Advertisement

ಫೆ 5ರವರೆಗೆ ನಿಧಿ ಸಮರ್ಪಣಾ ಅಭಿಯಾನ

02:01 PM Jan 04, 2021 | Team Udayavani |

ರಾಮನಗರ: ಜ.15 ಸಂಕ್ರಾಂತಿಯಿಂದ ಫೆ.5ರವರೆಗೆ ನಿಧಿ ಸಮರ್ಪಣಾಅಭಿಯಾನ ನಡೆಯಲಿದೆ. ಸಾಹಿತ್ಯಸಾಂಸ್ಕೃತಿಕ, ಔದ್ಯಮಿಕ, ರಾಜಕೀಯ,ಸೇವಾ, ಧಾರ್ಮಿಕ ಕ್ಷೇತ್ರಗಳ ಪ್ರಮುಖರುಈ ಅಭಿಯಾನವನ್ನು ನಡೆಸಿಕೊಡುವರುಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕ್ಷೇತ್ರಕಾರ್ಯವಾಹಕರಾದ ನಾ.ತಿಪ್ಪೆಸ್ವಾಮಿ ತಿಳಿಸಿದರು.

Advertisement

ನಗರದ ಕಾಮಣ್ಣನಗುಡಿ ವೃತ್ತದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ರಾಮನಗರ ಜಿಲ್ಲೆಯ ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿಮಾತನಾಡಿ, ರಾಮನ ದೇವಾಲಯ ನಿರ್ಮಾಣ ಮಾಡುವ ಹೋರಾಟಕ್ಕೆ 500ವರ್ಷಗಳ ಇತಿಹಾಸವಿದೆ. ಅಡ್ವಾಣಿಯವರು ರಾಮಜನ್ಮಭೂಮಿ ಹೋರಾಟದ ಮುಂಚೂಣಿಯ ನಾಯಕರಾಗಿರಥಯಾತ್ರೆ ಮಾಡಿ ಜನ ಜಾಗೃತಿಮೂಡಿಸಿದರು.

ಸರ್ವೋಚ್ಚ ನ್ಯಾಯಾಲಯದಲ್ಲಿ ಸುದೀರ್ಘ‌ ವಾದಮಂಡನೆಯ ನಂತರ ವಿವಾದಿತ ಭೂಮಿಯಲ್ಲಿ ಪ್ರಭು ಶ್ರೀರಾಮಚಂದ್ರನ ಮಂದಿರ ಇತ್ತುಎಂಬುದಕ್ಕೆ ಪ್ರಾಕ್ತನ ಶಾಸ್ತ್ರ ಆಧಾರಗಳನ್ನುಪುರಸ್ಕರಿಸಿ, ತೀರ್ಪು ನೀಡಿದೆ ಎಂದು ಇತಿಹಾಸದ ಕ್ಷಣಗಳನ್ನು ಸ್ಮರಿಸಿದರು.

10ರಿಂದ 2 ಸಾವಿರದ ವರೆಗೆ ಕೂಪನ್‌ ಲಭ್ಯ: ಸರ್ಕಾರದಿಂದ ಯಾವುದೇ ಹಣಕಾಸಿನ ನೆರವು ಪಡೆಯದೆ ನಿರ್ಮಾಣ ಮಾಡಬೇಕು. ರಾಷ್ಟ್ರೀಯ ಸ್ಮಾರಕ ಆಗಬೇಕಾಗಿರುವ ಉದ್ದೇಶ ಹೊಂದಿದೆ. ಪ್ರತಿ ಗ್ರಾಮದಲ್ಲಿ ಪ್ರತಿ ಕುಟುಂಬವನ್ನು ಸಂಪರ್ಕಿಸಿ ನಿಧಿ ಸಮರ್ಪಣಾ ಅಭಿಯಾನ ನಡೆಯಲಿದೆ.ರಾಮಮಂದಿರ ನಿರ್ಮಾಣದ ಮೂಲಕಸ್ವಾವಲಂಬಿ, ಸಶಕ್ತ, ಸಮೃದ್ಧಿ ರಾಷ್ಟ್ರನಿರ್ಮಾಣದ ಆಶಯವನ್ನು ಅಭಿಯಾಹೊಂದಿದೆ. 10ರಿಂದ 2 ಸಾವಿರದವರೆಗೆಕೂಪನ್‌ ಮೂಲಕ ಸಂದಾಯಮಾಡಬಹುದು. 2 ಸಾವಿರದಿಂದ 20ಸಾವಿರದವರೆಗಿನ ನಿಧಿಯನ್ನು ರಶೀತಿ ಪಡೆದು ಸಲ್ಲಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಮಠದಿಂದ 25 ಸಾವಿರ ರೂ. ದೇಣಿಗೆ: ಕನಕಪುರದ ಮರಳೇಗವಿ ಮಠದ ಶ್ರೀಡಾ.ಶಿವರುದ್ರಮಹಾ ಸ್ವಾಮಿಗಳು ತಮ್ಮಆಶೀವರ್ಚನದಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಮೊತ್ತಯಾವುದಾದರೂ ನೀಡುವಿಕೆಸಮರ್ಪಣಾಭಾವದಿಂದ ನೀಡುವುದುಮುಖ್ಯ. ಕೋಟ್ಯಂತರ ಜನರ ಸಂಕಲ್ಪ ಶಕ್ತಿಯಿಂದ ಮಂದಿರ ನಿರ್ಮಾಣಆಗುತ್ತಿದ್ದು, ತಮ್ಮ ಶಕ್ತಿ ಅನುಸಾರ ನಿಧಿಸಮರ್ಪಣ ಅಭಿಯಾನದಲ್ಲಿಪಾಲ್ಗೊಂಡು ಕೃತಾರ್ಥರಾಗಿ ಎಂದರು.

Advertisement

ಈ ವೇಳೆ ತಮ್ಮ ಮಠದಿಂದ 25 ಸಾವಿರನಿಧಿ ಸಮರ್ಪಣೆ ಮಾಡಿದರು.ಬೇವೂರು ಮಲ್ಲಿಕಾರ್ಜುನ ಸ್ವಾಮಿ ಮಠದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಆಶೀವರ್ಚನನೀಡಿದರು. ವಿಧಾನ ಪರಿಷತ್‌ ಸದಸ್ಯರಾದ ಸಿ.ಪಿ. ಯೋಗೇಶ್ವರ್‌ ಸೇರಿದಂತೆ ಜಿಲ್ಲೆಯ ವಿವಿಧ ಕ್ಷೇತ್ರಗಳ ಪ್ರಮುಖರು,ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನಸ್ವಾಮೀಜಿಯಧ್ವಯರು ಮತ್ತು ಎಂ.ಎಲ್‌.ಸಿ ಸಿ.ಪಿ.ಯೋಗೇಶ್ವರ್‌ ಅವರು ಛತ್ರದಬೀದಿಯಲ್ಲಿರುವ ಶ್ರೀರಾಮನ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಅಲ್ಲಿಂದ ಪೂರ್ಣ ಕುಂಭ ಕಲಶ ಮತ್ತು ಗೋಮಾತೆಯೊಂದಿಗೆ ಗಣ್ಯರನ್ನು ವೇದಿಕೆಗೆ ಕರೆತರಲಾಯಿತು

Advertisement

Udayavani is now on Telegram. Click here to join our channel and stay updated with the latest news.

Next