Advertisement
ಸೊಕ್ಕಿದ ಆನೆಗೆ ನೀರಾನೆಯ ವಿನಯದಿಂದ ಮನ ಕರಗಲಿಲ್ಲ. ಕೋಪದಿಂದ ಕಣ್ಣು ದೊಡ್ಡದು ಮಾಡಿತು. “”ನನ್ನಂಥ ದೊಡ್ಡವನಿಗೆ ನೀತಿ ಹೇಳುವಷ್ಟು ಧೈರ್ಯ ನಿನಗೆ ಬಂತೆ? ವನರಾಜ ಸಿಂಹಕ್ಕೆ ಹೆದರಿಲ್ಲ. ಇನ್ನು ನಿನ್ನ ಮಾತಿಗೆ ಮನ್ನಣೆ ಕೊಡುವುದುಂಟೆ? ನಾಳೆಯೂ ಬರುತ್ತೇನೆ, ನಾಡದ್ದು ಬರುತ್ತೇನೆ, ದಿನವೂ ಬಂದು ನೀರಾಟವಾಡಿ ಹೋಗುತ್ತೇನೆ. ಎದೆಯಲ್ಲಿ ಕೆಚ್ಚು ಇದ್ದರೆ ನನ್ನನ್ನು ಎದುರಿಸು. ಇಲ್ಲವಾದರೆ ಬಾಯಿ ಮುಚ್ಚಿಕೊಂಡು ಬಿದ್ದಿರು” ಎಂದು ಕಟುವಾಗಿ ಹೇಳಿತು.
Related Articles
Advertisement
ಆನೆ ಅದನ್ನು ತಿಂದು ನೋಡಿ ಖುಷಿಪಟ್ಟಿತು. “”ಇಷ್ಟೊಂದು ರುಚಿಯಾಗಿದೆ! ಇದನ್ನು ಯಾವುದರಿಂದ ತಯಾರಿಸಿದ್ದೀ?” ಎಂದು ಕೇಳಿತು. “”ತಯಾರಿಕೆ ತುಂಬ ಕಷ್ಟವೇ. ಆದರೆ ನಾಲಿಗೆಯ ರುಚಿಗೆ ಬೇಕಾಗಿ ಏನಾದರೂ ಮಾಡಲೇಬೇಕಲ್ಲವೆ! ನನ್ನ ಒಂದು ಕಣ್ಣನ್ನು ಕಿತ್ತು ಅದರಿಂದ ತಯಾರಿಸಿದ ಖಾದ್ಯ ಇದು” ಆಮೆ ಒಂದು ರೆಪ್ಪೆಯನ್ನು ತೆರೆಯದೆ ಕಣ್ಣು ಕುರುಡಾಗಿರುವಂತೆ ತೋರಿಸಿತು.
ಭೋಳೆ ಆನೆ ಸುಳ್ಳು ಮಾತನ್ನು ನಂಬಿ ಬಿಟ್ಟಿತು. “”ಕಣ್ಣಿನಿಂದ ಇಂತಹ ಸೊಗಸಾದ ಭಕ್ಷ್ಯ ತಯಾರಿಸಬಹುದೆ? ನನಗೂ ಎರಡು ಕಣ್ಣುಗಳಿವೆ. ಒಂದು ಕಣ್ಣಿನಿಂದ ಇದನ್ನು ತಯಾರಿಸಿ ಹೆಂಡತಿಗೆ ಕೊಡಬೇಕೆಂಬ ಬಯಕೆ ಯಾಗಿದೆ. ಆದರೆ ತಯಾರಿಸುವ ವಿಧಾನ ಗೊತ್ತಿಲ್ಲ. ಕಣ್ಣನ್ನು ತೆಗೆಯುವ ಕ್ರಮವೂ ತಿಳಿದಿಲ್ಲ. ನೀನು ನಾಳೆ ನನ್ನ ಕಣ್ಣಿನಿಂದ ಈ ಸೊಗಸಾದ ಖಾದ್ಯವನ್ನು ತಯಾರಿಸಿ ತಂದು ಕೊಡುತ್ತೀಯಾ?” ಎಂದು ಕೇಳಿತು.
