Advertisement

ದ ಲಾಸ್ಟ್‌ ಸಪ್ಪರ್‌

06:18 PM Aug 14, 2019 | mahesh |

“ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಮಾತಿದೆ. ಯಾರಿಗೆ ಊಟ ಮಾಡುವ ಕಲೆ (ವಿಜ್ಞಾನವೂ ಹೌದು) ಗೊತ್ತಿದೆಯೋ, ಅವರು ಆರೋಗ್ಯವಂತರಾಗಿರುತ್ತಾರೆ. ಯಾವ ಆಹಾರವನ್ನು ಯಾವ ಕಾಲದಲ್ಲಿ, ಯಾವ ಹೊತ್ತಿನಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಯಾಗುವುದಿಲ್ಲ ಅಂತ ತಿಳಿದರೆ, ಅನೇಕ ಕಾಯಿಲೆಗಳಿಂದ ದೂರ ಉಳಿಯಬಹುದು.

Advertisement

ಆಯುರ್ವೇದದ ಪ್ರಕಾರ, ಆರೋಗ್ಯ ಕಾಪಾಡುವಲ್ಲಿ ರಾತ್ರಿಯ ಊಟಕ್ಕೆ ಬಹಳ ಮಹತ್ವವಿದೆ. “ಬೆಳಗ್ಗೆ ರಾಜನಂತೆ, ರಾತ್ರಿ ಭಿಕ್ಷುಕನಂತೆ ತಿನ್ನಬೇಕು’ ಅಂತ ಹಿರಿಯರು ಹೇಳುವುದು ಅದಕ್ಕೇ. ಅಂದರೆ, ರಾತ್ರಿಯ ಊಟ ಆದಷ್ಟು ಹಿತಮಿತವಾಗಿರಬೇಕು. ನಮ್ಮ ದೇಹದ ಮೂರು ಮುಖ್ಯ ಅಂಶಗಳಾದ ವಾತ, ಪಿತ್ಥ, ಕಫ‌ದಲ್ಲಿ, ರಾತ್ರಿ ಹೊತ್ತಿನಲ್ಲಿ ಕಫ‌ವು ದೇಹವನ್ನು ನಿಯಂತ್ರಿಸುತ್ತದೆ. ಹಾಗಾಗಿ, ರಾತ್ರಿಯೂಟದಲ್ಲಿ ನಾವು ಏನನ್ನು ಸೇವಿಸುತ್ತೇವೆಯೋ ಅದು ಕಫ‌ವನ್ನು ನಿಯಂತ್ರಿಸುವಂತಿರಬೇಕು. ಮಲಗುವ ಮುನ್ನ ಸೇವಿಸುವ ಆಹಾರದ ಬಗ್ಗೆ ಆಯುರ್ವೇದದಲ್ಲಿ ಹೀಗೆ ಹೇಳಲಾಗಿದೆ –

-ಕಾರ್ಬ್ ಕಡಿಮೆ ಇರುವ ಆಹಾರ ಸೇವಿಸಿ
ರಾತ್ರಿ ಹೊತ್ತು, ಕಡಿಮೆ ಕಾರ್ಬೋಹೈಡ್ರೇಟ್‌/ ಶರ್ಕರಪಿಷ್ಟ ಇರುವ ಆಹಾರಗಳನ್ನು ಸೇವಿಸುವುದು ಸೂಕ್ತ. ಹಣ್ಣುಗಳು, ಹಸಿ ತರಕಾರಿ, ಮೊಳಕೆಕಾಳಿನ ಸಲಾಡ್‌ನ‌ಂಥ ಆಹಾರಗಳು ಸುಲಭದಲ್ಲಿ ಜೀರ್ಣವಾಗುವುದರಿಂದ, ರಾತ್ರಿ ನಿದ್ರಾಹೀನತೆ, ಸುಸ್ತು ಕಾಡುವುದಿಲ್ಲ.

