Advertisement
ಕಳೆ ದೆರಡು ದಶಗಳಿಂದ ಜಿಲ್ಲೆಯಲ್ಲಿ ಪ್ರಾಬಲ್ಯ ಉಳಿಸಿಕೊಂಡು ಬಂದ ಎಚ್.ಡಿ. ಕುಮಾರಸ್ವಾಮಿ ಇಡೀ ಜಿಲ್ಲೆಯಲ್ಲಿ ಅಸ್ತಿತ್ವ ಕಳೆದುಕೊಂಡಿದ್ದಾರೆ. ಚನ್ನಪಟ್ಟಣ ರಾಮನಗರ ಎರಡೂ ಕ್ಷೇತ್ರಗಳಲ್ಲಿ ಪರಾಜಿತರಾಗಿರುವ ನಿಖಿಲ್ಕುಮಾರಸ್ವಾಮಿ ಜಿಲ್ಲೆಯಲ್ಲಿ ಪಕ್ಷ ಮುನ್ನಡೆಸುವ ನೇತೃತ್ವ ವಹಿಸುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ.
Related Articles
Advertisement
ಪ್ರಸ್ತುತ ಸನ್ನಿವೇಶದಲ್ಲಿ ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ದೆಹಲಿ ರಾಜ ಕಾರಣದಲ್ಲಿ ಬ್ಯುಜಿಯಾಗಿದ್ದರೆ, ದೇವೇಗೌಡರಿಗೆ ವಯಸ್ಸಾಗಿರುವ ಕಾರಣ ಮೊದಲಿನಂತೆ ಪಕ್ಷ ಸಂಘಟನೆ ಮಾಡುವುದು ಸುಲಭದ ಮಾತಲ್ಲ. ಇನ್ನು ಎಚ್.ಡಿ.ರೇವಣ್ಣ ಅವರದೇ ಕುಟುಂಬದ ಸಮಸ್ಯೆಯಿಂದಾಗಿ ರಾಜಕಾರಣದಲ್ಲಿ ಸಕ್ರಿಯವಾಗಲು ಸಾಧ್ಯವಾಗು ತ್ತಿಲ್ಲ. ಇದೀಗ ಜೆಡಿಎಸ್ ಸಂಘಟನೆಗೆ ತೊಡಗಿಸಿಕೊಳ್ಳ ಬೇಕಾದ ಜವಾಬ್ದಾರಿ ನಿಖಿಲ್ ಮೇಲಿದ್ದು, ಈ ಜವಾಬ್ದಾರಿಯನ್ನು ಅವರು ಹೇಗೆ ನಿಬಾಯಿಸುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿ ನಿಂತಿದೆ.
ಜಿಲ್ಲೆಯಲ್ಲಿ 20 ವರ್ಷಗಳ ಬಳಿಕ ಅಸ್ಥಿತ್ವ ಕಳೆದುಕೊಂಡಿರುವ ಜೆಡಿಎಸ್ ಪಾಳಯವನ್ನು ಸಂಘಟಿಸುವಲ್ಲಿ ನಿಖಿಲ್ ಕುಮಾರಸ್ವಾಮಿ ಸಫಲರಾಗುವರೇ ಎಂಬುದರ ಮೇಲೆ ಜಿಲ್ಲೆಯ ಮುಂದಿನ ರಾಜಕೀಯ ಚಿತ್ರಣ ನಿರ್ಧರಿತವಾಗಲಿದೆ.
