Advertisement
ಶನಿವಾರ ರಾತ್ರಿಯಿಂದ ಇದು ಜಾರಿಗೆ ಬರಲಿದ್ದು, ಶುಕ್ರವಾರ ಸರಕಾರ ಮಾರ್ಗಸೂಚಿ ಪ್ರಕಟಿಸುವ ಸಾಧ್ಯತೆಗಳಿವೆ.
Related Articles
Advertisement
ಸಾರ್ವಜನಿಕರಿಗೆ ಯಾವುದೇ ಸೇವೆಗಳು ಸ್ಥಗಿತಗೊಳ್ಳುವುದಿಲ್ಲ. ರಾತ್ರಿ ಹೊತ್ತಿನಲ್ಲಿ ಜನರ ಅನಗತ್ಯ ಸಂಚಾರಕ್ಕೆ ನಿರ್ಬಂಧ ಇರಲಿದೆ. ಹೋಟೆಲ್, ಬಾರ್, ಪಬ್, ನೈಟ್ ಪಾರ್ಟಿ, ರೆಸ್ಟೋ ರೆಂಟ್ ಗಳು, ಸಿನೆಮಾ ಹಾಲ್‌ಗಳನ್ನು ಬಂದ್ ಮಾಡಲಾಗುತ್ತದೆ. ಅಂತರ್ ಜಿಲ್ಲಾ ಬಸ್ ಸೇವೆ ಇರುತ್ತದೆ. ಮದುವೆ ಸಮಾ ರಂಭ ಗಳನ್ನು ಜನರು ಇತಿಮಿತಿಯಲ್ಲಿ ನಡೆಸ ಬೇಕೆಂದು ಸಿಎಂ ಮನವಿ ಮಾಡಿದ್ದಾರೆ.
ಲಾಕ್‌ಡೌನ್ ಬೇಡ :
ಲಾಕ್‌ಡೌನ್ ಹೇರಬೇಕಾದ ಅಗತ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ ಸೋಂಕಿನ 2ನೇ ಅಲೆಯು ಮೊದಲ ಅಲೆಗಿಂತಲೂ ಅಪಾಯಕಾರಿ ಎಂಬುದನ್ನು ಒತ್ತಿ ಹೇಳಿದ್ದು, ನಿರ್ಲಕ್ಷ್ಯ ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ. ಗುರುವಾರ ಬಿಎಸ್‌ವೈ ಸೇರಿದಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಿಎಂಗಳ ಜತೆಗೆ ನಡೆಸಿದ ಸಂವಾದ ಸಂದರ್ಭದಲ್ಲಿ ಮೋದಿ ಈ ಮಾತು ಹೇಳಿದ್ದಾರೆ.
ಎ. 11ರಿಂದ “ಲಸಿಕೆ ಉತ್ಸವ’ :
ಎ. 11ರಿಂದ ಎ. 14ರ ವರೆಗೆ 4 ದಿನ ದೇಶಾದ್ಯಂತ “ಲಸಿಕೆ ಉತ್ಸವ’ ನಡೆಸುವಂತೆ ಮೋದಿ ಕರೆ ನೀಡಿದ್ದಾರೆ. ಈ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಫಲಾನುಭವಿಗಳಿಗೆ ಲಸಿಕೆ ವಿತ ರಿಸು ವಂತೆ ಮಾಡೋಣ. ಈ ಮೂಲಕ ಲಸಿಕೆ ವ್ಯರ್ಥವಾಗುವುದನ್ನು ತಡೆಯೋಣ ಎಂದಿ ದ್ದಾರೆ. ಜತೆಗೆ 45 ವರ್ಷ ಮೇಲ್ಪಟ್ಟವ ರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಉತ್ತೇಜನ ನೀಡಬೇಕು ಎಂದು ಮೋದಿ ಹೇಳಿದ್ದಾರೆ.
“ನೈಟ್’ ಬದಲು “ಕೋವಿಡ್’ ಕರ್ಫ್ಯೂ :
“ನೈಟ್ ಕರ್ಫ್ಯೂ’ ಎಂಬ ಪದ ಬಳಕೆ ಬೇಡ ಎಂದಿರುವ ಮೋದಿ, ಇನ್ನು ಮುಂದೆ ಅದನ್ನು “ಕೋವಿಡ್ ಕರ್ಫ್ಯೂ’ ಎಂದು ಬಳಸಿ. ಆಗ ಜನರು ಸೋಂಕಿನ ಬಗ್ಗೆ ಎಚ್ಚರದಿಂದ ಇರುತ್ತಾರೆ ಎಂದಿದ್ದಾರೆ.
ನೈಟ್ ಕರ್ಫ್ಯೂ ವೇಳೆ ರಾತ್ರಿ ವಾಣಿಜ್ಯ ಚಟುವಟಿಕೆಗಳಿಗೆ ಮಾತ್ರ ಕಡಿವಾಣ ಬೀಳಲಿದ್ದು, ಸಾರಿಗೆ ಸೇವೆ ಮತ್ತು ಅಗತ್ಯ ಸೇವೆಗಳಿಗೆ ಯಾವುದೇ ತೊಂದರೆ ಇಲ್ಲ. – ಡಾ| ಸುಧಾಕರ್, ಆರೋಗ್ಯ ಸಚಿವ