Advertisement

ಐಸಿಸ್‌ಗಾಗಿ ಎನ್‌ಐಎ ಶೋಧ

01:42 AM Jun 13, 2019 | Team Udayavani |

ಹೊಸದಿಲ್ಲಿ: ಶ್ರೀಲಂಕಾದಲ್ಲಿ ಈಸ್ಟರ್‌ ಹಬ್ಬದಂದು ದಾಳಿ ನಡೆಸಿದ ಐಸಿಸ್‌ ಉಗ್ರರಲ್ಲಿ ಒಬ್ಬನಾದ ಝಹ್ರೀನ್‌ ಹಶೀಮ್‌ ಜೊತೆ ಸಂಪರ್ಕದಲ್ಲಿದ್ದ ತಮಿಳುನಾಡಿನ ಮೊಹಮ್ಮದ್‌ ಅಜರುದ್ದೀನ್‌ ಕುರಿತ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಮಿಳುನಾಡಿನಲ್ಲಿನ ಕೊಯಮತ್ತೂರಿನ ಏಳು ಕಡೆಗಳಲ್ಲಿ ದಾಳಿ ನಡೆಸಿದೆ. ಝಹ್ರೀನ್‌ ಹಶೀಮ್‌ ಜೊತೆಗೆ ಅಜರುದ್ದೀನ್‌ ಫೇಸ್‌ಬುಕ್‌ನಲ್ಲಿ ಸ್ನೇಹಿತನಾಗಿದ್ದ. ಎನ್‌ಐಎ ನಡೆಸಿದ ದಾಳಿಯಲ್ಲಿ 14 ಮೊಬೈಲ್ ಫೋನ್‌ಗಳು, 29 ಸಿಮ್‌ ಕಾರ್ಡ್‌ಗಳು, 10 ಪೆನ್‌ಡ್ರೈವ್‌ಗಳು, ಮೂರು ಲ್ಯಾಪ್‌ಟಾಪ್‌ ಸಹಿತ ಹಲವು ಸಾಮಗ್ರಿಗಳನ್ನು ವಶಪಡಿಸಿಕೊಂಡಿದೆ.

Advertisement

ಅಲ್ಲದೆ, ಪಿಎಫ್ಐ ಹಾಗೂ ಎಸ್‌ಡಿಪಿಐಗೆ ಸಂಬಂಧಿಸಿದ ಕೈಪಿಡಿಗಳನ್ನೂ ತನಿಖಾಧಿಕಾರಿಗಳು ದಾಳಿ ನಡೆಸಿದ ಮನೆಗಳಿಂದ ವಶಪಡಿಸಿಕೊಂಡಿದ್ದಾರೆ. ಅರೋಪಿಗಳ ವಿಚಾರಣೆಯನ್ನು ಎನ್‌ಐಎ ನಡೆಸುತ್ತಿದೆ. ಮೂಲಗಳ ಪ್ರಕಾರ ಅಜರುದ್ದೀನ್‌ ಹಾಗೂ ಇತರ ಐವರು ಸಂಘಟನೆ ಕಟ್ಟಿಕೊಂಡಿದ್ದರು. ಇವರು ಫೇಸ್‌ಬುಕ್‌ನಲ್ಲಿ ಖಲೀಫಾ ಜಿಎಫ್ಎಕ್ಸ್‌ ಎಂಬ ಪೇಜ್‌ ರಚಿಸಿ, ಅದರಲ್ಲಿ ಐಸಿಸ್‌ ಸಿದ್ಧಾಂತಗಳನ್ನು ಪ್ರಚುರಪಡಿಸುತ್ತಿದ್ದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next