“”ಅದಕ್ಕೇನಂತೆ, ದೊಡ್ಡವರಾದ ನೀವು ಕೇಳಿದರೆ ಚಿಕ್ಕವನಾದ ನಾನು ಇಲ್ಲ ಅನ್ನುವುದುಂಟೆ? ಒಂದು ಚೂಪಾದ ಕೋಲಿನಿಂದ ಕುಟ್ಟಿದರೆ ಕಣ್ಣು ಹೊರಗೆ ಬರುತ್ತದೆ. ಅದನ್ನು ನನ್ನ ಕೈಗೆ ಕೊಡಿ. ನಾಳೆ ಈ ಖಾದ್ಯವನ್ನು ತಂದು ನಿಮಗೆ ಒಪ್ಪಿಸುತ್ತೇನೆ” ಎಂದು ಹೇಳಿತು ಘಾಟಿ ಆಮೆ.
ಆನೆ ತನ್ನ ಒಂದು ಕಣ್ಣನ್ನು ಕಿತ್ತು ಆಮೆಗೆ ಕೊಟ್ಟು ನೋವಿನಿಂದ ಒದ್ದಾಡಿತು. “”ಅಂತಹ ರುಚಿಕರ ತಿಂಡಿ ಸಿಗುವುದಾದರೆ ಎಂತಹ ನೋವನ್ನೂ ಸಹಿಸಿಕೊಂಡೇನು, ಇನ್ನೊಂದು ಕಣ್ಣು ಬೇಕಿದ್ದರೂ ಕೊಟ್ಟೇನು” ಎಂದು ಹೇಳಿತು. ಆಮೆ ಕಣ್ಣನ್ನು ಒಂದು ಪೊದೆಗೆ ಎಸೆಯಿತು. ಮರುದಿನ ಇನ್ನಷ್ಟು ರುಚಿಯಿರುವ ತಿಂಡಿಗಳೊಂದಿಗೆ ಆನೆ ಬರುವ ದಾರಿಯಲ್ಲಿ ಕಾದು ಕುಳಿತಿತು. ತಿಂಡಿಗಳ ಆಸೆಯಿಂದ ಬಂದ ಆನೆ ಅದು ತಂದ ತಿಂಡಿಯನ್ನು ತಿಂದ ಮೇಲೆ ಒಂದು ಕಣ್ಣನ್ನು ಕಳೆದುಕೊಂಡ ದುಃಖವನ್ನೇ ಮರೆತು ಸಂತೋಷಪಟ್ಟಿತು. ಆಮೆ, “”ನಾಳೆ ನಿಮ್ಮ ಇನ್ನುಳಿದ ಒಂದು ಕಣ್ಣಿನಿಂದ ಇದಕ್ಕಿಂತಲೂ ಸ್ವಾದವಿರುವ ಭಕ್ಷ್ಯಗಳನ್ನು ತಯಾರಿಸಿ ತಂದುಕೊಡಲೆ?” ಎಂದು ವಿಚಾರಿಸಿತು.
“”ಅದನ್ನು ನಾನೇ ಹೇಳುವವನಿದ್ದೆ. ಕಣ್ಣು ಹೋದರೇನು, ಮರಳಿ ಬರುವುದಿಲ್ಲವೆ? ಈ ಕಣ್ಣನ್ನು ಕಿತ್ತು ಕೊಡುತ್ತೇನೆ. ನಾಳೆ ಹೀಗೆಯೇ ಇರುವ ರುಚಿ ಕೆರಳಿಸುವ ತಿಂಡಿಗಳನ್ನು ತಯಾರಿಸಿ ತಂದುಬಿಡು” ಎನ್ನುತ್ತ ಆನೆ ತನ್ನ ಕಣ್ಣನ್ನು ಕಿತ್ತು ಆಮೆಯ ಕೈಯಲ್ಲಿರಿಸಿತು. ಆಮೆ ಮೆಲ್ಲಗೆ ಅಲ್ಲಿಂದ ಜಾರಿ ಕೊಳಕ್ಕೆ ಹೋಯಿತು. ಗೆಳೆಯನಾದ ನೀರಾನೆಯನ್ನು ಕೂಗಿ ಕರೆಯಿತು. “”ನೋಡಿದೆಯಾ, ದೇಹ ದೊಡ್ಡದಿದ್ದರೂ ಬುದ್ಧಿಯಲ್ಲಿ ಸೊನ್ನೆ ಯಾದ ಆನೆಯ ಕತೆ. ತನ್ನ ಕಣ್ಣುಗಳನ್ನು ತಾನೇ ಕಿತ್ತುಕೊಂಡು ಕುರುಡನಾಗಿಬಿಟ್ಟಿತು. ಇನ್ನು ಅದು ಕೊಳಕ್ಕೆ ಬರುವುದಿಲ್ಲ, ನಿನಗೆ ತೊಂದರೆ ಕೊಡುವುದಿಲ್ಲ” ಎಂದು ನಡೆದ ಕತೆ ಹೇಳಿತು. ನೀರಾನೆಗೆ ಆದ ಸಂತೋಷ ಅಷ್ಟಿಷ್ಟಲ್ಲ. ಗೆಳೆಯ ಆಮೆಯನ್ನು ಬಿಗಿಯಾಗಿ ಅಪ್ಪಿಕೊಂಡು ಕೃತಜ್ಞತೆ ಸಲ್ಲಿಸಿತು.
