Advertisement
ನೈಜೀರಿಯಾದ ಎರೆಮ್‌ಹೆನ್ ಸ್ಮಾಟ್ ì(33), ಉಗಾಂಡಾದ ಮಾರ್ಟಿನ್ ಸಾಂಬಾ (25), ನಂಬೋಜ್ ಜೊಲಿ(23), ಟೀನಾ (23), ನೈಜೀರಿಯಾದ ಕೆನ್ನಿ (32), ಒಲೊಆಡೆಜಿ ಓಲಾಯೆಮಿ (34) ಹಾಗೂ ವೈಯ್ನಾಲಿಕಾವಲ್ ನಿವಾಸಿ ವಿಕ್ರಂರಾವ್ ನಿಕ್ಕಂ (40) ಬಂಧಿತರು.
ಆರೋಪಿಗಳು ಗ್ರಾಹಕರ ಸೋಗಿನಲ್ಲಿ ಎಟಿಎಂ ಕೇಂದ್ರಕ್ಕೆ ತೆರಳಿ ಮಷಿನ್ ಗಳಲ್ಲಿ ಸ್ಕಿಮ್ಮರ್ ಮಷಿನ್ ಅಳಡಿಸುತ್ತಿದ್ದರು. ಆರೋಪಿಗಳ ಪೈಕಿ ಕೆಲವರು ಎಟಿಎಂ ಕೇಂದ್ರದ ಸಿಬ್ಬಂದಿಯನ್ನು ಮಾತನಾಡಿಸುತ್ತಾ ಬೇರೆಡೆ ಗಮನ ಸೆಳೆಯುತ್ತಿದ್ದರು. ಈ ವೇಳೆ ಮತ್ತೂಬ್ಬ ಆರೋಪಿ ಸ್ಕಿಮ್ಮರ್ ಮಷಿನ್ ಅಳವಡಿಸಿ, ಮ್ಯಾಗೆ¾ಟಿಕ್ ಸ್ಟ್ರಿಪ್ ಹಾಗೂ ಸಣ್ಣದೊಂದು ಕ್ಯಾಮೆರಾ ಅಳವಡಿಸಿ ಬರುತ್ತಿದ್ದ. ಭದ್ರತಾ ಸಿಬ್ಬಂದಿ ಗ್ರಾಹಕರೆಂದು ಸುಮ್ಮನಾಗುತ್ತಿದ್ದ. ಗ್ರಾಹಕರು ಎಟಿಎಂನಲ್ಲಿ ಹಣ ಪಡೆಯಲು ಎಟಿಎಂ ಮಷಿನ್‌ಗೆ ಕಾರ್ಡ್ ಹಾಕಿದಾಗ ಸ್ಕಿಮ್ಮರ್‌ನಲ್ಲಿ ಡೆಬಿಟ್ ಕಾರ್ಡ್ ಮಾಹಿತಿ ದಾಖಲಾಗುತ್ತಿತ್ತು. ಇವುಗಳಿಂದ ಬಂದ ದತ್ತಾಂಶವನ್ನು ಬೇರೊಂದು ಖಾಲಿ ಕಾರ್ಡ್‌ಗೆ ನಕಲಿ ಮಾಡಿ ಹೊರ ಎಟಿಎಂ ಕಾರ್ಡ್ ತಯಾರಿಸಿಕೊಳ್ಳುತ್ತಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿಗಳ ಕೃತ್ಯ ಬಯಲಾಗಿದೆ. ಇವರ ಬಂಧನದಿಂದ ಇದೇ ರೀತಿಯ 11 ಪ್ರಕರಣ ಬಯಲಾಗಿದೆ.