-ಮೊಸರು ಸೇವನೆ ಒಳ್ಳೇದಲ್ಲ
ರಾತ್ರಿ ಊಟದಲ್ಲಿ ಮೊಸರು ತಿನ್ನುವುದನ್ನು ಕಡಿಮೆ ಮಾಡಿ. ಯಾಕೆಂದರೆ, ಮೊಸರು ದೇಹದ ಕಫ‌ವನ್ನು ಹೆಚ್ಚಿಸಿ, ಶ್ವಾಸಕೋಶದ ತೊಂದರೆಗಳನ್ನುಂಟು ಮಾಡುತ್ತದೆ. ಮೊಸರಿನ ಬದಲು ಮಜ್ಜಿಗೆ ಸೇವಿಸುವುದು ಸೂಕ್ತ.

– ಹಿತಮಿತ ಆಹಾರ ಸೇವನೆ
ಬೊಜ್ಜು ಕರಗಿಸಿ ದೇಹವನ್ನು ಫಿಟ್‌ ಆಗಿಸಬೇಕು ಎನ್ನುವವರು, ರಾತ್ರಿ ಹೊತ್ತು ಕಡಿಮೆ ಊಟ ಮಾಡುವುದು ಉತ್ತಮ. ರಾತ್ರಿ ಊಟದ ನಂತರ ನಿದ್ದೆಗೆ ಜಾರುವುದರಿಂದ, ಜೀರ್ಣಾಂಗ ವ್ಯವಸ್ಥೆಯು ಹಗಲಿನಂತೆ ಚಟುವಟಿಕೆಯಿಂದ ಕೆಲಸ ಮಾಡುವುದಿಲ್ಲ. ಹಾಗಾಗಿ, ಹೊಟ್ಟೆ ಬಿರಿಯುವಂತೆ ತಿಂದರೆ ಆಹಾರವನ್ನು ಸರಿಯಾಗಿ ಜೀರ್ಣಿಸಲು ಆಗದೆ, ಅಜೀರ್ಣ ಸಮಸ್ಯೆ, ಮಲಬದ್ಧತೆಯ ಸಮಸ್ಯೆ ಉಂಟಾಗಬಹುದು.

Advertisement

– ಪ್ರೋಟೀನ್‌ಯುಕ್ತ ಆಹಾರ ತಿನ್ನಿ
ಅಧಿಕ ಪ್ರೋಟೀನ್‌ ಅಂಶವುಳ್ಳ ಬೇಳೆಕಾಳು, ಹಸಿರು ತರಕಾರಿ, ಸೊಪ್ಪಿನಿಂದ ತಯಾರಿಸಿದ ಆಹಾರ ಪದಾರ್ಥಗಳು, ಸುಲಭವಾಗಿ ಜೀರ್ಣವಾಗುವುದರಿಂದ ರಾತ್ರಿ ಸೇವನೆಗೆ ಸೂಕ್ತ.

– ದಪ್ಪ ಹಾಲು ಬೇಡ
ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವ ಅಭ್ಯಾಸ ನಿಮಗಿದ್ದರೆ, ಗಟ್ಟಿ ಹಾಲು (ಹೆಚ್ಚು ಕೊಬ್ಬಿನ ಅಂಶವುಳ್ಳ) ಕುಡಿಯುವುದು ಅಷ್ಟಾಗಿ ಒಳ್ಳೆಯದಲ್ಲ. ಹಾಲಿಗೆ ಸ್ವಲ್ಪ ನೀರು ಬೆರೆಸಿ ಕುಡಿಯುವುದು ಸೂಕ್ತ. ತಣ್ಣನೆಯ ಹಾಲು ಕುಡಿಯುವುದಕ್ಕಿಂತ, ಬಿಸಿ ಬಿಸಿ ಹಾಲು ಕುಡಿದರೆ ಬೇಗ ಜೀರ್ಣವಾಗುತ್ತದೆ.

-ಕೊಂಚ ಮಸಾಲೆ ಇರಲಿ
ರಾತ್ರಿಯಡುಗೆಗೆ ಮಾಡುವ ಸಾಂಬಾರ, ಚಟ್ನಿ, ಸಾರಿನಲ್ಲಿ ಕಾಳುಮೆಣಸು, ಏಲಕ್ಕಿ, ಲವಂಗ, ಚಕ್ಕೆ, ಶುಂಠಿಯಂಥ ಮಸಾಲ ಪದಾರ್ಥಗಳನ್ನು ಅಲ್ಪ ಪ್ರಮಾಣದಲ್ಲಿ ಬಳಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next