ಆನೆ ಕಣ್ಣುಗಳನ್ನು ಕಳೆದುಕೊಂಡು ಕುರುಡನಾಗಿ ಮನೆಗೆ ಹೋಗುವ ದಾರಿ ತಿಳಿಯದೆ ಅರಣ್ಯದಲ್ಲಿ ಅಲೆಯುತ್ತ ಇತ್ತು. ಅಲ್ಲಿಗೆ ನರಿ ಬಂದಿತು. “”ಗಜರಾಜರು ಹುಟ್ಟಿದ ಹಬ್ಬಕ್ಕೆ ನಾಟಕ ಪ್ರದರ್ಶಿಸುವ ಯೋಚನೆ ಏನಾದರೂ ಇದೆಯೆ? ನಡೆಯುವುದನ್ನು ನೋಡಿದರೆ ಹಾಗೆಯೇ ಅನಿಸುತ್ತದೆ” ಎಂದು ತಮಾಷೆ ಮಾಡಿತು. ಆನೆ ನೋವಿನಿಂದ ನರಳಿತು. “”ಸೋತುಬಿಟ್ಟೆ ಮಹರಾಯಾ. ಪುಟ್ಟ ಆಮೆ ಸತ್ಯವನ್ನೇ ಹೇಳುತ್ತದೆಂದು ಭಾವಿಸಿ ತಿಂಡಿ ತಿನ್ನುವ ಆಶೆಯಿಂದ ಕಣ್ಣುಗಳನ್ನು ಕಳೆದುಕೊಂಡೆ. ಮನೆಗೆ ಹೋಗುವ ದಾರಿ ತಿಳಿಯದೆ ಒದ್ದಾಡುತ್ತಿದ್ದೇನೆ. ನರಿರಾಯಾ, ಎಷ್ಟು ಖರ್ಚಾದರೂ ಚಿಂತೆಯಿಲ್ಲ. ನನಗೆ ಮರಳಿ ಕಣ್ಣುಗಳನ್ನು ಬರುವಂತೆ ಮಾಡುವ ಯಾರಾದರೂ ವೈದ್ಯರಿದ್ದರೆ ಕರೆತರುತ್ತೀಯಾ? ಕಣ್ಣುಗಳು ಬಂದರೆ ಸಾಕು, ಮತ್ತೆ ಯಾರಿಗೂ ತೊಂದರೆ ಕೊಡದೆ ನನ್ನ ಪಾಡಿಗೆ ಬದುಕುತ್ತೇನೆ” ಎಂದು ದೈನ್ಯವಾಗಿ ಕೇಳಿತು.
“”ಔಷಧಿ ಹಚ್ಚಿ ಹೋದ ಕಣ್ಣುಗಳು ಮತ್ತೆ ಚಿಗುರುವಂತೆ ಮಾಡುವ ಯಾವ ವೈದ್ಯನೂ ಕಾಡಿನಲ್ಲಿ ಇಲ್ಲ. ಆದರೆ ಯಾರ ಬಳಿಯಲ್ಲಾದರೂ ಕಣ್ಣುಗಳನ್ನು ಕೇಳಿ ತಂದರೆ ಕೊಕ್ಕರೆಯ ಬಳಿ ಅದನ್ನು ಮರಳಿ ಜೋಡಿಸುವ ಉಪಕರಣಗಳಿವೆ. ನೀನು ನನ್ನ ಜೊತೆಗೆ ಬಾ. ಯಾರಾದರೂ ನೇತ್ರದಾನ ಮಾಡುವವರಿದ್ದರೆ ವಿಚಾರಿಸಬಹುದು. ನೀನು ಶಾಶ್ವತವಾಗಿ ಕಣ್ಣುಗಳನ್ನು ಕೇಳಿದರೆ ನಿನಗೆ ಕಣ್ಣು ಕೊಟ್ಟು ಕುರುಡರಾಗಲು ಯಾರೂ ಇಷ್ಟಪಡುವುದಿಲ್ಲ. ಒಂದು ದಿನದ ಮಟ್ಟಿಗೆ ಸಾಲವಾಗಿ ಕೇಳಿದರೆ ದಯೆಯಿರುವ ಯಾರಾದರೂ ಮುಂದಾಗಬಹುದು” ಎಂದು ನರಿ ದಾರಿ ತೋರಿಸಿತು.
