Advertisement
ನದಿ ತೀರದ ಗ್ರಾಮಗಳಾದ ನಿಡಗುಂದಿ ತಾಲೂಕಿನ ಅರಳಲದಿನ್ನಿ, ಯಲಗೂರ, ಕಾಶಿನಕುಂಟಿ, ಯಲ್ಲಮ್ಮನ ಬೂದಿಹಾಳ, ಹೊಳೆಮಸೂತಿ ಗ್ರಾಮಗಳ ಸಾವಿರಾರು ಎಕರೆ ಪ್ರದೇಶದಲ್ಲಿ ಕಬ್ಬು, ಶೆಂಗಾ, ಮಕ್ಕೆಜೋಳ, ಸಜ್ಜಿ, ಸೂರ್ಯಕಾಂತಿ ಬೆಳೆ ನಾಶವಾಗುತ್ತಿವೆ.
Related Articles
Advertisement
ಗ್ರಾಮಕ್ಕೆ ಬರುವ ಅಧಿಕಾರಿಗಳು ನಿಮಗೇನು ತೊಂದರೆಯಾಗುವುದಿಲ್ಲ ನಿಮ್ಮ ಮನೆಗಳಲ್ಲೆ ಇರಲು ಸೂಚಿಸಿದ್ದಾರೆ. ಮನೆ ಸುತ್ತಲು ನೀರು ಆವರಿಸಿದ ಪರಿಣಾಮ ಹಾವು, ಮೊಸಳೆಗಳ ಜತೆಗೆ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ. ಮನೆ ಸುತ್ತ ನೀರು ಕಂಡ ಅಧಿಕಾರಿಗಳು ಮನೆಯಲ್ಲೆ ವಾಸಿಸಿ ಎನ್ನುತ್ತಾರೆ ಎಂದು ಕರಿಯಮ್ಮ ಮಾದರ, ಬಸಮ್ಮ ಮಾದರ, ಇತರೆ ಜಾಲಾವೃತ ಭಯದಲ್ಲಿರುವ ಗ್ರಾಮಸ್ಥರು ತಿಳಿಸುತ್ತಾರೆ.
ವಡವಡಗಿ ಗ್ರಾಮಕ್ಕೆ ನದಿ ಪ್ರಮಾಣ ಮತ್ತಷ್ಟು ಹೆಚ್ಚಾದರೆ ಎರಡು ಹಳ್ಳದ ನೀರು ಊರನ್ನೆ ಕೊಳ್ಳೆ ಹೊಡೆಯಲಿದೆ. ಜತೆಗೆ ಹಿಂಗಾರು ಮಳೆ ಅಧಿಕವಾದರೂ ಹಳ್ಳದ ನೀರು ಗ್ರಾಮಕ್ಕೆ ಹರಿಯುತ್ತದೆ. ಇದರಿಂದ ಗ್ರಾಮವನ್ನು ಸ್ಥಳಾಂತರ ಮಾಡಬೇಕೆಂದು ಈ ಗ್ರಾಮವನ್ನು ಬಾಧಿತ ಗ್ರಾಮವೆಂದು ಘೋಷಿಸಬೇಕು ಎಂದು ಮೃತ್ಯುಂಜಯ ಹಿರೇಮಠ, ಗ್ರಾಪಂ ಸದಸ್ಯ ಮಲ್ಲಣಗೌಡ ತಂಗಡಗಿ ಸೇರಿ ಹಲವರು ಆಗ್ರಹಿಸುತ್ತಾರೆ. ಇದಕ್ಕಾಗಿ ಹಲವಾರು ಭಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ. ಹೊಳೆ ಮಸೂತಿ ಗ್ರಾಮದಲ್ಲಿ ಈಗಾಗಲೇ ಕೆಲವರಿಗೆ ಸಾಂಕ್ರಾಮಿಕ ರೋಗ ಆವರಿಸಿದೆ. ರಾತ್ರಿಯಾಗುತ್ತಿದ್ದಂತೆ ವಿಪರೀತ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಗ್ರಾಮದಲ್ಲಿ ವೈದ್ಯಕೀಯ ಕ್ಯಾಂಪ್ ಇದ್ದು ಗ್ರಾಮಸ್ಥರ ಆರೋಗ್ಯದತ್ತ ನಿರಂತರ ಗಮನ ಹರಿಸುತ್ತಿದ್ದಾರೆ. ರೋಗಿಗಳನ್ನು ಚಿಕಿತ್ಸೆ ಒಳಪಡಿಸಿ ಹೆಚ್ಚಿನ ಚಿಕಿತ್ಸೆ ಅವಶ್ಯ ಕಂಡು ಬಂದರೆ ಸಮೀಪದ ನಿಡಗುಂದಿ ಅಥವಾ ಕಾಳಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳಿಸಲಾಗುತ್ತದೆ ಎಂದು ಆರೋಗ್ಯ ಸಿಬ್ಬಂದಿ ತಿಳಿಸುತ್ತಾರೆ.
ಕಾಶಿನಕುಂಟಿ ಗ್ರಾಮದಲ್ಲಿ ಊರ ಆಕ್ರಮಿಸಲು 50 ಅಡಿ ಅಂತವಿದ್ದು ಹಾವು, ಮೊಸಳೆಗಳ ಭಯ ಜನರನ್ನು ಕಾಡುತ್ತಿದೆ. ಸರಕಾರ ಗ್ರಾಮದಲ್ಲಿ ಮುನ್ನೆಚ್ಚರಿಗೆ ಕ್ರಮ ವಹಿಸುವಂತೆ ಗ್ರಾಮಸ್ಥರು ಕೋರಿದ್ದಾರೆ.
ಮಂಗಳವಾರ ಬೆಂಗಳೂರು ಅಧಿಕಾರಿಗಳ ತಂಡ ಬಾಧಿತ ಗ್ರಾಮಗಳನ್ನು ಡ್ರೋಣ್ ಕ್ಯಾಮರಾದಲ್ಲಿ ಸೆರೆ ಹಿಡಿಯುವ ಕಾರ್ಯ ಮಾಡಿದ್ದಾರೆ ಎಂದು ಗ್ರಾಮ ಲೆಕ್ಕಾಧಿಕಾರಿ ಗಂಗಾಧರ ಜುಳಗುಡ್ಡ ತಿಳಿಸಿದರು.