Advertisement

ನೈಜೀರಿಯಾದ ವಿದ್ಯಾರ್ಥಿನಿ ಗಡೀಪಾರು

08:47 AM May 22, 2018 | Team Udayavani |

ಉಡುಪಿ: ವೀಸಾ ಅವಧಿ ಮುಗಿದಿದ್ದರೂ ಉಡುಪಿಯಲ್ಲಿದ್ದ ವಿದ್ಯಾರ್ಥಿನಿ ನೈಜೀರಿಯಾ ಪ್ರಜೆ ಮಿಸ್‌ ಯುವ ನ್ಸಾ ಜೆರ್ರಿ ಡೇವಿಸ್‌ (27) ಅವರನ್ನು ದೇಶದಿಂದ ಗಡೀಪಾರು ಮಾಡಲಾಗಿದೆ.

Advertisement

ಮಣಿಪಾಲ ಪೊಲೀಸರು ಆಕೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮೇ 11ರ ವರೆಗೆ ನ್ಯಾಯಾಂಗ ಬಂಧನ ವಿಧಿ ಸಲಾಗಿತ್ತು. ನ್ಯಾಯಾಲಯದ ಆದೇಶದಂತೆ ಆಕೆ ಯನ್ನು  ಉಡುಪಿ ಪೊಲೀಸರು ಮೇ 18ರಂದು ಮುಂಬಯಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ  ಎಮಿಗ್ರೇಶನ್‌ ಅಧಿಕಾರಿಗಳಿಗೆ ಹಸ್ತಾಂತರಿ ಸಿದ್ದು, 19ರಂದು ನೈಜೀರಿಯಾಕ್ಕೆ  ಗಡೀಪಾರು ಮಾಡಲಾಗಿದೆ. ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ ನಿರ್ದೇಶನದಲ್ಲಿ ಜಿಲ್ಲಾ ವಿದೇಶಿಯರ ವಿಭಾಗದ ಪೊಲೀಸ್‌ ನಿರೀಕ್ಷಕ ರತ್ನಕುಮಾರ್‌, ಸಿಬಂದಿ ಅಮರ್‌ ಕುಮಾರ್‌, ಅನಿಲ್‌ ಕುಮಾರ್‌, ಮಣಿಪಾಲ ಠಾಣೆಯ ಎಎಸ್‌ಐ ವೈಲೆಟ್‌ ಫೆಮಿನಾ, ಉದಯ ಕುಮಾರ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next