Advertisement

ಸುಮಲತಾ ಕಣಕ್ಕಿಳಿದರೆ ನಿಖಿಲ್‌ ಸ್ಪರ್ಧೆ ಡೌಟ್

01:49 AM Jan 24, 2019 | |

ಬೆಂಗಳೂರು: ಲೋಕಸಭೆ ಚುನಾವಣೆಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಟ ಅಂಬರೀಷ್‌ ಪತ್ನಿ ಸುಮಲತಾ ಕಣಕ್ಕಿಳಿದರೆ ನಿಖಿಲ್‌ ಕುಮಾರಸ್ವಾಮಿ ಕಣಕ್ಕಿಳಿಯುವುದು ಡೌಟ್.

Advertisement

ಸುಮಲತಾ ಅವರು ಕಾಂಗ್ರೆಸ್‌ ಅಥವಾ ಜೆಡಿಎಸ್‌ನಿಂದ ಕಣಕ್ಕಿಳಿಯಬೇಕು ಎಂಬ ಒತ್ತಾಯ ಇದೆಯಾ ದರೂ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಎರಡೂ ಪಕ್ಷಗಳಿಂದ ಅವರಿಗೆ ಟಿಕೆಟ್ ಸಿಗುವುದು ಕಷ್ಟವಾಗಬ ಹುದು. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಚಿತ್ರರಂಗ ಹಾಗೂ ಜಿಲ್ಲೆಯ ಜನತೆ ಆಗ್ರಹಿಸುತ್ತಿದ್ದಾರೆ. ಹೀಗಾಗಿ, ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಜೆಡಿಎಸ್‌ನಿಂದ ನಿಖಿಲ್‌ ಕುಮಾರಸ್ವಾಮಿಯನ್ನು ನಿಲ್ಲಿಸದಿರಲು ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ನಿಖಿಲ್‌ ಕುಮಾರಸ್ವಾಮಿ ಈಗಾಗಲೇ ಚುನಾವಣಾ ತಯಾರಿ ನಡೆಸುತ್ತಿದ್ದು ಜಿಲ್ಲೆಗೆ ಹಲವಾರು ಬಾರಿ ಭೇಟಿ ನೀಡಿ ಸ್ಥಳೀಯ ಶಾಸಕರ ಜತೆ ಚರ್ಚೆ, ಮತದಾರರ ಜತೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಡಿ ಲೋಕಸಭೆ ಚುನಾವಣೆ ಎದುರಿಸಿದರೆ ಮಂಡ್ಯ ಕ್ಷೇತ್ರವನ್ನು ಸಹಜವಾಗಿ ಜೆಡಿಎಸ್‌ಗೆ ಬಿಟ್ಟು ಕೊಡುವುದು ಖಚಿತ. ಹೀಗಾಗಿ, ನಿಖೀಲ್‌ ಕಣಕ್ಕಿಳಿಯಲು ಆಸಕ್ತರಾಗಿ ದ್ದಾರೆ. ಈ ಬಗ್ಗೆ ತಮ್ಮ ತಂದೆ ಎಚ್.ಡಿ.ಕುಮಾರಸ್ವಾಮಿ ಯವರ ಬಳಿಯೂ ಹೇಳಿಕೊಂಡಿದ್ದಾರೆ. ಪುತ್ರನ ಅಧಿಕೃತ ರಾಜಕೀಯ ‘ರಂಗಪ್ರವೇಶ’ಕ್ಕೆ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿಯ ಗ್ರೀನ್‌ ಸಿಗ್ನಲ್‌ ಸಹ ದೊರೆತಿದೆ. ಪಕ್ಷದ ಅನುಮತಿಯಷ್ಟೇ ಬಾಕಿಯಿದೆ.

