Advertisement
ಕಲ್ಲಿನ ಕೋರೆಗಳಿಂದ ಪಂಚಾಯತ್ ರಸ್ತೆಗಳು ಹಾಳಾಗುತ್ತಿವೆ, ನಾದುರಸ್ತಿಯಲ್ಲಿವೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರು, ಇತರ ಸದಸ್ಯರು ಆಗ್ರಹಿಸಿದರು. ಮೊದಲಿಗೆ ಎಚ್ಚರಿಕೆಯನ್ನು ಕೊಡುವುದು, ಸ್ಪಂದಿಸದಿದ್ದರೆ ಬಳಿಕ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು. ನಿರ್ಕಜೆ-ಮುಂಡೆಕೊಚ್ಚಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಹತ್ತಿರದ ಕೆಂಪು ಕಲ್ಲಿನ ಕೋರೆಯಿಂದ ಬಂದ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಶೀಘ್ರದಲ್ಲಿ ಸ್ಥಳವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು.
ಕಾಮಗಾರಿಯನ್ನು ವೀಕ್ಷಿಸಿ ಕಳಪೆ ಎಂದು ಕಂಡುಬಂದರೆ ಪಂಚಾಯತ್ ಗಮನಕ್ಕೆ ತನ್ನಿ. ಕಾಮಗಾರಿ ಮುಗಿದ ಮೇಲೆ ಸರಿಯಾಗಿಲ್ಲ, ಕಳಪೆಯಾಗಿದೆ ಎಂದರೆ ಏನು ಮಾಡಲು ಸಾಧ್ಯ? ಕಳಪೆಯಾಗದ ರೀತಿಯಲ್ಲಿ ನೋಡಿಕೊಳ್ಳುವ ಹಕ್ಕು ಗ್ರಾಮಸ್ಥರಿಗೆ ಇದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಉಪಾಧ್ಯಕ್ಷ ಅವಿನಾಶ್ ರೈ, ಸದಸ್ಯರಾದ ಬಾಲಚಂದ್ರ ರೈ, ಲಕ್ಷ್ಮಣ, ನಂದಿನಿ ರೈ, ಪ್ರತಿಮಾ ಪಿ., ಗುಲಾಬಿ, ವಿಷ್ಣು ಭಟ್, ಆಶಾ ಕಾರ್ಯಕರ್ತೆ ಪವಿತ್ರಾ ಉಪಸ್ಥಿತರಿದ್ದರು. ಪಿಡಿಒ ಸಂಧ್ಯಾಲಕ್ಷ್ಮೀ ಸ್ವಾಗತಿಸಿ, ವಂದಿಸಿದರು. ಸಿಬಂದಿ ರೇವತಿ ಪಿ., ವಿನೀತ್ ಕುಮಾರ್, ಜಯ, ಶಂಸೀನ ಸಹಕರಿಸಿದರು.
Related Articles
ನೆರೆಯ ಪಂಚಾಯತ್ ಬೆಟ್ಟಂಪಾಡಿ ವ್ಯಾಪ್ತಿಯಲ್ಲಿ ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ನಡೆದಿದೆ. ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ಟ್ಯಾಂಕಿಗಳಲ್ಲಿ ಸುರಕ್ಷತೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.
Advertisement
ಪಂಪ್ ಶೆಡ್‌ಗಳಿಗೆ ಬೀಗ ಆಳವಡಿಸುವಂತೆ ಮತ್ತು ವಿದ್ಯುತ್ ಪರಿವರ್ತಕಗಳ ಫ್ಯೂಸ್‌ಗಳು ಮಕ್ಕಳಿಗೆ ಎಟುಕದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸದಸ್ಯ ಲಕ್ಷ್ಮಣ ಒತ್ತಾಯಿಸಿದರು. ವಾರ್ಡ್ ಸದಸ್ಯರ ನೇತೃತ್ವದಲ್ಲಿ ಟ್ಯಾಂಕಿ ಸ್ವತ್ಛಗೊಳಿಸುವಂತೆ ಪಿಡಿಒ ಹೇಳಿದರು. ತೆರೆದ ಟ್ಯಾಂಕಿಗಳಿಗೆ ಮುಚ್ಚಳ ಹಾಗೂ ಬೀಗ ಆಳವಡಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಎಂಜಿನಿಯರ್‌ಗಳು ಸ್ಪಂದಿಸುತ್ತಿಲ್ಲಜಿ.ಪಂ. ಎಂಜಿನಿಯರ್ ಗ್ರಾ.ಪಂ. ಅಭಿವೃದ್ಧಿಗೆ ಸ್ಪಂದಿಸುವುದಿಲ್ಲ. ಗ್ರಾಮದಲ್ಲಿ ಹಲವು ಕ್ರಿಯಾ ಯೋಜನೆಗಳು ಬಾಕಿ ಇವೆ. ಮುಖ್ಯ ಕೆಲಸಗಳು ಎಂಜಿಯರ್‌ಗಳ ಮಾರ್ಗದರ್ಶನದಲ್ಲಿ ನಡೆಯುತ್ತವೆ. ಎಇಂಜಿನಿಯರ್ ಸ್ಪಂದಿಸದಿದ್ದರೆ ಕೆಲಸಗಳು ಬಾಕಿಯಾಗುತ್ತವೆ ಎಂದು ಸದಸ್ಯರು ಹೇಳಿದರು. ಕೂಡಲೇ ಸಂಬಂಧಪಟ್ಟ ಎಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಚರ್ಚೆ ನಡೆಯಿತು.