ಮಂಗಳೂರು:ನಿಟ್ಟೆ ಯೂನಿರ್ವಸಿಟಿ(ನಿಕೋ) ಎರಡನೇ ಬಾರಿಗೆ ಮಂಗಳೂರಿನ ಫೋರಂ ಫಿಝಾ ಮಾಲ್ ನಲ್ಲಿ ಮಾರ್ಚ್ 30 ಹಾಗೂ 31ರಂದು ಚಾಕೋಲೇಟ್ ಮೇಳ ಆಯೋಜಿಸಿದೆ. ಈ ಮೂಲಕ ಎರಡು ದಿನಗಳ ಕಾಲ ಚಾಕೋಲೇಟ್ ಪ್ರಿಯರಿಗೆ ಹಬ್ಬದಂತಾಗಲಿದೆ.
ನಿಕೋಸ್ (ನಿಟ್ಟೆ ಇನ್ಸ್ ಟಿಟ್ಯೂಟ್ ಆಫ್ ಕಮ್ಯೂನಿಕೇಷನ್) ಚಾಕೋಲೇಟ್ ಸ್ಟ್ರೀಟ್ ಆಯೋಜಿಸುವ ಮೂಲಕ ಮಂಗಳೂರು ಹಾಗೂ ಸುತ್ತಮುತ್ತಲಿನ ಗೃಹ ತಯಾರಿಕೆಯ ಮತ್ತು ವೈವಿಧ್ಯಮಯ ಚಾಕೋಲೇಟ್ ತಯಾರಕರು ಒಂದೇ ಸ್ಥಳದಲ್ಲಿ ಸೇರುವಂತೆ ಮಾಡುತ್ತಿದೆ. ಅಷ್ಟೇ ಅಲ್ಲ ಫೋರಂ ಫಿಝಾ ಮಾಲ್ ನಲ್ಲಿ ವಿವಿಧೆಡೆಯಿಂದ ಆಗಮಿಸುವ ಚಾಕೋಲೇಟ್ ತಯಾರಿಕರಿಗೆ ತಮ್ಮ ಉತ್ಪಾದನೆಯನ್ನು ಪ್ರದರ್ಶಿಸುವ ಮತ್ತು ಮಾರಾಟ ಮಾಡುವ ಅವಕಾಶ ಕಲ್ಪಿಸಿದೆ.
ವಿಶೇಷವೆಂದರೆ ನಿಕೋಸ್ ಚಾಕೋಲೇಟ್ ಸ್ಟ್ರೀಟ್ ಅನ್ನು ಆಯೋಜಿಸಿರುವುದು ನಿಟ್ಟೆ ಇನ್ಸ್ ಟಿಟ್ಯೂಟ್ ಆಫ್ ಕಮ್ಯೂನಿಕೇಷನ್ ನ ಅಂತಿಮ ವರ್ಷದ ವಿದ್ಯಾರ್ಥಿಗಳು. ಈ ಚಾಕೋಲೆಟ್ ಮೇಳದಿಂದ ಮಂಗಳೂರಿನ ಚಾಕೋಲೆಟ್ ಪ್ರಿಯರಿಗೆ ಖುಷಿಯ ವಿಚಾರವಾಗಿದೆ. ನಿಕೋಸ್ ವಿದ್ಯಾರ್ಥಿಗಳು ಆಯೋಜಿಸುತ್ತಿರುವ 2ನೇ ಚಾಕೋಲೆಟ್ ಮೇಳ ಇದಾಗಿದೆ.
ಮಂಗಳೂರು ಪ್ರವಾಸೋದ್ಯಮ, ಮತ್ಸೋದ್ಯದಂತೆ ಸ್ವೀಟ್, ವಿವಿಧ ಖಾದ್ಯ ತಯಾರಿಕೆಯಲ್ಲೂ ಹೆಸರಾಗಿದೆ. ಐಡಿಯಲ್, ಹ್ಯಾಂಗ್ಯೊ ಐಸ್ ಕ್ರೀಮ್, ಕೋಕಾದ ಕ್ಯಾಂಪ್ಕೋ ಪ್ರಮುಖವಾದವು. ಚಾಕೋಲೆಟ್ ಫೆಸ್ಟಿವಲ್ ನಲ್ಲಿ ಐಡಿಯಲ್ ಐಸ್ ಕ್ರೀಮ್ ಕೂಡಾ ಚಾಕೋಲೆಟ್ ಪ್ರಾಡಕ್ಟ್ ಅನ್ನು ಪ್ರದರ್ಶನ ಮತ್ತು ಮಾರಾಟ ಮಾಡಲಿದೆ. ಮನೆಯಲ್ಲಿ ತಯಾರಿಸಿದ ಚಾಕೋಲೆಟ್ಸ್, ಕಪ್ ಕೇಕ್ಸ್, ಕುಕ್ಕಿಸ್, ಶೇಕ್ಸ್ ಸೇರಿದಂತೆ ವಿವಿಧ ವೈದ್ಯಮಯ ಚಾಕೋಲೆಟ್ಸ್ ಪ್ರದರ್ಶನ ನಡೆಯಲಿದೆ.
ಶನಿವಾರ ಬೆಳಗ್ಗೆ ವೆಲ್ ಕಮ್ ಗ್ರ್ಯಾಚುಯೇಟ್ ಸ್ಕೂಲ್ ಆಫ್ ಹೋಟೆಲ್ ಅಡ್ಮಿನಿಷ್ಟ್ರೇಶನ್ ನ ಪ್ರಿನ್ಸಿಪಾಲ್ ತಿರುಗನಾಸಂಬಾನಾಥಮ್ ಕೆ. ಅವರು ಚಾಕೋಲೆಟ್ ಫೆಸ್ಟಿವಲ್ ಅನ್ನು ಉದ್ಘಾಟಿಸಿದ್ದರು. ಚಾಕೋಲೇಟ್ ಮೇಳ ಭಾನುವಾರದವರೆಗೆ ನಡೆಯಲಿದೆ.