ಮುಂಬಯಿ : ಅಕ್ಟೋಬರ್ ಶ್ರೇಣಿಯ ಕೊನೇ ದಿನವಾದ ಇಂದು ಗುರುವಾರ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ದಾಖಲೆಯ ಎತ್ತರವನ್ನು ತಲುಪುವ ಮೂಲಕ ದಿನದ ವಹಿವಾಟನ್ನು ಹೊಸ ಹುಮ್ಮಸ್ಸಿನೊಂದಿಗೆ ಕೊನೆಗೊಳಿಸಿತು.
ದಿನಾಂತ್ಯಕ್ಕೆ ಸೆನ್ಸೆಕ್ಸ್ 104.63 ಅಂಕಗಳ ಏರಿಕೆಯೊಂದಿಗೆ 33,147.13 ಅಂಕಗಳ ಮಟ್ಟವನ್ನು ತಲುಪಿತು. ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 48.40 ಅಂಕಗಳ ಏರಿಕೆಯನ್ನು ದಾಖಲಿಸಿ 10,343.80 ಅಂಕಗಳ ಮಟ್ಟವನ್ನು ತಲುಪಿತು.
ಮಾರುತಿ ಸುಜಕಿ, ಎಚ್ ಡಿ ಎಫ್ ಸಿ, ಎಲ್ ಆ್ಯಂಡ್ ಟಿ, ವೇದಾಂತ, ಭಾರ್ತಿ ಇನ್‌ಫ್ರಾಟೆಲ್, ಐಓಸಿ, ಎಚ್‌ಪಿಸಿಎಲ್, ಬಿಪಿಸಿಎಲ್, ಸಿಪ್ಲಾ, ಎಸ್ ಬ್ಯಾಂಕ್ ಮತ್ತು ಸನ್ ಫಾರ್ಮಾ ಶೇರುಗಳು ಶೇ.1ರಿಂದ ಶೇ.5ರ ಏರಿಕೆಯನ್ನು ದಾಖಲಿಸಿದವು.
ಇದಕ್ಕೆ ವ್ಯತಿರಿಕ್ತವಾಗಿ ಎಚ್‌ಸಿಎಲ್ ಟೆಕ್ನಾಲಜಿ, ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಟಿಸಿಎಸ್, ಇಂಡಿಯಾ ಬುಲ್ಸ್ ಹೌಸಿಂಗ್ ಮತ್ತು ಟಿಸಿಎಸ್ ಶೇರುಗಳು ಶೇ.1ರಿಂದ ಶೇ.5ರಷ್ಟು ಕುಸಿದವು.
ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 200ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಗಿತು.