ಮುಂಬಯಿ : ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 26 ಅಂಕಗಳ ಏರಿಕೆಯನ್ನು ಸಾಧಿಸಿ 10,178.95 ಅಂಕಗಳ ಹೊಸ ಎತ್ತರದ ಮಟ್ಟವನ್ನು ತಲುಪಿತು.
ದೇಶೀಯ ಹಣಕಾಸು ಸಂಸ್ಥೆಗಳು ಶೇರು ಖರೀದಿಯಲ್ಲಿ ತೋರಿದ ಆಸಕ್ತಿಯ ಫಲವಾಗಿ ಸೆನ್ಸೆಕ್ಸ್ 100 ಅಂಕಗಳ ಜಿಗಿತವನ್ನು ಸಾಧಿಸಿ 32,524.11 ಅಂಕಗಳ ಮಟ್ಟವನ್ನು ತಲುಪಿತು.
ಹಾಗಿದ್ದರೂ ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 26.38 ಅಂಕಗಳ ನಷ್ಟದೊಂದಿಗೆ 32,397.38 ಅಂಕಗಳ ಮಟ್ಟದಲ್ಲೂ ನಿಫ್ಟಿ 9.30 ಅಂಕಗಳ ನಷ್ಟದೊಂದಿಗೆ 10,143.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಟಾಟಾ ಮೋಟರ್, ಗೇಲ್, ಇನ್‌ಫೋಸಿಸ್, ಎಚ್ ಡಿ ಎಫ್ ಸಿ, ಎಸ್‌ಬಿಐ ಶೇರುಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಟಾಟಾ ಮೋಟರ್, ಗೇಲ್, ಟಾಟಾ ಮೋಟರ್ (ಡಿ), ಬಿಪಿಸಿಎಲ್, ಸನ್ ಫಾರ್ಮಾ. ಟಾಪ್ ಲೂಸರ್‌ಗಳು : ಕೋಲ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಪವರ್ ಗ್ರಿಡ್ ಕಾರ್ಪೊರೇಶನ್, ಟಾಟಾ ಪವರ್, ಎಕ್ಸಿಸ್ ಬ್ಯಾಂಕ್.