ಮುಂಬಯಿ:ಅಮೆರಿಕದ ಫೆಡರಲ್ ರಿಸರ್ವ್ ಸಭೆ ಅಂತಿಮ ಹಂತದಲ್ಲಿದ್ದು, ಬಡ್ಡಿದರದ ಕುರಿತು ಅಂತಿಮ ನಿರ್ಧಾರ ಹೊರಬೀಳಲಿದೆ. ಏತನ್ಮಧ್ಯೆ ಫೆಡರಲ್ ಸಭೆಯ ಪರಿಣಾಮ ಗುರುವಾರ (ಸೆಪ್ಟೆಂಬರ್ 23) ಬಾಂಬೆ ಷೇರುಪೇಟೆ ಮೇಲೆ ಬೀರಿದ್ದು, ಸಂವೇದಿ ಸೂಚ್ಯಂಕ ದಾಖಲೆಯ ಮಟ್ಟಕ್ಕೆ ತಲುಪಿದೆ.
ಇದನ್ನೂ ಓದಿ:ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 31,923 ಕೋವಿಡ್ ಪ್ರಕರಣ ಪತ್ತೆ, 31,990 ಮಂದಿ ಚೇತರಿಕೆ
ಗುರುವಾರ ಬಾಂಬೆ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸೂಚ್ಯಂಕ ದಾಖಲೆಯ 59,300ಕ್ಕೆ ತಲುಪಿದ್ದು, ಏರಿಕೆಯ ನಾಗಾಲೋಟವನ್ನು ಮುಂದುವರಿಸಿದೆ. ಇದೇ ರೀತಿ ಎನ್ ಎಸ್ ಇ ನಿಫ್ಟಿ 17,650ರ ಮಟ್ಟ ತಲುಪಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯ ಪರಿಣಾಮ ಟಾಟಾ ಸ್ಟೀಲ್, ಆ್ಯಕ್ಸಿಸ್ ಬ್ಯಾಂಕ್, ಎಸ್ ಬಿಐ, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಲಾಭ ಗಳಿಸಿವೆ. ಮತ್ತೊಂದೆಡೆ ಟಾಟಾ ಸ್ಟೀಲ್, ಟಿಸಿಎಸ್, ಟೆಕ್ ಮಹೀಂದ್ರ ಷೇರು ನಷ್ಟ ಕಂಡಿದೆ.
ಬುಧವಾರ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಮತ್ತು ಎನ್ ಎಸ್ ಇ ನಿಫ್ಟಿ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿತ್ತು. ಇಂದು ಮತ್ತೆ ಸೆನ್ಸೆಕ್ಸ್ ಏರಿಕೆಯಾಗುವುದರೊಂದಿಗೆ ಸಾರ್ವಕಾಲಿಕ ಗರಿಷ್ಠ ದಾಖಲೆಯ 60 ಸಾವಿರದತ್ತ ಮುನ್ನುಗ್ಗಿದೆ.