ಆದರೆ, ಇದ್ದಕ್ಕಿದ್ದಂತೆ ಸುಮಲತಾ ಹೆಸರು ಲೋಕಸಭೆ ಚುನಾವಣೆಗೆ ಪ್ರಸ್ತಾಪವಾಗುತ್ತಿದ್ದು ಜಿಲ್ಲೆಯ ಜನತೆ ಹಾಗೂ ಚಿತ್ರೋದ್ಯಮವೂ ಇದಕ್ಕೆ ಬೆಂಬಲವಾಗಿ ನಿಂತಿದೆ. ಹೀಗಾಗಿ, ಸುಮಲತಾ ಅವರು ಸ್ಪರ್ಧೆ ಕುರಿತು ಅಂಬರೀಷ್‌ ಅಭಿಮಾನಿಗಳು ಹಾಗೂ ಆಪ್ತರ ಜತೆ ಚರ್ಚೆ ನಡೆಸುತ್ತಿದ್ದಾರೆ. ಒಂದೊಮ್ಮೆ ಸುಮಲತಾ ಅವರು ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದೇ ಆದರೆ ಜೆಡಿಎಸ್‌ ಗೇಮ್‌ ಪ್ಲ್ರಾನ್‌ ಬದಲಾಗ ಲಿದ್ದು, ಜೆಡಿಎಸ್‌ನಿಂದ ಹಾಲಿ ಸಂಸದ ಶಿವರಾಮೇಗೌಡ ಅಥವಾ ಲಕ್ಷ್ಮಿಅಶ್ವಿ‌ನಿಗೌಡ ಅವರು ಕಣಕ್ಕಿಳಿಯ ಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಮಧ್ಯೆ, ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್‌ ರೇವಣ್ಣ ಅವರಿಗೆ ಬಿಟ್ಟು ಕೊಡುವುದಾಗಿ ಘೋಷಿಸಿರುವ ದೇವೇಗೌಡರು, ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಯಸಿದ್ದರು. ಆದರೆ, ನಿಖೀಲ್‌ ಸ್ಪರ್ಧೆಗೆ ಬಯಕೆ ವ್ಯಕ್ತಪಡಿಸಿದ್ದರಿಂದ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ದೇವೇಗೌಡರೇ ಮಂಡ್ಯದಿಂದ ಕಣಕ್ಕಿಳಿಯುವಂತೆ ಪಕ್ಷದಲ್ಲಿ ಒತ್ತಡ ಹೆಚ್ಚಾದರೆ ಆಗ ಸುಮಲತಾ ಅವರು ಯಾವ ನಿಲುವು ತಾಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಏಕೆಂದರೆ, ಹಾಸನದಿಂದ ಪ್ರಜ್ವಲ್‌, ಮಂಡ್ಯದಿಂದ ನಿಖೀಲ್‌ ಕುಮಾರಸ್ವಾಮಿ, ಬೆಂಗಳೂರು ಉತ್ತರ ಕ್ಷೇತ್ರದಿಂದ ದೇವೇಗೌಡರು ಸ್ಪರ್ಧೆ ಮಾಡಿದರೆ ಬೇರೆ ರೀತಿಯ ಸಂದೇಶ ರವಾನೆಯಾಗಬಹುದು. ಹೀಗಾಗಿ, ಹಾಸನದಿಂದ ಪ್ರಜ್ವಲ್‌ ಮಂಡ್ಯದಿಂದ ದೇವೇಗೌಡರು ಸ್ಪರ್ಧೆ ಮಾಡಿದರೆ ಸೂಕ್ತ ಎಂಬ ಮಾತುಗಳೂ ಪಕ್ಷದ ವಲಯದಲ್ಲಿ ಇವೆ.

Advertisement

ಮಂಡ್ಯದಿಂದ ಸ್ಪರ್ಧೆ ಆಸೆ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಹಾಗೂ ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಎಚ್.ಡಿ.ಕುಮಾರಸ್ವಾಮಿಯವರು ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಚನ್ನಪಟ್ಟಣ ಉಳಿಸಿಕೊಂಡಿದ್ದರು. ಆಗ ಎದುರಾದ ಉಪ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ನಿಖೀಲ್‌ರನ್ನು ಕಣಕ್ಕಿಳಿಸಲು ಅನಿತಾ ಕುಮಾರಸ್ವಾಮಿ ಪ್ರಯತ್ನಿಸಿದ್ದರು. ಕುಮಾರಸ್ವಾಮಿಯವರು ಮುಖ್ಯಮಂತ್ರಿ ಯಾಗಿದ್ದಾಗ ಪುತ್ರನ ರಾಜಕೀಯ ಪ್ರವೇಶವಾಗಿ ಶಾಸಕರಾಗಿ ವಿಧಾನಸಭೆ ಪ್ರವೇಶ ಮಾಡಿದರೆ ರಾಜಕೀಯ ನಾಯಕರ ಸಂಪರ್ಕ ಸೇರಿ ಮುಂದಿನ ರಾಜಕೀಯ ಭವಿಷ್ಯಕ್ಕೆ ಒಳ್ಳೆಯದಾಗಬಹುದು ಎಂಬ ಆಲೋಚನೆ ಮಾಡಿದ್ದರು. ಆದರೆ, ನಿಖೀಲ್‌ ನಾನು ಚುನಾವಣೆಗೆ ನಿಲ್ಲುವುದಾದರೆ ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ಲೋಕಸಭೆಗೆ ಹೋಗಬೇಕು ಎಂಬುದು ನನ್ನ ಆಸೆ ಎಂದು ಹೇಳಿಕೊಂಡಿದ್ದರು. ಹೀಗಾಗಿ, ರಾಮನಗರದಿಂದ ಸ್ಪರ್ಧೆಗೆ ಬ್ರೇಕ್‌ ಬಿದ್ದಿತ್ತು.

ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next