Advertisement

ಐಸಿಸ್‌ ಪರ ಒಲವು ತೋರಿ ಲೈಕ್‌,ಕಾಮೆಂಟ್: ಭಟ್ಕಳದಲ್ಲಿ ಓರ್ವನನ್ನು ವಶಕ್ಕೆ ಪಡೆದ ಎನ್.ಐ.ಎ

11:20 AM Jul 31, 2022 | Team Udayavani |

ಭಟ್ಕಳ:  ಸಾಮಾಜಿಕ ಜಾಲತಾಣದಲ್ಲಿ ಐಸಿಸ್‌ ಪರ ಒಲವು ತೋರಿ ಕಾಮೆಂಟ್‌, ಲೈಕ್‌ ಮಾಡುತ್ತಿದ್ದ ವ್ಯಕ್ತಿಯನ್ನು ಎನ್.ಐ.ಎ. ತಂಡ ತಡರಾತ್ರಿ ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.

Advertisement

ಬೆಂಗಳೂರು ಹಾಗೂ ದೆಹಲಿಯಿಂದ ಬಂದಿದ್ದ ಎನ್.ಐ.ಎ. ಅಧಿಕಾರಿಗಳ ತಂಡ ಎರಡು ದಿನಗಳಿಂದ ಭಟ್ಕಳದಲ್ಲಿದ್ದು ಚಲನವಲಗಳನ್ನು ವೀಕ್ಷಿಸಿ ಭಟ್ಕಳ ಮುಖ್ಯ ರಸ್ತೆಯಲ್ಲಿರುವ ಮನೆಯೊಂದರಿಂದ ಅಬ್ದುಲ್ ಮುಕ್ತದಿರ್ ಎನ್ನುವವನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದೆ ಎಂದು ತಿಳಿದು ಬಂದಿದೆ.

ಈ ಹಿಂದೆ 2015 ರಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಐಸಿಸ್ ಪರ ಒಲವು ತೋರಿ ಕಾಮೆಂಟ್, ಲೈಕ್ ಮಾಡಿದ್ದ ಆರೋಪದಡಿಯಲ್ಲಿ ದುಬೈ ಪೊಲೀಸರಿಂದ ಬಂಧಿಸಲ್ಪಟ್ಟ ಅದ್ನಾನ್ ಹಸನ್ ದಾಮುದಿ ಪ್ರಕರಣಕ್ಕೂ, ವಶಕ್ಕೆ ಪಡೆದಿರುವಾತನಿಗೂ ಸಂಬಂಧ ಇದೆಯೇ ಎನ್ನುವ ಕುರಿತು ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಲು ಕರೆದುಕೊಂಡು ಹೋಗಿರುವ ಕುರಿತೂ ತಿಳಿದು ಬಂದಿದ್ದು ಸತ್ಯಾಂಶ ಏನು ಎನ್ನುವುದು ಎನ್.ಐ.ಎ. ಅವರಿಂದ ಮಾಹಿತಿ ತಿಳಿದು ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next