Advertisement

Nidumamidi Mutt: ಸಾಹಿತ್ಯಕ್ಕೆ ನಿಡುಮಾಮಿಡಿ ಮಠದ ಕೊಡುಗೆ ಅಪಾರ

05:02 PM Sep 05, 2023 | Team Udayavani |

ಬಾಗೇಪಲ್ಲಿ: ತಾಲೂಕಿನ ಗೂಳೂರುನಲ್ಲಿರುವ ನಿಡುಮಾಮಿಡಿ ಮಹಾ ಸಂಸ್ಥಾನ ಮಠ ದಕ್ಷಿಣ ಭಾರತದ ಪ್ರಾಚೀನ ಪೀಠಗಳಲ್ಲಿ ಒಂದು, ಸಾಮಾಜಿ ಕವಾಗಿ, ಧಾರ್ಮಿಕರವಾಗಿ, ಸಾಹಿತ್ಯಕವಾಗಿ ಪ್ರಾಂತ್ಯ ಭೇದವಿಲ್ಲದೆ ಸರ್ವರನ್ನು ಸಮಾನ ದೃಷ್ಟಿಯಿಂದ ಆದರಿಸಿದೆ.

Advertisement

ಹೌದು, 20ನೇ ಶತಮಾನದಲ್ಲಿ 300 ಗ್ರಂಥಗ ಳನ್ನು ರಚಿಸಿ ಪ್ರಕಟಿಸಿ ಕನ್ನಡ ಸಾಹಿತ್ಯ ಸಂಸ್ಕೃತಿಗೆ ಹಾಗೂ ಭಾರತಿಯ ಧರ್ಮ ದರ್ಶನಕ್ಕೆ ವಿಶಿಷ್ಟ ಕೊಡುಗೆ ಸಲ್ಲಿಸಿರುವ ಡಾ. ಜಚನಿ ಅವರು. ಈ ನಿಡುಮಾಮಿಡಿ ಪೀಠಕ್ಕೆ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡುನಲ್ಲಿ ನೂರಕ್ಕೂ ಹೆಚ್ಚು ಶಾಖಾ ಮಠಗಳಿದ್ದು ದಕ್ಷಿಣ ಭಾರತ 4 ರಾಜ್ಯಗಳಲ್ಲಿ ಲಕ್ಷಾಂತರ ಜನ ಶಿಷ್ಯರಿದ್ದಾರೆ.

ಶೂನ್ಯಮಾಸದಲ್ಲಿ ಪೀಠಾರೋಹಣ: ಈವರೆಗೆ ಈ ಪೀಠದಲ್ಲಿ 39 ಪೀಠಾಧೀಶರು ಸೇವೆ ಸಲ್ಲಿಸಿದ್ದಾರೆ. ಶ್ರೀವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರು ಶ್ರೀಜಚನಿ ಉತ್ತರಾಧಿಕಾರಿಯಾಗಿ ಡಿಸೆಂಬರ್‌ 27, 1990ರಂದು ನಿಡುಮಾಮಿಡಿ ಪೀಠಕ್ಕೆ 40ನೇ ಪೀಠಾಧಿಪತಿಗಳಾದರು. ಪೂಜ್ಯರು ಅಶುಭವೆನಿಸಿದ ಶೂನ್ಯಮಾಸದಲ್ಲಿ ಪೀಠಾರೋಹಣ ಮಾಡಿದರು. ಪೀಠಾಧಿಕಾರದ ಸಂದರ್ಭದಲ್ಲಿ ನಾನು ಪ್ರಾಣ ಇರುವವರಿಗೆ ಜಗದ್ಗುರುವೆಂದು ಕರೆದುಕೊಳ್ಳುವುದಿಲ್ಲ ಪಲ್ಲಕ್ಕಿ ಹತ್ತುವುದಿಲ್ಲ, ಕೀರಿಟ ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಅದರಂತೆ ನಡೆಯುತ್ತಿದ್ದಾರೆ. ಭಾರತದ ಮಠ ಪೀಠಗಳ ಇತಿಹಾಸದಲ್ಲಿ ಸಾಂಪ್ರದಾಯಕ ಬಿರುದುಗಳು ಹಾಗೂ ಕಿರೀಟ ಪಲ್ಲಕ್ಕಿಯನ್ನು ತ್ಯಜಿಸಿದ ಮೊದಲ ಪೀಠಾಧೀಶರಾಗಿದ್ದಾರೆ. ಸ್ವಾಮೀಜಿ ಕರ್ನಾಟಕದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಹೋರಾಟಗಳಿಗೆ ನೈತಿಕ ಸ್ಥೈರ್ಯ ವನ್ನು ತುಂಬಿದವರಾಗಿದ್ದಾರೆ. ಈ ಸಮುದಾಯಗಳ ಮೇಲೆ ಎಲ್ಲೆ ದೌರ್ಜನ್ಯ ನಡೆಯಲಿ ಅವರ ಪರವಾಗಿ ಧ್ವನಿ ಎತ್ತುವ ಸ್ವಾಮೀಜಿ ಕೋಮು ಸೌಹಾರ್ದ ನಿರ್ಮಾಣದಲ್ಲಿ ವಿಶೇಷವಾದ ಪಾತ್ರವಹಿಸಿದ್ದಾರೆ.

ಧರ್ಮಕ್ಕಿಂತ ದೇಶ ದೊಡ್ಡದೆನಿಸಬೇಕು ದೇವರಿಗಿಂತ ಮನುಷ್ಯ ದೊಡ್ಡವನಾಗಬೇಕು ಎಂದು ಪ್ರತಿಪಾದಿಸುತ್ತಿರುವ ಸ್ವಾಮೀಜಿ ರಾಷ್ಟ್ರದ ಏಕತೆ ಸಮಗ್ರತೆ ಉಳಿವಿಗಾಗಿ ಕೋಮು ಕೋಮುಗಳ ನಡುವೆ ಇರುವ ದ್ವೇಷವನ್ನು ಹೋಗಲಾಡಿಸಿ, ಶಾಂತಿ ಸಾಮರಸ್ಯ ಸಹಬಾಳ್ವೆಗಾಗಿ ತಮ್ಮ ಕೃತಿಗಳು ಪತ್ರಿಕಾ ಬರಹಗಳು ಭಾಷಣಗಳು ರಚನಾತ್ಮಕ ಕಾರ್ಯಗಳ ಮೂಲಕ ಮೂಲಕ ಜನಮತವನ್ನು ನಿರಂತರವಾಗಿ ಜಾಗೃತಿಗೊಳಿಸುತ್ತಿರುವುದು ಈ ನಾಡಿನ ಹೆಮ್ಮೆಯ ಸಂಗತಿ.

ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 16 ವರ್ಷಗಳಾಗಿರುವುದು ನನಗೆ ಸಂತಸ ತಂದಿದೆ.ಆದರೆ ಜಿಲ್ಲೆಯ ಶಾಸಕರು ಮತ್ತು ಲೋಕಸಭಾ ಸದಸ್ಯರು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ. ಆಂಧ್ರಗಡಿಯಲ್ಲಿರುವ ಈ ಜಿಲ್ಲೆಯಲ್ಲಿ ಇಂದಿಗೂ ಕೂಡ ಮೂಲಭೂತ ಸಮಸ್ಯೆಗಳು ತಾಂಡವಾಡುತ್ತಿದ್ದು, ಸರ್ಕಾರ ಕೂಡ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ. ವೀರಭದ್ರಚನ್ನ ಮಲ್ಲ ಸ್ವಾಮೀಜಿ

Advertisement

ಜಿ.ಎಂ.ಗುರುಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next