ಆನೆ ನರಿಯ ಮಾತನ್ನು ಒಪ್ಪಿತು. ನರಿ ಅದರ ಕೈ ಹಿಡಿದುಕೊಂಡು ಕಾಡಿನ ಎಲ್ಲ ಪ್ರಾಣಿಗಳು, ಪಕ್ಷಿಗಳ ಬಳಿಗೂ ಕರೆದೊಯ್ದಿತು. ಒಂದು ದಿನದ ಮಟ್ಟಿಗೆ ಕಣ್ಣುಗಳನ್ನು ಸಾಲವಾಗಿ ಕೊಡುವಂತೆ ಆನೆ ಕೇಳಿದಾಗ ಯಾವ ಜೀವಿಯೂ ಅದಕ್ಕೆ ಒಪ್ಪಲಿಲ್ಲ. “”ಯಾವ ಅಂಗಾಂಗ ಕಳೆದುಕೊಂಡರೂ ಬದುಕಿನಲ್ಲಿ ಹೇಗೋ ಸುಖದಿಂದ ಇರಬಲ್ಲೆವು. ಆದರೆ, ನೋಡುವ ಕಣ್ಣುಗಳನ್ನು ಅರೆಕ್ಷಣ ಕೂಡ ಕಳೆದುಕೊಳ್ಳಲು ನಮಗೆ ಸಾಧ್ಯವಿಲ್ಲ” ಎಂದು ಸ್ಪಷ್ಟವಾಗಿ ಹೇಳಿಬಿಟ್ಟವು.
ನಿರಾಶೆಯಿಂದ ಆನೆ ಮರಳುತ್ತಿರುವಾಗ ಒಂದು ಗೆದ್ದಲು ಬರುತ್ತ ಇತ್ತು. ನರಿ ಅದರೊಂದಿಗೆ ಕೇಳುವಂತೆ ಸೂಚಿಸಿತು. ಆನೆಯು ಒಂದು ದಿನದ ಮಟ್ಟಿಗೆ ಸಾಲವಾಗಿ ಕಣ್ಣುಗಳನ್ನು ಕೊಡುವಂತೆ ಕೋರಿದಾಗ ಗೆದ್ದಲು ಮನ ಕರಗಿ, “”ಒಂದು ದಿನಕ್ಕೆ ತಾನೆ? ತೆಗೆದುಕೋ. ಆದರೆ ನಾಳೆ ಬೆಳಗಾಗುವಾಗ ಮತ್ತೆ ತಂದುಕೊಡಬೇಕು” ಎಂದು ಹೇಳಿ ಕಣ್ಣುಗಳನ್ನು ಕೊಟ್ಟಿತು. ಅದನ್ನು ಕೊಕ್ಕರೆಯ ಬಳಿಗೆ ತೆಗೆದುಕೊಂಡು ಹೋಗಿ ಆನೆ ಹೋದ ಕಣ್ಣುಗಳ ಸ್ಥಾನದಲ್ಲಿರಿಸಿತು. ತನ್ನ ಮುಖದ ಗಾತ್ರಕ್ಕಿಂತ ಚಿಕ್ಕದಾದ ಕಣ್ಣುಗಳಾದರೂ ಆನೆಗೆ ನೋಡಲು ಕಷ್ಟವಾಗಲಿಲ್ಲ. ಆದರೆ ಕೊಟ್ಟ ಮಾತನ್ನು ಮರೆಯಿತು. ಗೆದ್ದಲಿಗೆ ಕಣ್ಣುಗಳನ್ನು ಮರಳಿ ಕೊಡಲಿಲ್ಲ. ಅದರಿಂದ ಈಗಲೂ ಗೆದ್ದಲಿನ ಜಾತಿ ಕುರುಡಾಗಿಯೇ ಇದೆ.
ಪ. ರಾಮಕೃಷ್ಣ ಶಾಸ್ತ್ರಿ