99ರ ಸೋಲಿನ ಬಳಿಕ ಎಚ್ಡಿಕೆ ಸತತ ಗೆಲುವು: 1999ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರ, ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಸೋತಿದ್ದನ್ನು ಹೊರತುಪಡಿಸಿದರೆ, ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಯಲ್ಲಿ ಸೋಲನ್ನೇ ಕಂಡಿಲ್ಲ. 2004ರಲ್ಲಿ ರಾಮನಗರದಿಂದ ಆಯ್ಕೆಯಾದ ಕುಮಾರಸ್ವಾಮಿ ಮತ್ತೆ 2008,2013,2018 ರಲ್ಲಿ ಆಯ್ಕೆಯಾದರು. ಈ ಮಧ್ಯೆ 2009ರಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದರಾಗಿ ಆಯ್ಕೆಯಾದಾಗ ತಮ್ಮ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದ ಕೆ.ರಾಜು ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಸಫಲರಾದರು. 2019 ಮತ್ತು 2023ರಲ್ಲಿ ಚನ್ನಪಟ್ಟಣದಲ್ಲಿ ನಿಂತು ಗೆಲುವು ಸಾಧಿಸಿದರು.
ಸೋಲು ಗೆಲುವು ಹೊಸದಲ್ಲ ದೇವೇಗೌಡರ ಕುಟಂಬಕ್ಕೆ ರಾಮನಗರ ಜಿಲ್ಲೆಯಲ್ಲಿ ಸೋಲು ಗೆಲುವು ಹೊಸದಲ್ಲ. 1985 ರಲ್ಲಿ ಸಾತನೂರು ಕ್ಷೇತ್ರದಿಂದ ಸ್ಪರ್ಧೆಮಾಡಿದ್ದ ದೇವೇಗೌಡರು ಡಿ.ಕೆ.ಶಿವಕುಮಾರ್ ವಿರುದ್ಧ ಗೆಲುವು ಸಾಧಿಸಿದ್ದರು. ಹೊಳೆ ನರಸೀಪುರ, ಸಾತನೂರು ಎರಡೂ ಕಡೆ ಗೆಲುವು ಸಾಧಿಸಿದ್ದ ಕಾರಣ ಸಾತನೂರು ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಹೊಳೆನರ ಸೀಪುರ ಉಳಿಸಿಕೊಂಡರು. ಮತ್ತೆ 1989ರಲ್ಲಿ ಕನಕಪುರದಿಂದ ಸ್ಪರ್ಧೆಮಾಡಿದ್ದ ದೇವೇಗೌಡರು 3ನೇ ಸ್ಥಾನಕ್ಕೆ
ತೃಪ್ತಿ ಪಟ್ಟು ಕೊಳ್ಳುವಂತಾಯಿತು. ಮತ್ತೆ 2002ರ ಕನಕಪುರ ಲೋಕಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ದೇವೇಗೌಡರು, ಮತ್ತೆ 2004ರಲ್ಲಿ ಕನಕಪುರ ಲೋಕಸಭಾ ಉಪಚುನಾವಣೆ ಯಲ್ಲಿ 3ನೇ ಸ್ಥಾನ ಪಡೆದರು. 1996ರಲ್ಲಿ ಕನಕಪುರ ಲೋಕ ಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಕುಮಾರಸ್ವಾಮಿ ಮತ್ತೆ 1997, 1999ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 3ನೇ ಸ್ಥಾನ ಪಡೆದರು. ಇದೇ ಚುನಾವಣೆಯಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಲ್ಲೂ ಪರಾಜಿತರಾದರು. ಜಿಲ್ಲೆಯಲ್ಲಿ ಮತ್ತೆ ಪ್ರಾಬಲ್ಯ ಸ್ಥಾಪಿಸಿದ್ದು 2004ರಲ್ಲಿ. ಇನ್ನು 2013ರಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧೆಮಾಡಿದ್ದ ಅನಿತಾ ಕುಮಾರಸ್ವಾಮಿ ಪರಾಜಿತರಾದರು. ಬಳಿಕ ನಡೆದ ಬೆಂ. ಗ್ರಾಮಾಂತರ ಲೋಕಸಭಾ ಉಪಚುನಾವಣೆಯಲ್ಲೂ ಪರಾಜಿತರಾ ದರು. ಮತ್ತೆ 2018ರಲ್ಲಿ ರಾಮನಗರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದರು.
–ಸು.ನಾ.ನಂದಕುಮಾರ್