Advertisement
ಕೊಠಡಿ ದುರಸ್ತಿಶಾಲೆಯ ಹಳೆಯ ಕಟ್ಟಡದ ಎರಡು ತರಗತಿ ಕೊಠಡಿಗಳ ಛಾವಣಿ ಶಿಥಿಲಗೊಂಡ ಕಾರಣ, ದುರಸ್ತಿಗಾಗಿ ಕಳೆದ ಶೈಕ್ಷಣಿಕ ವರ್ಷದಲ್ಲಿ ತಾ.ಪಂ. ಹಾಗೂ ಜಿ.ಪಂ.ಗೆ ಮನವರಿಕೆ ಮಾಡಲಾಗಿತ್ತು. ತಾ.ಪಂ. ಸದಸ್ಯ ಹರೀಶ್ ಬಿಜತ್ರೆ ಅವರು ಇದನ್ನು ಪರಿಶೀಲಿಸಿ, 2016-17ನೇ ಸಾಲಿನಲ್ಲಿ ಒಂದು ಕೊಠಡಿಯ ಮಾಡು ದುರಸ್ತಿಗೆ ಅನುದಾನ ಮಂಜೂರು ಮಾಡಿದರು. ಅದರಂತೆ, ದುರಸ್ತಿಯೂ ಆಗಿದೆ. ಇನ್ನೊಂದು ಕೊಠಡಿಯ ಛಾವಣಿ ಮಾಡು ಮತ್ತು ಎರಡು ಬಾಗಿಲುಗಳ ದುರಸ್ತಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು 2017-18ನೇ ಸಾಲಿನ ಮಾರ್ಚ್ ತಿಂಗಳಲ್ಲಿ ಅನುದಾನ ಮಂಜೂರು ಮಾಡಿದರು. ಛಾವಣಿ ಹಾಗೂ ಬಾಗಿಲುಗಳ ದುರಸ್ತಿಗೆ ಸಹಕರಿಸಿದ್ದಾರೆ ಎಂದು ಎಸ್‌ಡಿಎಂಸಿ ಅಧ್ಯಕ್ಷರು ತಿಳಿಸಿದ್ದಾರೆ.
ಹಳೆಯ ಕಟ್ಟಡವನ್ನು ತೆಗೆದು 2006ರಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಉದ್ಘಾಟನೆಗೂ ಮೊದಲು ಸುಣ್ಣ-ಬಣ್ಣ
ಬಳಿಯಲಾಗಿತ್ತು. ಆಮೇಲೆ ಬಣ್ಣ ಮಾಸಿದ್ದು, ಹೊಸದಾಗಿ ಬಣ್ಣ ಬಳಿಯಲು ಇಲಾಖೆ ಅನುದಾನ ಮಂಜೂರು ಮಾಡಬೇಕಿದೆ. ವಾರ್ಷಿಕೋತ್ಸವ ಹಾಗೂ ಇತರ ಸಭಾ ಕಾರ್ಯಕ್ರಮಗಳನ್ನು ನಡೆಸಲು ವೇದಿಕೆಯ ಅಗತ್ಯವಿದೆ. ಗ್ರಾಮದ ಕೇಂದ್ರ ಶಾಲೆಯಾದ ಕಾರಣ ಇಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಹೀಗಾಗಿ, ರಂಗ ಮಂದಿರ ನಿರ್ಮಾಣ ಮಾಡುವಂತೆ ಇಲಾಖೆಗೆ ಬೇಡಿಕೆ ಸಲ್ಲಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ. ಹಳ್ಳಿ ಮಕ್ಕಳು ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮಾಡುವಂತಾಗಲು ಆಟದ ಮೈದಾನ, ಕ್ರೀಡೋಪಕರಣಗಳು, ದೈಹಿಕ ಶಿಕ್ಷಣ ಶಿಕ್ಷಕರು ಇರಬೇಕು. ಈ ಬಗ್ಗೆ ಸರಕಾರ ಮುತುವರ್ಜಿ ವಹಿಸಿ, ಶಾಲೆಗೆ ಆಟದ ಮೈದಾನ ಒದಗಿಸಿಕೊಡಬೇಕು. ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಮಾಡಬೇಕು.
Related Articles
ಶಾಲೆ ಕಟ್ಟಡ ನಿರ್ಮಾಣ ಆದ ಮೇಲೆ ಸುಣ್ಣ – ಬಣ್ಣ ಬಳಿದಿಲ್ಲ. ಇದಕ್ಕೆ ಸಂಬಂಧಪಟ್ಟ ಇಲಾಖೆಗೆ ಬೇಡಿಕೆ ಸಲ್ಲಿಸಲು ಎಸ್‌ಡಿಎಂಸಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಆದುದರಿಂದ ಇದಕ್ಕೆ ಜನಪ್ರತಿನಿಧಿಗಳ, ಇಲಾಖಾಧಿಕಾರಿಗಳ ಸಹಕಾರದ ನಿರೀಕ್ಷೆಯಲ್ಲಿದ್ದೇವೆ.
– ತೋಪಯ್ಯ ಕೆ., ಮುಖ್ಯ ಗುರುಗಳು
Advertisement
ವಿಶೇಷ ವರದಿ