಸ್ಪರ ಕೈತೋರಿಸಿ, ಕೂಗಾಡಿದ್ದಾರೆ. ಇಬ್ಬರೂ ಭಾರತೀಯ ಮೂಲದ ವ್ಯಕ್ತಿಗಳು ಅಮೆರಿಕದ ಉನ್ನತ ಸ್ಥಾನಕ್ಕಾಗಿ ಪೈಪೋಟಿಗಿಳಿದಿರುವುದು ಇತಿಹಾಸದಲ್ಲೇ ಇದೇ ಮೊದಲು.

Advertisement

ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಉತ್ಸುಕರಾಗಿರುವ 8 ಮಂದಿ ಆಕಾಂಕ್ಷಿಗಳಿಗಾಗಿ ಚರ್ಚಾ ಸಭೆಯೊಂದನ್ನು ಆಯೋಜಿಸಲಾಗಿತ್ತು. ಈ ಪೈಕಿ ವಿವೇಕ್‌ ರಾಮಸ್ವಾಮಿಯೂ ಇದ್ದರು. ಈ ವೇಳೆ ನಿಕ್ಕಿ ಹ್ಯಾಲೆ, ರಾಮಸ್ವಾಮಿ ವಿದೇಶಾಂಗ ವಿಚಾರದಲ್ಲಿ ಜ್ಞಾನವಿಲ್ಲ, ಅಲ್ಲದೇ ಅವರು ರಷ್ಯಾ ಪಕ್ಷಪಾತಿ ಎಂದು ಆರೋಪಿಸಿದರು. ಕೆಲವರಂತೂ ರಾಮಸ್ವಾಮಿ ಭಾಷಣಗಳು ಚಾಟ್‌ ಜಿಪಿಟಿಯ ನಕಲುಗಳು ಅವುಗಳನ್ನು ನಂಬಿ, ದೇಶ ನಡೆಸಲು ಸಾಧ್ಯವೂ ಇಲ್ಲ ಎಂದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ವಿವೇಕ್‌, ನನ್ನನ್ನು ಈ ದೇಶ ಸ್ವೀಕರಿಸಲು ಒಪ್ಪಿದೆ. ಕಾರಣ, ಈ ವೇದಿಕೆಯಲ್ಲಿ ದುಡ್ಡಿಗೆ ಮಾರಾಟವಾಗದ, ಕೊಂಡುಕೊಳ್ಳಲು ಸಾಧ್ಯವೂ ಇಲ್ಲದ ವ್ಯಕ್ತಿ ನಾನೊಬ್ಬನೇ ಎಂದು ಚಾಟಿ ಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next