ನವದೆಹಲಿ: ಜಾಗತಿಕ ಷೇರು ಮಾರುಕಟ್ಟೆಯ ಧನಾತ್ಮಕ ವಹಿವಾಟಿನ ಪರಿಣಾಮ ಮಂಗಳವಾರ (ಸೆಪ್ಟೆಂಬರ್ 13) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 339 ಅಂಕಗಳ ಏರಿಕೆಯೊಂದಿಗೆ 60,000 ಅಂಕಗಳ ಗಡಿ ದಾಟಿ ದಾಖಲೆ ಬರೆದಿದೆ.
ಇದನ್ನೂ ಓದಿ:2013ರಲ್ಲಿ ಪಾಕ್ ಜೈಲಿನಲ್ಲಿ ಮೃತಪಟ್ಟಿದ್ದ ಸರಬ್ಜಿತ್ ಸಿಂಗ್ ಪತ್ನಿ ರಸ್ತೆ ಅಪಘಾತದಲ್ಲಿ ಸಾವು
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಆರಂಭಿಕ ವಹಿವಾಟಿನಲ್ಲಿ 339 ಅಂಕಗಳಷ್ಟು ಏರಿಕೆಯೊಂದಿಗೆ 60,454.13 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 88.30 ಅಂಕ ಏರಿಕೆಯಾಗಿದ್ದು, 18,024.65 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದಾಗಿ ಬಜಾಜ್ ಫಿನ್ ಸರ್ವ್, ಬಜಾಜ್ ಫೈನಾನ್ಸ್, ಟೈಟಾನ್, ಎಚ್ ಡಿಎಫ್ ಸಿ ಬ್ಯಾಂಕ್ ಮತ್ತು ಇನ್ಫೋಸಿಸ್, ಅದಾನಿ ಪೋರ್ಟ್, ರಿಲಯನ್ಸ್ ಷೇರು ಲಾಭಗಳಿಸಿದೆ.
ಸೋಮವಾರ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಏರಿಕೆಯಾಗಿದ್ದು, ನಿಫ್ಟಿ ಕೂಡಾ ಕಳೆದ ಒಂದು ತಿಂಗಳ ಬಳಿಕ 17,900 ಅಂಕಗಳ ಗಡಿ ದಾಟಿತ್ತು. ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಷೇರು ಖರೀದಿ ವಹಿವಾಟು ಮುಂದುವರಿದಿದೆ.