Advertisement

ವಿಶ್ವ ಈಜು ಸ್ಪರ್ಧೆ ವೇಳೆ ನೈಟ್‌ಕ್ಲಬ್‌ ಬಾಲ್ಕನಿ ಕುಸಿತ; ಇಬ್ಬರ ಸಾವು

11:42 PM Jul 27, 2019 | Sriram |

ಗ್ವಾಂಗ್‌ಝು: ಇಲ್ಲಿ ಸಾಗುತ್ತಿರುವ ವಿಶ್ವ ಈಜು ಚಾಂಪಿಯನ್‌ಶಿಪ್‌ ವೇಳೆ ಸಮೀಪದ ನೈಟ್‌ ಕ್ಲಬ್‌ನ ಬಾಲ್ಕನಿ ಕುಸಿದು ಸ್ಥಳೀಯ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.
ಶನಿವಾರ ಮುಂಜಾನೆ ಈ ಘಟನೆ ಸಂಭವಿಸಿದ್ದು, 8 ಆ್ಯತ್ಲೀಟ್‌ಗಳ ಸಹಿತ 16 ಮಂದಿ ಗಾಯಗೊಂಡಿದ್ದಾರೆ.

Advertisement

ಇಬ್ಬರು ಮೃತಪಟ್ಟಿರುವುದನ್ನು ಗ್ವಾಂಗ್‌ಝೂ ಪೊಲೀಸರು ದೃಢಪಡಿಸಿದ್ದಾರೆ. ಅಮೆರಿಕ, ನ್ಯೂಜಿಲ್ಯಾಂಡ್‌, ನೆದರ್ಲೆಂಡ್ಸ್‌, ಬ್ರಝಿಲ್‌ ಮತ್ತು ಇಟಲಿಯ ಆ್ಯತ್ಲೀಟ್‌ಗಳು ಗಾಯಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next