Advertisement
ನಯನ್ ಮೊಂಗಿಯಾ ಮೊದಲ ಆಟಗಾರರಾಗಿದ್ದಾರೆ. 1995ರಲ್ಲಿ ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ಮೊಂಗಿಯಾ ಹಿಟ್‌ವಿಕೆಟ್ ಆಗಿ ಔಟಾಗಿದ್ದರು. ಲೆಜೆಂಡರಿ ಸ್ಪಿನ್ನರ್ ಅನಿಲ್ ಕುಂಬ್ಳೆ ನ್ಯೂಜಿಲ್ಯಾಂಡ್ ವಿರುದ್ಧ 2003ರಲ್ಲಿ ನಡೆದ ಪಂದ್ಯದಲ್ಲಿ ಹಿಟ್‌ವಿಕೆಟ್ ಆಗಿದ್ದರು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ 2008ರಲ್ಲಿ ಆಸ್ಟ್ರೇಲಿಯ ವಿರುದ್ಧ ಮತ್ತು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 2011ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಹಿಟ್‌ವಿಕೆಟ್ ಆಗಿ ಔಟಾಗಿದ್ದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಆಟಗಾರರು 158 ಬಾರಿ ಹಿಟ್‌ವಿಕೆಟ್ ಮೂಲಕ ಔಟಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಮಾಜಿ ನಾಯಕ ಲಾಲಾ ಅಮರ್‌ನಾಥ್ ಹಿಟ್‌ವಿಕೆಟ್ ಮೂಲಕ ಔಟಾದ ಭಾರತದ ಮೊದಲ ಆಟಗಾರರಾಗಿದ್ದಾರೆ. 1949ರಲ್ಲಿ ಚೆನ್ನೈಯಲ್ಲಿ ನಡೆದ ಟೆಸ್ಟ್‌ನಲ್ಲಿ ಅವರು ವೆಸ್ಟ್‌ಇಂಡೀಸ್‌ನ ಜಿಮ್ ಟ್ರಿಮ್ ಅವರ ಬೌಲಿಂಗ್ ವೇಳೆ ಹಿಟ್‌ವಿಕೆಟ್ ಮೂಲಕ ಔಟಾಗಿದ್ದರು. ಮಾಜಿ ಕ್ರಿಕೆಟಿಗ ಮೊಹಿಂದರ್ ಅಮರ್‌ನಾಥ್ ತನ್ನ 69 ಟೆಸ್ಟ್‌ಗಳ ಬಾಳ್ವೆ ವೇಳೆ ಮೂರು ಬಾರಿ ಹಿಟ್‌ವಿಕೆಟ್ ಆಗಿದ್ದರೆ ಕೊಹ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಹಿಟ್‌ವಿಕೆಟ್ ಮೂಲಕ ಔಟಾದ ಏಕೈಕ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.