ಕಾಸರಗೋಡು: ರಾತ್ರಿ ಕಾವ ಲುಗಾರನಾಗಿದ್ದ ಯುವಕ ಈಗ ಐಐಎಂ ರಾಂಚಿಯ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ನೇಮಕಗೊಂಡಿದ್ದಾರೆ. ಅವರು ಫೇಸ್‌ಬುಕ್‌ನಲ್ಲಿ ಹಾಕಿದ್ದ ಪೋಸ್ಟ್ ಒಂದು ವೈರಲ್ ಆಗಿದೆ. ಇವರ ಈ ಪೋಸ್ಟ್‌ಗೆ 37,000ಕ್ಕೂ ಅಧಿಕ ಲೈಕ್‌ಗಳು ಬಂದಿವೆ.
ಐಐಎಂ ರಾಂಚಿಯ ಪ್ರೊಫೆಸರ್ ಆಗಿ ಆಯ್ಕೆಯಾಗಿರುವ ಕೇರಳದ ಕಾಸರಗೋಡಿನ ರಂಜಿತ್ ರಾಮಚಂದ್ರನ್ ಅವರು ತಾನು ಈ ಹುದ್ದೆಗೇರಲು ಪಟ್ಟ ಕಷ್ಟವನ್ನು ತಮ್ಮ ಪೋಸ್ಟ್‌ನಲ್ಲಿ ಬಿಚ್ಚಿಟ್ಟಿದ್ದಾರೆ. ತಾನು ಹುಟ್ಟಿ ಬೆಳೆದ ಕಾಸರಗೋಡಿನಿಂದ ಹೊರಗಡೆ ಎಂದೂ ಹೋಗಿರದ ಯುವಕ ಈಗ ಅಸಿಸ್ಟೆಂಟ್ ಪ್ರೊಫೆಸರ್. ತನ್ನಂತೆ ಕಷ್ಟ ಪಡುತ್ತಿರುವ ಯುವಜನರಿಗೆ ಇದು ಪ್ರೇರ ಣೆಯಾಗಲಿ ಎಂದು ತಮ್ಮ ಜೀವನದ ಪಯಣವನ್ನು ಫೇಸ್‌ಬುಕ್ ಪೋಸ್ಟ್‌ನಲ್ಲಿ ಎಳೆಎಳೆಯಾಗಿ ವಿವರಿಸಿದ್ದಾರೆ. ರಾಜ್ಯದ ಹಣ ಕಾಸು ಸಚಿವ ಟಿ.ಎಂ.ಥಾಮಸ್ ಇಸಾಕ್ ಸಹಿತ ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ರಂಜಿತ್ ಕಾಸರಗೋಡಿನ ಪಾಣತ್ತೂರಿ ನಲ್ಲಿ ಬಿಎಸ್‌ಎನ್‌ಎಲ್ ದೂರವಾಣಿ ವಿನಿಮಯ ಕೇಂದ್ರದಲ್ಲಿ ರಾತ್ರಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು. ಆ ಸಂದರ್ಭ ಅವರು ಅರ್ಥಶಾಸ್ತ್ರ ಪದವಿ ಪಡೆಯು ತ್ತಿದ್ದರು.”ಹಗಲು ಕಾಲೇಜಿಗೆ ಹೋಗಿ ರಾತ್ರಿ ದೂರವಾಣಿ ವಿನಿಮಯ ಕೇಂದ್ರದಲ್ಲಿ “ನೈಟ್ ವಾಚ್‌ಮನ್’ ಆಗಿ ಕೆಲಸ ಮಾಡು ತ್ತಿದ್ದೆ. ಪದವಿ ಪಡೆದ ಬಳಿಕ ಮದ್ರಾಸ್ ಐಐಟಿಗೆ ಸೇರಿದೆ. ಮಲಯಾಳ ಮಾತ್ರ ತಿಳಿದಿದ್ದರಿಂದ ಅಲ್ಲಿ ಅಧ್ಯಯನ ಮಾಡಲು ಕಷ್ಟವಾಯಿತು. ಇದರಿಂದ ನಿರಾಸೆಗೊಂಡು ಪಿಎಚ್.ಡಿ. ಅನ್ನು ತೊರೆಯಲು ನಿರ್ಧರಿಸಿದೆ. ಆದರೆ ಮಾರ್ಗದರ್ಶಿಯಾಗಿದ್ದ ಡಾ| ಸುಭಾಷ್ ಅವರು ಇದಕ್ಕೆ ಅವಕಾಶ ನೀಡಲಿಲ್ಲ. ಅವರ ಸಹಕಾರದಿಂದ ನಾನು ಅಧ್ಯಯನವನ್ನು ಮುಂದುವರಿಸಿ ಕಳೆದ ವರ್ಷ ಡಾಕ್ಟರೇಟ್ ಪದವಿಯನ್ನು ಪಡೆದೆ ಎಂದವರು ತಿಳಿಸಿದ್ದಾರೆ.
ಕಳೆದ ಎರಡು ತಿಂಗಳುಗಳಿಂದ ಬೆಂಗಳೂ ರಿನ ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸು ತ್ತಿದ್ದರು. ನನ್ನ ಜೀವನ ಕಥೆ ಕೆಲವರಿಗೆ ಸ್ಫೂರ್ತಿ ನೀಡುತ್ತದೆ ಎಂದು ಆಶಿಸಿದ್ದೇನೆ. ಪ್ರತಿ ಯೊಬ್ಬರೂ ಒಳ್ಳೆಯ ಕನಸು ಕಾಣ ಬೇಕು ಮತ್ತು ಅವರ ಕನಸುಗಳಿಗಾಗಿ ಹೋರಾಡಬೇಕೆಂದು ನಾನು ಬಯ ಸುತ್ತೇನೆ. ಇತರ ಜನರು ಇದರಿಂದ ಪ್ರೇರಿತ ರಾಗಿ ಯಶಸ್ಸನ್ನು ಕಂಡುಕೊಳ್ಳ ಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದರು.
ಅವರ ತಂದೆ ಟೈಲರ್ ಆಗಿದ್ದು, ತಾಯಿ ಉದ್ಯೋಗ ಖಾತರಿ ಯೋಜನೆಯಡಿ ದೈನಂದಿನ ಕೂಲಿ ಕಾರ್ಮಿಕರಾಗಿದ್ದಾರೆ. ಇವರಿಗೆ ಮೂವರು ಮಕ್ಕಳಿದ್ದು, ರಂಜಿತ್ ಹಿರಿಯವನು. ಸೋರುವ ಮಾಡಿಗೆ ಪ್ಲಾಸ್ಟಿಕ್ ಮುಚ್ಚಿದ ಮನೆಯಲ್ಲಿ ಇವರು ಬದುಕು.