Advertisement

ಗಂಧದ ಕುಡಿ ಚಿತ್ರದಲ್ಲಿ ಮಿಂಚಲಿರುವ ನಿಧಿ ಶೆಟ್ಟಿ 

02:28 PM Jan 16, 2018 | Team Udayavani |

ಶೀಘ್ರದಲ್ಲೇ  ಬಿಡುಗಡೆಗೊಳ್ಳಲಿರುವ  ಹಿಂದಿಯಲ್ಲಿ  ಚಂದನ್‌ ವನ್‌ ಕನ್ನಡದಲ್ಲಿ  ಗಂಧದ ಕುಡಿ ಚಲನಚಿತ್ರದಲ್ಲಿ  ಬಹುಮುಖ್ಯ ಪಾತ್ರದಲ್ಲಿ  ಮುಂಬಯಿ ಮೀರಾ ಭಾಯಂದರ್‌ನ ಬಾಲ ಕಲಾ ವಿದೆ ನಿಧಿ ಎಸ್‌. ಶೆಟ್ಟಿ ಕಾಣಿಸಿಕೊಳ್ಳಲಿ ದ್ದಾರೆ.  ಮೂಲತಃ ಮೂಡುಕೊಣಾಜೆ ಕಾಪು ಹೌಸ್‌ ಸಂಜೀವ ಶೆಟ್ಟಿ  ಮತ್ತು ಬಜಗೋಳಿ ಮುಡಾರು ಮನೆ  ಸುನೀತಾ ಎಸ್‌.  ಶೆಟ್ಟಿ ದಂಪತಿಯ ಪುತ್ರಿಯಾಗಿರುವ ನಿಧಿಯದ್ದು ಬಹುಮುಖ ಪ್ರತಿಭೆ.

Advertisement

ಮುಂಬಯಿ ಮೀರಾ ಭಾಯಂದರ್‌ನ  ಪ್ರಸಿದ್ಧ ರಾಧಾಕೃಷ್ಣ ಆಕಾಡೆಮಿಯ ಸುಕನ್ಯಾ ಭಟ್‌ ಇವರ  ಶಿಷ್ಯೆಯಾಗಿರುವ ಇವರು ಹಿಂದುಸ್ತಾನಿ ಸಂಗೀತವನ್ನು, ಅಂಚನ್‌ ಅಧಾವ್‌ ಅವರಿಂದ ಮತ್ತು ಪಾಶ್ಚಾತ್ಯ, ಜಾನಪದ ನೃತ್ಯವನ್ನು ಸಚಿನ್‌ ಜಾಧವ್‌ ಅವರಿಂದ, ಭಕ್ತೀತೆಗಳನ್ನು ಶ್ರೀಧರ ಶೆಟ್ಟಿ ಅವರಿಂದ ಕಲಿಯುತ್ತಿದ್ದಾಳೆ. ಮೀರಾ-ಭಾಯಂದರ್‌ನ ಸೈಂಟ್‌ ಫ್ರಾನ್ಸಿಸ್‌ ಹೈಸ್ಕೂಲ್‌ನ ಆರನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಇವರು ಅರಳು ಮಲ್ಲಿಗೆ  ಮತ್ತು ನಾಟ್ಯಮಯೂರಿ ಪ್ರಶಸ್ತಿಯನ್ನು ಮೂಡಿಗೇರಿಸಿಕೊಂಡಿದ್ದಾರೆ. ಹಲವಾರು ಕಡೆ ನೃತ್ಯ ಪ್ರದರ್ಶನವನ್ನು ನೀಡಿ ಎಲ್ಲರ  ಮನರಂಜಿಸಿ¨ªಾಳೆ.

ಕೆ. ಸತ್ಯೇಂದ್ರ ಪೈ ಮತ್ತು  ಕೃಷ್ಣಮೋಹನ್‌ ಪೈ ಇವರ ಜತೆಯಲ್ಲಿ  ಸಂತೋಷ್‌ ಕುಮಾರ್‌ ಕಟೀಲು   ನಿರ್ದೇಶನದಲ್ಲಿ   ಅದ್ದೂರಿ ಖರ್ಚು ವೆಚ್ಚ ದ  ಮಕ್ಕಳ ಚಲನಚಿತ್ರವು ಇದಾಗಿದ್ದು. ಪ್ರಾಯಶಃ ಚಿನ್ನಾರಿಮುತ್ತ ಚಲನಚಿತ್ರದ ಅನಂತರ  ಅದ್ದೂರಿ ಖರ್ಚಿನ ಚಿತ್ರ ಇದುವೇ ಎಂದೆನ್ನಬಹುದು.  ಮಕ್ಕಳ ಮೇಲೆ  ಪಾಲಕರ ಹಾರೈಕೆಯ ಬಗ್ಗೆ ಕಥೆ ಉತ್ತಮ ಸಾರಾಂಶದೊಂದಿಗೆ ಮೂಡಿಬಂದಿದೆ.

ದೇಶಪ್ರೇಮದ ಚಿತ್ರದಲ್ಲಿ ಹಾಡುಗಳಿದ್ದು, ಪ್ರಕೃತಿಯ ಮೈಮರೆಯುವ ರಮ್ಯ ಮನ ಮೋಹಕ ದೃಶ್ಯಗಳು  ಚಿತ್ರದಲ್ಲಿ ನಿರ್ದೇಶಕನ  ಕಠಿನ ಪರಿಶ್ರಮದಿಂದ ಸೆರೆಹಿಡಿಯಲ್ಪಟ್ಟಿವೆ. ಪ್ರಕೃತಿಯ ಬಗ್ಗೆ ರಹಸ್ಯವಾದ ಕೆಲವು ವಿಷಯಗಳನ್ನು ಕಥೆಯಲ್ಲಿ ತೆರೆದಿಡಲಾಗಿದೆ. ಈಗಾಗಲೇ ಕನಸು ಕಣ್ಣು ತೆರೆದಾಗ ಚಿತ್ರವನ್ನು ಚಿತ್ರ ಪ್ರೇಮಿಗಳಿಗೆ ನೀಡಿರುವ ಸಂತೋಷ್‌ ಕುಮಾರ್‌ ಕಟೀಲು ಇವರ ಈ ಬಹು ಭಾಷಾ ಚಿತ್ರ ಹಿಂದಿಯಲ್ಲಿ  ಚಂದನ್‌ವನ್‌  ಕನ್ನಡದಲ್ಲಿ  ಗಂಧದ ಕುಡಿ  ಬಹಳ ಯಶಸ್ವಿಯ ಚಿತ್ರವಾಗಲಿದೆ. ರಮೇಶ್‌ ಭಟ್‌. ಶಿವಧ್ವಜ್‌, ಜ್ಯೋತಿ ರೈ ಬಹುಮುಖ್ಯ ಪಾತ್ರದಲ್ಲಿದ್ದರೆ. ಮುಂಬಯಿಯ ಯಕ್ಷಗಾನ ಕಲಾವಿದ ಸದಾ ನಂದ ಕಟೀಲು, ಕೃಷ್ಣ ರಾಜ್‌ ಶೆಟ್ಟಿ ಮುಂಡ್ಕೂರು, ಅರವಿಂದ ಕೊಜಕ್ಕೊಳಿ, ಚಂದ್ರಿಕಾ ರಾವ್‌ ಮುಂತಾದ ಪ್ರಸಿದ್ಧ ಕಲಾವಿದರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next