ವೀಸಾ ಮುಗಿದರೂ ಅಕ್ರಮ ವಾಸಆರೋಪಿಗಳು ವಯಾ.ಕಾಂ ಎಂಬ ಆನ್‌ಲೈನ್ ನಲ್ಲಿ ಬಾಗಲೂರಿನ ಖಾನ್ಸ್ ಟೂರ್ ಅಂಡ್ ಟ್ರಾವೆಲ್ಸ್ ಮೂಲಕ ವಿಮಾನದ ಟಿಕೆಟ್‌ಗಳನ್ನು ಬುಕ್ ಮಾಡುತ್ತಿದ್ದರು. ಇದಕ್ಕೆ ಸ್ವೆ„ಪಿಂಗ್ ಮಷಿನ್ ಮೂಲಕ ಹಣ ವ್ಯಯಿಸುತ್ತಿದ್ದರು. ಬಳಿಕ ಯಾವುದಾದರೊಂದು ನೆಪವೊಡ್ಡಿ ಟಿಕೆಟ್ ರದ್ದುಗೊಳಿಸಿ ನಗದು ವಾಪಸ್ ಪಡೆಯುತ್ತಿದ್ದರು. ಬಂಧಿತರು ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದಿದ್ದು, ವೀಸಾ ಅವಧಿ ಮುಗಿದ ಬಳಿಕವೂ ನಗರದಲ್ಲಿ ಅಕ್ರಮವಾಗಿ ವಾಸವಿದ್ದಾರೆ. ಬಿಟ್‌ಕಾಯಿನ್ ವರ್ಗಾವಣೆ ದಂಧೆ
ಗ್ರಾಹರಕರ ಖಾತೆಯಿಂದ ಪಡೆದ ಹಣವನ್ನು ಆರೋಪಿಗಳು ಬಿಟ್ ಕಾಯಿನ್ ಮೂಲಕ ಇತರ ದೇಶಗಳಿಗೆ ವರ್ಗಾವಣೆ ಮಾಡುತ್ತಿದ್ದರು. ಬಂಧಿತ ವಿಕ್ರಂ ನಿಕ್ಕಂ ಬಿಟ್ ಕಾಯಿನ್ ಏಜೆಂಟ್ ಆಗಿದ್ದು, ಹಣ ಜಮೆ ಮಾಡಿಸಿಕೊಂಡು ಅದನ್ನು ಬಿಟ್ ಕಾಯಿನ್ ಮೂಲಕ ವರ್ಗಾವಣೆ ಮಾಡಿ ಕಮಿಷನ್ ಪಡೆಯುತ್ತಿದ್ದ. ವಿಕ್ರಂ ಹೋಟೆಲ್ ಮ್ಯಾನೇಜ್‌ಮೆಂಟ್ ಮಾಡಿಕೊಂಡು ಬಿಟ್ ಕಾಯಿನ್ ದಂಧೆಯಲ್ಲಿ ತೊಡಗಿದ್ದ. ಏನಿದು ಬಿಟ್ ಕಾಯಿನ್
ಬಿಟ್ ಕಾಯಿನ್ ಎಂಬುದು ಡಿಜಿಟಲ್ ಕರೆನ್ಸಿ. ಜಗತ್ತಿನ ಯಾವುದೇ ಭಾಗದಿಂದಲೂ ಹಣ ಪಡೆಯಲು ಹಾಗೂ ಕಳಿಸಲು ಬಳಸಬಹುದು. ರೂಪಾಯಿಗಳ ಮೇಲೆ ಆರ್‌ಬಿಐ ನಿಯಂತ್ರಣವಿರುವಂತೆ ಬಿಟ್ ಕಾಯಿನ್ ಮೇಲೆ ಯಾವುದೇ ನಿಯಂತ್ರಣವಿಲ್ಲ. ವಿದೇಶಗಳಲ್ಲಿ ಬಿಟ್ ಕಾಯಿನ್ ಇದೆಯಾದರೂ ಭಾರತದಲ್ಲಿ ಬಿಟ್ ಕಾಯಿನ್ ವ್ಯವಸ್ಥೆ ಇಲ್ಲ.