Advertisement
ಇದೇ ವೇಳೆ, ನಿಫ್ಟಿ ಕೂಡ 133 ಅಂಕ ಕುಸಿದು, ದಿನಾಂತ್ಯಕ್ಕೆ 14,238.90ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಕಳೆದ ಮೂರು ವಹಿವಾಟಿನ ದಿನಗಳಲ್ಲಿ ಬಿಎಸ್‌ಇ ಸೆನ್ಸೆಕ್ಸ್ ಒಟ್ಟಾರೆ 1,444.53 ಅಂಕಗಳಷ್ಟು ಪತನಗೊಂಡಿದ್ದರೆ, ನಿಫ್ಟಿ 405.80 ಅಂಕ ಕುಸಿದಿದೆ.
ದೆಹಲಿ ಚಿನಿವಾರ ಮಾರುಕಟ್ಟೆಯಲ್ಲಿ ಹಳದಿ ಲೋಹದ ದರ 141 ರೂ. ಇಳಿಕೆಯಾಗಿ, 10 ಗ್ರಾಂಗೆ 48,509 ರೂ. ಆಗಿದೆ. ಬೆಳ್ಳಿ ದರ 43 ರೂ. ಹೆಚ್ಚಳವಾಗಿ, ಕೆಜಿಗೆ 66,019 ರೂ. ಆಗಿದೆ. ಇನ್ನು, ಡಾಲರ್ ಎದುರು ರೂಪಾಯಿ ಮೌಲ್ಯ 3 ಪೈಸೆ ಏರಿಕೆಯಾಗಿ, 72.94 ರೂ. ಆಗಿದೆ. ಇದನ್ನೂ ಓದಿ:ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಮಸೀದಿಗೆ ಸ್ವಾತಂತ್ರ್ಯ ಸೇನಾನಿ “ಅಹ್ಮದುಲ್ಲಾ ಶಾ’ ಹೆಸರು
Related Articles
ಕಳೆದ ವರ್ಷ ಭಾರತಕ್ಕೆ ಶೇ.13ರಷ್ಟು ಹೆಚ್ಚು ವಿದೇಶಿ ನೇರ ಬಂಡವಾಳ (ಎಫ್ಡಿಐ) ಹರಿದುಬಂದಿದೆ. ಕೊರೊನಾ ಸೋಂಕಿನಿಂದಾಗಿ ಅಮೆರಿಕ, ಯು.ಕೆ. ಮತ್ತು ರಷ್ಯಾದಂತಹ ದೇಶಗಳಲ್ಲಿ ಬಂಡವಾಳದ ಪ್ರಮಾಣವು ಗಣನೀಯವಾಗಿ ಕುಗ್ಗಿದ್ದರೆ, ಅದರ ಲಾಭವನ್ನು ಭಾರತ ಮತ್ತು ಚೀನಾ ಪಡೆದವು ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. 2019ಕ್ಕೆ ಹೋಲಿಸಿದರೆ 2020ರಲ್ಲಿ ಜಾಗತಿಕ ವಿದೇಶಿ ನೇರ ಬಂಡವಾಳದ ಪ್ರಮಾಣ ಶೇ.42ರಷ್ಟು ಕುಸಿದಿದೆ. ಆದರೆ, ಭಾರತದಲ್ಲಿ ಈ ಪ್ರಮಾಣ ಶೇ.13ರಷ್ಟು ಹೆಚ್ಚಳವಾಗಿದೆ ಎಂದಿದೆ ವರದಿ.
Advertisement