Advertisement

Nikhil Kumarswamy: ಸೋತ ನಿಖಿಲ್‌ಗೆ ಜಿಲ್ಲೆಯ ಪಕ್ಷ ಸಂಘಟನೆ ಹೊಣೆ

07:52 PM Nov 28, 2024 | Team Udayavani |

ರಾಮನಗರ: ಚನ್ನಪಟ್ಟಣ ಉಪಚುನಾವಣೆ ಫಲಿತಾಂಶದ ಬಳಿಕ ಜಿಲ್ಲೆಯಲ್ಲಿ ಜೆಡಿಎಸ್‌ ನಡೆ ಮುಂದೇನು ಎಂಬ ಚರ್ಚೆ ಆರಂಭವಾಗಿದೆ.

Advertisement

ಕಳೆ ದೆರಡು ದಶಗಳಿಂದ ಜಿಲ್ಲೆಯಲ್ಲಿ ಪ್ರಾಬಲ್ಯ ಉಳಿಸಿಕೊಂಡು ಬಂದ ಎಚ್‌.ಡಿ. ಕುಮಾರಸ್ವಾಮಿ ಇಡೀ ಜಿಲ್ಲೆಯಲ್ಲಿ ಅಸ್ತಿತ್ವ ಕಳೆದುಕೊಂಡಿದ್ದಾರೆ. ಚನ್ನಪಟ್ಟಣ ರಾಮನಗರ ಎರಡೂ ಕ್ಷೇತ್ರಗಳಲ್ಲಿ ಪರಾಜಿತರಾಗಿರುವ ನಿಖಿಲ್‌ಕುಮಾರಸ್ವಾಮಿ ಜಿಲ್ಲೆಯಲ್ಲಿ ಪಕ್ಷ ಮುನ್ನಡೆಸುವ ನೇತೃತ್ವ ವಹಿಸುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ.

ಹೌದು.. ರಾಮನಗರ ಜಿಲ್ಲೆ 2007ರಲ್ಲಿ ರಚನೆಯಾಯಿತಾದರೂ, ಈ ಭಾಗದಲ್ಲಿ ಎಚ್‌.ಡಿ.ದೇವೇಗೌಡರ ಕುಟುಂಬದ ಒಡನಾಟ 1973ರಿಂದಲೇ ಇದೆ. ಬಿ.ಜೆ. ಲಿಂಗೇಗೌಡರ ಕಾಲದಿಂದಲೂ ಜಿಲ್ಲೆಯ ಹಲವು ರಾಜಕೀಯ ಚಟುವಟಿಕೆಗಳಿಗೆ ಸಾಕ್ಷಿಯಾಗಿದ್ದ ದೇವೇಗೌಡರು ಈ ಭಾಗದಲ್ಲಿ ನೇರವಾಗಿ ಪ್ರವೇಶ ಮಾಡಿದ್ದು 1985ರಲ್ಲಿ ಸಾತನೂರು ಉಪಚುನಾವಣೆಯ ಮೂಲಕ.

2004 ರಿಂದ ರಾಮನಗರ ಜಿಲ್ಲೆಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಂಡು ಬಂದಿದ್ದು, ಕನಕಪುರವನ್ನು ಹೊರತುಪಡಿಸಿದರೆ ಉಳಿದ 3 ಕ್ಷೇತ್ರದಲ್ಲಿ ತಾವು ಹಾಗೂ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿದ್ದಾರೆ. ರಾಮನಗರ- ಚನ್ನಪಟ್ಟಣ ನಮ್ಮ ಎರಡೂ ಕಣ್ಣು ಎಂದು ಹೇಳುತ್ತಿದ್ದ ಕುಮಾರಸ್ವಾಮಿ ಅವರಿಗೆ ಇದೀಗ ಎರಡೂ ಕಣ್ಣಿಗೂ ಪೆಟ್ಟು ಬಿದ್ದಿದ್ದು, ಜಿಲ್ಲೆಯಲ್ಲಿ ಪಕ್ಷ ಸಂಘಟನೆಯನ್ನು ಸರಿಪಡಿಸಿಯಾರೇ ಎಂಬ ಪ್ರಶ್ನೆ ಎಲ್ಲರನ್ನು ಕಾಡುವಂತಾಗಿದೆ.

ಪಕ್ಷ ಸಂಘಟನೆಯ ಜವಾಬ್ದಾರಿ: ಸತತ ಮೂರು ಸೋಲಿನ ಸಮಾಧಾನವನ್ನು ಪಟ್ಟುಕೊಳ್ಳುವುದು ಒಂದೆಡೆಯಾದರೆ, ಪಕ್ಷದ ಭದ್ರಕೋಟೆ ಎನಿಸಿದ್ದ ರಾಮನಗರ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಪಕ್ಷ ಸಂಘಟನೆ ಗುರುತರ ಜವಾಬ್ದಾರಿ ನಿಖಿಲ್‌ ಕುಮಾರಸ್ವಾಮಿ ಅವರ ಮುಂದಿದೆ. ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಆಡಳಿತದ ನಡುವೆ ಪಕ್ಷದ ಕಾರ್ಯಕರ್ತರನ್ನು ಸಂಘಟಿಸಲು ಕಣಕ್ಕಿಳಿಯಬೇಕಿದ್ದು, ಸೋಲಿನ ಆಘಾತವನ್ನು ಸಾವರಿಸಿಕೊಳ್ಳಲು ಅವರಿಗೆ ಅವಕಾಶವಿಲ್ಲದೆ ಪಕ್ಷ ಸಂಘಟನೆಗೆ ಮುಂದಾಗಬೇಕಿದೆ.

Advertisement

ಪ್ರಸ್ತುತ ಸನ್ನಿವೇಶದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ದೆಹಲಿ ರಾಜ ಕಾರಣದಲ್ಲಿ ಬ್ಯುಜಿಯಾಗಿದ್ದರೆ, ದೇವೇಗೌಡರಿಗೆ ವಯಸ್ಸಾಗಿರುವ ಕಾರಣ ಮೊದಲಿನಂತೆ ಪಕ್ಷ ಸಂಘಟನೆ ಮಾಡುವುದು ಸುಲಭದ ಮಾತಲ್ಲ. ಇನ್ನು ಎಚ್‌.ಡಿ.ರೇವಣ್ಣ ಅವರದೇ ಕುಟುಂಬದ ಸಮಸ್ಯೆಯಿಂದಾಗಿ ರಾಜಕಾರಣದಲ್ಲಿ ಸಕ್ರಿಯವಾಗಲು ಸಾಧ್ಯವಾಗು ತ್ತಿಲ್ಲ. ಇದೀಗ ಜೆಡಿಎಸ್‌ ಸಂಘಟನೆಗೆ ತೊಡಗಿಸಿಕೊಳ್ಳ ಬೇಕಾದ ಜವಾಬ್ದಾರಿ ನಿಖಿಲ್‌ ಮೇಲಿದ್ದು, ಈ ಜವಾಬ್ದಾರಿಯನ್ನು ಅವರು ಹೇಗೆ ನಿಬಾಯಿಸುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿ ನಿಂತಿದೆ.

ಜಿಲ್ಲೆಯಲ್ಲಿ 20 ವರ್ಷಗಳ ಬಳಿಕ ಅಸ್ಥಿತ್ವ ಕಳೆದುಕೊಂಡಿರುವ ಜೆಡಿಎಸ್‌ ಪಾಳಯವನ್ನು ಸಂಘಟಿಸುವಲ್ಲಿ ನಿಖಿಲ್‌ ಕುಮಾರಸ್ವಾಮಿ ಸಫಲರಾಗುವರೇ ಎಂಬುದರ ಮೇಲೆ ಜಿಲ್ಲೆಯ ಮುಂದಿನ ರಾಜಕೀಯ ಚಿತ್ರಣ ನಿರ್ಧರಿತವಾಗಲಿದೆ.

