Advertisement
ಮಹಿಳೆಯರು ನೈಟಿ, ಪೈಜಾಮ ಮುಂತಾದ ನೈಟ್ ಡ್ರೆಸ್‌ಗಳನ್ನು ತೊಟ್ಟು ಮನೆಯಿಂದ ಹೊರಗೆ ಬರುವುದು ಮುಜುಗರದ ವಿಷಯ ಅಂತ ಪರಿಗಣಿಸುವ ಕಾಲವೊಂದಿತ್ತು. ಕಾಲ ಕಳೆದಂತೆ, ಮಹಿಳೆಯರು ದೇವಸ್ಥಾನಕ್ಕೆ, ಮಾರ್ಕೆಟ್‌ಗೆ, ಮಕ್ಕಳನ್ನು ಸ್ಕೂಲ್ ವ್ಯಾನ್‌ಗೆ ಹತ್ತಿಸೋಕೆ ಬರುವಾಗ, ನೈಟ್ ಡ್ರೆಸ್ ಅನ್ನು ಬಿಂದಾಸಾಗಿ ಧರಿಸತೊಡಗಿದರು. ಆದರೀಗ ನೈಟ್ ಡ್ರೆಸ್‌ನ ವ್ಯಾಪ್ತಿ ಮತ್ತಷ್ಟು ಹೆಚ್ಚಿದೆ. ಮಾಲ್‌ಗೆ, ಥೀಯೇಟರ್‌ಗೆ, ಪಾರ್ಟಿಗೆ, ಅಷ್ಟೇ ಯಾಕೆ? ಆಫೀಸ್‌ಗೂ ನೈಟ್ ಡ್ರೆಸ್ ಹಾಕಿಕೊಂಡು ಹೋಗುವವರಿದ್ದಾರೆ. ಅದೇ ಈಗಿನ ಟ್ರೆಂಡ್.
ಫಾರ್ಮಲ್ಸ… ಎಂದಾಗ ಮೊದಲು ನೆನಪಿಗೆ ಬರುವುದೇ ಸೂಟ್. ಆದರೆ, ಪ್ರತಿ ನಿತ್ಯ ಸೂಟ್ ಧರಿಸಲು ಯಾರಿಗೆ ಇಷ್ಟವಾಗುತ್ತೆ ಹೇಳಿ? ನೋಡಲು ಸೂಟ್‌ನಂತಿರಬೇಕು. ಆದರೆ ಸೂಟ್‌ನಷ್ಟು ಬಿಗಿಯಾಗಿ, ಮೈಗೆ ಅಂಟಿಕೊಳ್ಳಬಾರದು. ಧರಿಸಲು ಆರಾಮದಾಯಕ ಆಗಿರಬೇಕು ಹಾಗೂ ಸ್ಟೈಲಿಶ್ ಕೂಡ ಕಾಣಬೇಕು ಅಂದರೆ ಏನು ಮಾಡೋದು, ನೈಟ್‌ಡ್ರೆಸ್ ಅನ್ನೇ ಸೂಟ್ ಮಾಡೋದು!
