ಮುಂಬಯಿ : ವಿಶ್ವ ಶೇರು ಮಾರುಕಟ್ಟೆಗಳಲ್ಲಿ ಧನಾತ್ಮಕತೆ ತೋರಿಬಂದಿದ್ದು ದೇಶೀಯ ಹೂಡಿಕೆ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಮುಂಚೂಣಿ ಶೇರುಗಳ ಖರೀದಿಯಲ್ಲಿ ತೋರಿದ ಅಪರಿಮಿತ ಆಸಕ್ತಿಯ ಫಲವಾಗಿ ಇಂದು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯ 10,153.10 ಅಂಕಗಳಿಗೆ ತಲುಪುವ ಮೂಲಕ ಹೊಸ ದಾಖಲೆಯ ಎತ್ತರವನ್ನು ಸಾಧಿಸಿತು.
ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 151.75 ಅಂಕಗಳ ಮುನ್ನಡೆಯೊಂದಿಗೆ 32,423.76 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ನಿಫ್ಟಿ 67.70 ಅಂಕಗಳ ಮುನ್ನಡೆಯನ್ನು ಪಡೆದು ಕೊಂಡು ದಿನದ ವಹಿವಾಟನ್ನು 10,153.10 ಅಂಕಗಳ ಹೊಸ ದಾಖಲೆಯ ಎತ್ತರದಲ್ಲಿ ಕೊನೆಗೊಳಿಸಿತು.
ಸೆನ್ಸೆಕ್ಸ್ ಕಳೆದ ಏಳು ದಿನಗಳ ನಿರಂತರ ವಹಿವಾಟಿನಲ್ಲಿ ಏರು ಹಾದಿಯಲ್ಲಿ ಸಾಗಿ ಬಂದಿದ್ದು ಈ ತನಕ ಅದು ಒಟ್ಟು 610.64 ಅಂಕಗಳನ್ನು ಸಂಪಾದಿಸಿರುವುದು ವಿಶೇಷವೆನಿಸಿದೆ.
ಇಂದಿನ ಟಾಪ್ ಗೇನರ್‌ಗಳು : ಭಾರ್ತಿ ಇನ್‌ಫ್ರಾಟೆಲ್, ಬಜಾಜ್ ಆಟೋ, ಐಡಿಯಾ ಸೆಲ್ಯುಲರ್, ಎಚ್‌ಯುಎಲ್, ಇಂಡಸ್‌ಇಂಡ್ ಬ್ಯಾಂಕ್.
ಟಾಪ್ ಲೂಸರ್‌ಗಳು : ಒಎನ್‌ಜಿಸಿ, ಟಾಟಾ ಸ್ಟೀಲ್, ಐಟಿಸಿ, ಅಂಬುಜಾ ಸಿಮೆಂಟ್ಸ್, ಟಾಟಾ ಪವರ್.