99ರ ಸೋಲಿನ ಬಳಿಕ ಎಚ್‌ಡಿಕೆ ಸತತ ಗೆಲುವು:  1999ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರ, ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಸೋತಿದ್ದನ್ನು ಹೊರತುಪಡಿಸಿದರೆ, ಎಚ್‌.ಡಿ.ಕುಮಾರಸ್ವಾಮಿ ಜಿಲ್ಲೆಯಲ್ಲಿ ಸೋಲನ್ನೇ ಕಂಡಿಲ್ಲ. 2004ರಲ್ಲಿ ರಾಮನಗರದಿಂದ ಆಯ್ಕೆಯಾದ ಕುಮಾರಸ್ವಾಮಿ ಮತ್ತೆ 2008,2013,2018 ರಲ್ಲಿ ಆಯ್ಕೆಯಾದರು. ಈ ಮಧ್ಯೆ 2009ರಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದರಾಗಿ ಆಯ್ಕೆಯಾದಾಗ ತಮ್ಮ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದ ಕೆ.ರಾಜು ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಸಫಲರಾದರು. 2019 ಮತ್ತು 2023ರಲ್ಲಿ ಚನ್ನಪಟ್ಟಣದಲ್ಲಿ ನಿಂತು ಗೆಲುವು ಸಾಧಿಸಿದರು.

ಸೋಲು ಗೆಲುವು ಹೊಸದಲ್ಲ ದೇವೇಗೌಡರ ಕುಟಂಬಕ್ಕೆ ರಾಮನಗರ ಜಿಲ್ಲೆಯಲ್ಲಿ ಸೋಲು ಗೆಲುವು ಹೊಸದಲ್ಲ. 1985 ರಲ್ಲಿ ಸಾತನೂರು ಕ್ಷೇತ್ರದಿಂದ ಸ್ಪರ್ಧೆಮಾಡಿದ್ದ ದೇವೇಗೌಡರು ಡಿ.ಕೆ.ಶಿವಕುಮಾರ್‌ ವಿರುದ್ಧ ಗೆಲುವು ಸಾಧಿಸಿದ್ದರು. ಹೊಳೆ ನರಸೀಪುರ, ಸಾತನೂರು ಎರಡೂ ಕಡೆ ಗೆಲುವು ಸಾಧಿಸಿದ್ದ ಕಾರಣ ಸಾತನೂರು ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಹೊಳೆನರ ಸೀಪುರ ಉಳಿಸಿಕೊಂಡರು. ಮತ್ತೆ 1989ರಲ್ಲಿ ಕನಕಪುರದಿಂದ ಸ್ಪರ್ಧೆಮಾಡಿದ್ದ ದೇವೇಗೌಡರು 3ನೇ ಸ್ಥಾನಕ್ಕೆ

ತೃಪ್ತಿ ಪಟ್ಟು ಕೊಳ್ಳುವಂತಾಯಿತು. ಮತ್ತೆ 2002ರ ಕನಕಪುರ ಲೋಕಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ದೇವೇಗೌಡರು, ಮತ್ತೆ 2004ರಲ್ಲಿ ಕನಕಪುರ ಲೋಕಸಭಾ ಉಪಚುನಾವಣೆ ಯಲ್ಲಿ 3ನೇ ಸ್ಥಾನ ಪಡೆದರು. 1996ರಲ್ಲಿ ಕನಕಪುರ ಲೋಕ ಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಕುಮಾರಸ್ವಾಮಿ ಮತ್ತೆ 1997, 1999ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 3ನೇ ಸ್ಥಾನ ಪಡೆದರು. ಇದೇ ಚುನಾವಣೆಯಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಲ್ಲೂ ಪರಾಜಿತರಾದರು. ಜಿಲ್ಲೆಯಲ್ಲಿ ಮತ್ತೆ ಪ್ರಾಬಲ್ಯ ಸ್ಥಾಪಿಸಿದ್ದು 2004ರಲ್ಲಿ. ಇನ್ನು 2013ರಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧೆಮಾಡಿದ್ದ ಅನಿತಾ ಕುಮಾರಸ್ವಾಮಿ ಪರಾಜಿತರಾದರು. ಬಳಿಕ ನಡೆದ ಬೆಂ. ಗ್ರಾಮಾಂತರ ಲೋಕಸಭಾ ಉಪಚುನಾವಣೆಯಲ್ಲೂ ಪರಾಜಿತರಾ ದರು. ಮತ್ತೆ 2018ರಲ್ಲಿ ರಾಮನಗರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದರು.

ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next