Advertisement

ಪ್ರಾದೇಶಿಕ ಪಕ್ಷದಿಂದ ಕನ್ನಡ ಉಳಿವು: ನಿಖಿಲ್‌ ಕುಮಾರಸ್ವಾಮಿ

03:06 PM Nov 16, 2021 | Team Udayavani |

ಚಿಕ್ಕಬಳ್ಳಾಪುರ: ಕನ್ನಡ ಭಾಷೆ, ನೆಲ, ಜಲದ ಉಳಿವಿಗಾಗಿ ಪ್ರಾದೇಶಿಕ ಪಕ್ಷ ಸದೃಢವಾಗಬೇಕೆಂದು ನಟ, ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

Advertisement

ನಗರದ ಹೊರವಲಯದ ನಾಗಾರ್ಜುನ್‌ ಎಂಜಿನಿಯರಿಂಗ್‌ಕಾಲೇಜಿನಲ್ಲಿಆಯೋಜಿಸಿದ್ದಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡಿಗರಿಗೆ ಉದ್ಯೋಗ, ಸ್ಥಳೀಯ ಸಮಸ್ಯೆಗಳನ್ನು ಇತ್ಯರ್ಥ ಮಾಡುವ ವಿಚಾರದಲ್ಲಿ ಪ್ರಾದೇಶಿಕ ಪಕ್ಷ ಬಲಿಷ್ಠಗೊಳಿಸಬೇಕೆಂದು ಮನವಿ ಮಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಕಷ್ಟಪಟ್ಟು ಶಿಕ್ಷಣ ನೀಡುವ ಪೋಷಕರ ಮನಸ್ಸಿಗೆ ನೋವುಂಟು ಮಾಡುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬಾರದೆಂದು ಮನವಿ ಮಾಡಿ, ತಂದೆ ಮತ್ತು ತಾಯಿ ಕೋಪದಿಂದ ಏನಾದರೂ ಬೈದರೆ ಮನಸ್ಸಿನಲ್ಲಿ ದುಃಖ ಪಡುತ್ತಾರೆ. ಆದ್ದರಿಂದ ಪೋಷಕರ ಹೆಸರಿಗೆ ಕೀರ್ತಿ ತರುವಂತಹ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

ರಾಜ್ಯದಲ್ಲಿ ಹುಟ್ಟಿ ಬರಲಿ: ಕೊರೊನಾ ಸಂಕಷ್ಟದ ಅವಧಿಯಲ್ಲಿ, ಬೇರೆ ಸಂದರ್ಭಗಳಲ್ಲಿ ನಟ ಪುನೀತ್‌ ರಾಜ್‌ ಕುಮಾರ್‌ ಸಲ್ಲಿಸಿರುವ ಜನಸೇವೆ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಅವರು ನಮ್ಮನ್ನು ಅಗಲಿದ್ದಾರೆ ಎಂದು ನಂಬಲು ಸಾಧ್ಯವಿಲ್ಲ. ಅವರು ನಟಿಸಿರುವ ಪ್ರತಿ ಸಿನಿಮಾದಲ್ಲಿ ಸಮಾಜಕ್ಕೆ ಒಂದು ಸಂದೇಶ ಕೊಟ್ಟಿದ್ದಾರೆ. ನಾನು ಸಹ ಅವರ ಅಪ್ಪಟ ಅಭಿಮಾನಿ. ಅಪ್ಪು ಸಾರ್‌ ಮತ್ತೂಮ್ಮೆ ನಮ್ಮ ರಾಜ್ಯದಲ್ಲಿ ಹುಟ್ಟಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದರು.

ಡಿಸೆಂಬರ್‌ನಲ್ಲಿ ರೈಡರ್‌ ಚಿತ್ರ ಬಿಡಗಡೆ: ನಾನು ನಟಿಸಿರುವ ರೈಡರ್‌ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಮಹಿಳೆಯರು, ಮಕ್ಕಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳುಕುಳಿತು ನೋಡುವ ಚಿತ್ರ ಎಂದರು.

Advertisement

 ನಟ ಪುನೀತ್‌ ಅವರಿಗೆ ಶ್ರದ್ಧಾಂಜಲಿ: ಈ ಸಂದರ್ಭದಲ್ಲಿ ಮೌನಾಚರಣೆ ಮೂಲಕ ನಟ ಪುನೀತ್‌ ರಾಜ್‌ಕುಮಾರ್‌ ಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಒಂದೆರಡು ಸ್ಟೆಪ್‌ ಹಾಕಿ ನಟ ನಿಖೀಲ್‌ ವಿದ್ಯಾರ್ಥಿಗಳನ್ನು ರಂಜಿಸಿದರು.

ಕಾಲೇಜು ನಿರ್ದೇಶಕ ಎಸ್‌.ಜಿ.ಗೋಪಾಲಕೃಷ್ಣ, ಪ್ರಾಂಶುಪಾಲ ಜಿತೇಂದ್ರನಾಥ್‌ ಮುಂಗಾರ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಸಹಿತ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next