Advertisement

ನಿಖೀಲ್ ಹುಟ್ಟುಹಬ್ಬಕ್ಕೆ ‘ಯದುವೀರ’ ಫಸ್ಟ್ ಲುಕ್ ಬಿಡುಗಡೆ

12:24 PM Jan 22, 2022 | Team Udayavani |

ಇಂದು ನಟ ನಿಖೀಲ್ ಕುಮಾರ್ ಅವರ ಹುಟ್ಟುಹಬ್ಬ.  ನಿಖೀಲ್ ಮುಂದಿನ ಚಿತ್ರ ಯದುವೀರ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರತಂಡ ಹುಟ್ಟುಹಬ್ಬದ ಶುಭ ಹಾರೈಸಿದೆ.

Advertisement

ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿರುವ ಯದುವೀರ ಚಿತ್ರವನ್ನು ಮಂಜು ಅಥರ್ವ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ನವೀನ್ ಕುಮಾರ್ ಕ್ಯಾಮರಾ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿದೆ.

ಇದನ್ನೂ ಓದಿ:ವೀಕೆಂಡ್‌ ಲಾಕ್‌ ಡೌನ್‌ ಗೆ ಮುಕ್ತಿ: ಹೊಸಬರ ಸಿನ್ಮಾ ರಿಲೀಸ್‌ ಗೆ ಇದು ಸಕಾಲ

ಈಗಾಗಲೇ ‘ಸಖತ್’ ಮತ್ತು ‘ಬೈ ಟು ಲವ್’ ಚಿತ್ರ ನಿರ್ಮಾಣ ಮಾಡಿರುವ ಕೆವಿಎನ್ ಪ್ರೊಡಕ್ಷನ್ ಮೂರನೇ ಚಿತ್ರವಾಗಿ ‘ಯದುವೀರ’ ಗೆ ಬಂಡವಾಳ ಹೂಡಿದೆ. ತಮಿಳಿನ ಕದಿರನ್, ಮಫ್ತಿ ನರ್ತನ್ ಅವರೊಂದಿಗೆ ಕೆಲಸ ಮಾಡಿರುವ ಮಂಜು ಅಥರ್ವ ಅವರು ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Koo App

ಬರ್ತ್ ಡೇ ಆಚರಣೆಯಿಲ್ಲ: ನಿಖೀಲ್ ಕುಮಾರ್ ಅವರು ಇಂದು ಬರ್ತ್ ಡೇ ಆಚರಣೆ ಮಾಡಿಕೊಳ್ಳುತ್ತಿಲ್ಲ. ಈ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿರುವ ನಿಖೀಲ್‌, “ಕೋವಿಡ್‌ ಸಂಕಷ್ಟದ ಸಮಯದಲ್ಲಿ ಅದ್ಧೂರಿ ಹುಟ್ಟುಹಬ್ಬದ ಆಚರಣೆಗೆ ನನ್ನ ಮನಸ್ಸು ಒಪ್ಪುತ್ತಿಲ್ಲ. ಹಾಗಾಗಿ ಈ ವರ್ಷ ನಾನು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ. ಅಭಿಮಾನಿಗಳು, ಕಾರ್ಯಕರ್ತರು ಕೋವಿಡ್‌ ಸಂಕಷ್ಟದಲ್ಲಿರುವವರಿಗೆ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ತಾವಿದ್ದಲ್ಲಿಂದಲೇ ನನಗೆ ಹರಸಿ. ಒಂದು ಅರ್ಥಪೂರ್ಣ ಆಚರಣೆಗೆ ಕೈಜೋಡಿಸಿ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next