Advertisement

ನಿಕ್‌ ಕಿರ್ಗಿಯೋಸ್‌ ಚಾಂಪಿಯನ್‌

01:45 AM Aug 06, 2019 | Team Udayavani |

ವಾಷಿಂಗ್ಟನ್‌: ರಶ್ಯದ ಡ್ಯಾನಿಲ್‌ ಮೆಡ್ವಡೇವ್‌ ಅವರನ್ನು ಕಠಿನ ಹೋರಾಟದಲ್ಲಿ ಕೆಡವಿದ ಆಸ್ಟ್ರೇಲಿಯದ ನಿಕ್‌ ಕಿರ್ಗಿಯೋಸ್‌ “ಸಿಟಿ ಓಪನ್‌ ಟೆನಿಸ್‌’ ಕೂಟದ ಪ್ರಶಸ್ತಿ ಜಯಿಸಿದ್ದಾರೆ.

Advertisement

7-6 (6), 7-6 (4) ಸೆಟ್‌ಗಳಿಂದ ಗೆಲುವು ಸಾಧಿಸಿದ ಕಿರ್ಗಿಯೋಸ್‌ ತಮ್ಮ ಬಾಳ್ವೆಯ 6ನೇ ಎಟಿಪಿ ಟೂರ್‌ ಪ್ರಶಸ್ತಿ ಪಡೆದರು. ಎರಡೂ ಸೆಟ್‌ ಟೈಬ್ರೇಕರ್‌ನಲ್ಲಿ ಅಂತ್ಯಗೊಂಡಿರುವುದು ಇವರಿಬ್ಬರ ತೀವ್ರ ಪೈಪೋಟಿಯ ಹೋರಾಟಕ್ಕೆ ಸಾಕ್ಷಿಯಾಗಿದೆ.

ಪಂದ್ಯದ ಆರಂಭದಲ್ಲಿ ಬೆನ್ನಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಕಿರ್ಗಿಯೋಸ್‌ ಅಮೋಘವಾಗಿ ಆಡಿದರು. 18 ಏಸ್‌ ಸಿಡಿಸಿದ ಅವರು ಒಮ್ಮೆಯೂ ಬ್ರೇಕ್‌ ಪಾಯಿಂಟ್‌ ಎದುರಿಸಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next