Advertisement
ರಾಮನಗರ ಜಿಲ್ಲೆ ಮಾಗಡಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನಿಖೀಲ್ ಕುಮಾರಸ್ವಾಮಿ ಎಂದಿದೆ. ಆದರೆ, ಚುನಾವಣಾ ಪ್ರಮಾಣಪತ್ರದಲ್ಲಿ ಅವರ ಹೆಸರು ಕೆ.ನಿಖೀಲ್ ಎಂದು ನಮೂದಿಸಲಾಗಿದೆ. ಆದರೆ, ಇವರ ಹೆಸರು ನಿಖೀಲ್ ಕುಮಾರಸ್ವಾಮಿ ಎಂದು ಸುಳ್ಳು ಹೇಳಿದ್ದಾರೆ. ಮತದಾರರ ಪಟ್ಟಿಯಲ್ಲಿರುವ ಹೆಸರನ್ನು ಪ್ರಮಾಣಪತ್ರದಲ್ಲಿ ಮರೆಮಾಚಿದ್ದು, ಇಲ್ಲದ ಹೆಸರನ್ನು ಇದೆ ಎಂದು ಹೇಳಿದ್ದಾರೆ. ಆದ ಕಾರಣ ಕೆ.ನಿಖೀಲ್ ಅವರನ್ನು ಚುನಾವಣಾ ಉಮೇದುವಾರಿಕೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಮಂಡ್ಯ: ನಿಖೀಲ್ ನಾಮಪತ್ರ ಸಲ್ಲಿಕೆ ವಿವಾದ ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುವುದರ ಜತೆಗೆ ಹೊಸ ಹೊಸ ಸಂಗತಿಗಳೂ ಬೆಳಕಿಗೆ ಬರಲಾರಂಭಿಸಿವೆ. ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿ ನೀಡಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಆರೋಪಿಸಿರುವುದಲ್ಲದೆ, ಚುನಾವಣಾ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿದ್ದಾರೆ. ಮೈ ರೀಡ್ ಮಾರ್ಕೆಟಿಂಗ್‌ನಿಂದ 50 ಲಕ್ಷ ರೂ. ಸಾಲ ಪಡೆದಿರುವ ಬಗ್ಗೆ ಕೆ.ನಿಖೀಲ್ ಪ್ರಮಾಣಪತ್ರದಲ್ಲಿ ಉಲ್ಲೇಖೀಸಿದ್ದು, ಆ ಹೆಸರಿನ ಕಂಪನಿಯೇ ಇಲ್ಲ ಎಂದು ಅಬ್ರಾಹಂ ಆರೋಪಿಸಿದ್ದಾರೆ. ಇನ್ನು ಫಿಜ್ಜಾ ಡೆವಲಪರ್ಸ್‌ನಿಂಧ 11 ಕೋಟಿ ರೂ. ಅಡ್ವಾನ್ಸ್ ಪಡೆದಿರುವುದಾಗಿ ಹೇಳಿದ್ದಾರೆ. ಯಾವ ಭೂಮಿಯನ್ನು ಪರಭಾರೆ ಮಾಡಲು ಮುಂಗಡ ಹಣ ಪಡೆದಿದ್ದಾರೆ. ಆ ಕಂಪನಿಯ ಅಧಿಕೃತ ಬಂಡವಾಳವೇ ಕೇವಲ 10 ಕೋಟಿ ರೂ. ಅಲ್ಲದೆ, ಕಂಪನಿಯ ನಗದು ವಹಿವಾಟು ಕೇವಲ 8.50 ಕೋಟಿ ರೂ. ಎಂದು ತಿಳಿಸಿದ್ದಾರೆ. ಕೆ.ನಿಖೀಲ್ ನಾಮಪತ್ರದಲ್ಲಿ 2017ರ ಆದಾಯ ತೆರಿಗೆ ವಿವರ ಸಲ್ಲಿಸಿದ್ದಾರೆಯೇ ವಿನಃ ಅಲ್ಲಿಂದ ಇಲ್ಲಿಯವರೆಗೂ ಆದಾಯ ತೆರಿಗೆ ಪಾವತಿಸಿರುವ ವಿವರ ಸಲ್ಲಿಸಿಲ್ಲ ಎಂದು ಆರೋಪಿಸಿದ್ದಾರೆ.
Related Articles
Advertisement
ಇಬ್ಬರು ವಿಡಿಯೋಗ್ರಾಫರ್ ವಿರುದ್ಧ ಎಫ್ಐಆರ್ಮಂಡ್ಯ: ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಪ್ರದರ್ಶಿಸಿದ ಆರೋಪದ ಮೇಲೆ ಇಬ್ಬರು ವಿಡಿಯೋಗ್ರಾಫರ್‌ಗಳ ವಿರುದ್ಧ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಧುಚಂದ್ರ ಹಾಗೂ ರಾಮಕೃಷ್ಣ ಅವರ ವಿರುದ್ಧ ಚುನಾವಣಾಧಿಕಾರಿ ನೀಡಿದ ದೂರು ಆಧರಿಸಿ ಪೊಲೀಸರು ಐಪಿಸಿ ಸೆಕ್ಷನ್ 406, 420ರ ಅಡಿ ಪ್ರಕರಣ ದಾಖಲಿಸಲಾಗಿದೆ. ನಾಮಪತ್ರ ಪರಿಶೀಲನೆ ವೇಳೆ ವಿಡಿಯೋ ಚಿತ್ರೀಕರಣ ಮಾಡುವಲ್ಲಿ ಕರ್ತವ್ಯಲೋಪ ತೋರಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ. ಪವರ್ ಕಟ್- ತೀವ್ರಗೊಂಡ ಚುನಾವಣಾಧಿಕಾರಿ ತನಿಖೆ: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ನಾಮಪತ್ರ ಸಲ್ಲಿಸುವ ದಿನ ವಿದ್ಯುತ್ ಕಡಿತಗೊಳಿಸಿರುವ ಬಗ್ಗೆ ಚುನಾವಣಾಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಸೆಸ್ಕ್ ಅಧೀಕ್ಷಕ ಎಂಜಿನಿಯರ್ ಎನ್.ಶ್ರೀನಿವಾಸ ಮೂರ್ತಿ ನೇತೃತ್ವದಲ್ಲಿ ಚುನಾವಣಾಧಿಕಾರಿಗಳು ಎಂಆರ್‌ಐ (ಮೀಟರ್ ರೀಡಿಂಗ್) ಮೆಷಿನ್ ಮೂಲಕ ನಗರದಲ್ಲಿರುವ ಮೂರು ಸಬ್‌ಸ್ಟೇಷನ್‌ಗಳಲ್ಲೂ ವಿದ್ಯುತ್ ವಿತರಣೆ ಹಾಗೂ ಕಡಿತ ಸಂಬಂಧ ಡೇಟಾ ಸಂಗ್ರಹಿಸುತ್ತಿದ್ದಾರೆ.