Related Articles
Advertisement
ಹೊಸ ಲುಕ್ ನೀಡಿನೈಟ್ ಸೂಟ್ ಜೊತೆಗೆ, ಸೊಂಟಪಟ್ಟಿ, ಬಳೆ, ಸರ, ಕಿವಿಯೋಲೆ, ಸ್ಟೈಲಿಶ್ ಪಾದರಕ್ಷೆಗಳು ಮತ್ತು ಸ್ವಲ್ಪ ಮೇಕ್‌ಅಪ್ ಅಥವಾ ತಂಪು ಕನ್ನಡಕಗಳು ತೊಟ್ಟು ಹೊಸ ಲುಕ್ ನೀಡಿ. ಹೇರ್‌ಸ್ಟೈಲ್ ಕೂಡಾ ಮುಖ್ಯ
ನೈಟ್ ಡ್ರೆಸ್ ಅನ್ನು ಹೊರಗೆ ತೊಟ್ಟು ಓಡಾಡುವುದಾದರೆ, ಹೇರ್ ಸ್ಟೈಲ್ ಕಡೆಗೆ ಗಮನ ಹರಿಸುವುದು ಅತಿ ಮುಖ್ಯ. ಪೋನಿ ಟೈಲ್ (ಜುಟ್ಟು), ಬನ್ (ತುರುಬು) ಕಟ್ಟಿಕೊಳ್ಳಬಹುದು. ಇಲ್ಲವಾದರೆ ತಲೆಕೂದಲನ್ನು ಹಾಗೇ ಬಿಡಬಹುದು. ಆದಷ್ಟು, ಸ್ಟೈಲಿಶ್ ಆದ ಕೇಶ ಶೈಲಿಯೇ ಇದಕ್ಕೆ ಸೂಟ್ ಆಗುವುದು. ಈ ಲುಕ್ ಜೊತೆ ಜಡೆ ಹಾಕಿಕೊಳ್ಳಲು ಯಾರೂ ಇಷ್ಟ ಪಡುವುದಿಲ್ಲ. ಈ ದಿರಿಸಿನ ಜೊತೆಗೆ ಸ್ಲಿಂಗ್ ಬ್ಯಾಗ್‌ನ ಬದಲಿಗೆ ಕ್ಲಚ್ ಬಳಸುವುದರಿಂದ ಎಲ್ಲರ ದೃಷ್ಟಿ ನಿಮ್ಮ ಉಡುಪಿನ ಮೇಲೆ ಇರುತ್ತದೆ. ನೈಟ್ ಡ್ರೆಸ್ ಅನ್ನು ಮನೆಯೊಳಗೆ ಮಾತ್ರ ಧರಿಸಬೇಕು ಎಂಬ ಹಳೆಯ ಸಂಪ್ರದಾಯದಿಂದ ಹೊರಗೆ ಬನ್ನಿ. ಹೊಸ ಟ್ರೆಂಡ್ ಅನ್ನು ನಿಮಗೂ ಕೂಡ ಟ್ರೈ ಮಾಡುವ ಆಸೆ ಇದ್ದರೆ, ಪ್ರಯೋಗ ಮಾಡಲು ಹಿಂಜರಿಯದಿರಿ. ನಿಮ್ಮ ನೆಚ್ಚಿನ ತಾರೆಯರಂತೆ ನೈಟ್ ಡ್ರೆಸ್‌ಗಳನ್ನು ತೊಟ್ಟು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳನ್ನು ಅಪ್‌ಲೋಡ್ ಮಾಡಿ ಫ್ಯಾಷನ್ ಐಕಾನ್ ಆಗಿ! -ನಿಮ್ಮ ನೈಟ್‌ಸೂಟ್ ಆದಷ್ಟು ಟ್ರೆಂಡಿ ಆಗಿರಲಿ. ಇಲ್ಲದಿದ್ದರೆ ಅಭಾಸ ಎನಿಸಬಹುದು.
-ನೈಟ್ ಸೂಟ್ ಅಷ್ಟೇ ಅಲ್ಲ, ಪೈಜಾಮವನ್ನು ಕೂಡಾ ಹೊರಗಡೆ ಧರಿಸಬಹುದು.
-ಹೊಸ ಸ್ಟೈಲ್ ಮಾಡುವಾಗ ಅಗತ್ಯ ಆ್ಯಕ್ಸೆಸರಿಗಳು ಜೊತೆಗಿರಲಿ.
-ಕೇಶ ವಿನ್ಯಾಸ ಸೈಲಿಶ್ ಆಗಿರುವುದು ಅತಿ ಮುಖ್ಯ.
-ಸ್ಲಿಂಗ್ ಬ್ಯಾಗ್ ಬದಲು ಸಣ್ಣ ಕ್ಲಚ್ ಇಟ್ಟುಕೊಳ್ಳಿ.
-ಮೇಕಪ್ ಹಿತಮಿತವಾಗಿರಲಿ.