Advertisement

ಐಸಿಸ್, ಟಿಆರ್ ಎಫ್ ನಂಟು: ಏಕಕಾಲದಲ್ಲಿ 16 ಕಡೆ ದಾಳಿ ನಡೆಸಿದ ಎನ್ ಐಎ

10:48 AM Oct 10, 2021 | Team Udayavani |

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ನಡು ಮುರಿಯಲು ಕಣಕ್ಕಿಳಿದಿರುವ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಇಂದು ಏಕಕಾಲದಲ್ಲಿ 16 ಕಡೆ ದಾಳಿ ನಡೆಸಿದೆ.

Advertisement

ಐಸಿಸ್-ವಾಯ್ಸ್ ಆಫ್ ಹಿಂದ್ ಪ್ರಕರಣದ ತನಿಖೆಯ ಭಾಗವಾಗಿ ಭಯೋತ್ಪಾದನಾ ನಿಗ್ರಹ ಸಂಸ್ಥೆಯು ಶ್ರೀನಗರ, ಅನಂತನಾಗ್, ಕುಲ್ಗಾಮ್ ಮತ್ತು ಬಾರಾಮುಲ್ಲಾಗಳಲ್ಲಿ ಒಂಬತ್ತು ಸ್ಥಳಗಳಲ್ಲಿ ದಾಳಿ ನಡೆಸಿತು.

ಭಯೋತ್ಪಾದಕ ಸಂಘಟನೆಯು ಫೆಬ್ರವರಿ 2020 ರಿಂದ ‘ವಾಯ್ಸ್ ಆಫ್ ಹಿಂದ್’ (VOH) ಹೆಸರಿನಲ್ಲಿ ಮಾಸಿಕ ಭಾರತ ಕೇಂದ್ರಿತ ಆನ್‌ಲೈನ್ ನಿಯತಕಾಲಿಕೆಯನ್ನು ಬಿಡುಗಡೆ ಮಾಡುತ್ತಿದೆ. ಕಣಿವೆ ರಾಜ್ಯದ ಯುವಕರನ್ನು ಪ್ರಚೋದಿಸುವ ಕೆಲಸವನ್ನು ಇದು ಮಾಡುತ್ತಿದೆ.

ಭಾನುವಾರ, ಹಾಸನ್ ರಸ್ತೆ ನಿರ್ಮಾಣ ಕಂಪನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವ ಅರಿಪೋರ ಜೆವಾನ್ ನಿವಾಸಿ ನಯೀಮ್ ಅಹ್ಮದ್ ಭಟ್ ಮನೆಯ ಮೇಲೆ ಎನ್ಐಎ ದಾಳಿ ನಡೆಸಿದೆ. ಎರಡನೇ ದಾಳಿಯನ್ನು ಬಾಘಿ ನಂದ್ ಸಿಂಗ್ ಚಟ್ಟಬಾಲ್ ನಲ್ಲಿ ಮುಷ್ತಾಕ್ ಅಹ್ಮದ್ ದಾರ್ ನಿವಾಸದ ಮೇಲೆ ಮಾಡಲಾಗಿದೆ. ದಾಳಿ ವೇಳೆ ಒಟ್ಟು ಐದು ಮೊಬೈಲ್ ಫೋನ್ ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ:ಐಫೋನ್‍ ಗೂ ಇಎಂಐ -ಗೋಲ್ಗಪ್ಪಕ್ಕೂ ಇಎಂಐ! ‘ಪೋಸ್ಟ್ ಪೇ’: ಸಾಲ ನೀಡುವ ಡಿಜಿಟಲ್‍ ಆ್ಯಪ್‍

Advertisement

ಸೊಲಿನಾ ಪಯೀನ್ ನಿವಾಸಿ ಸುಲೀಲ್ ಅಹ್ಮದ್ ಭಟ್,  ಪಿಎಸ್ ಶೆರ್ಘರ್ಹಿ ಮನೆ ಮೇಲೆ ಏಜೆನ್ಸಿ ದಾಳಿ ನಡೆಸಿದೆ. ತಾಹೀರ್ ಅಹ್ಮದ್ ನಜರ್ ಅವರ ನಿವಾಸದಿಂದ ಬಹಾವುದ್ದೀನ್ ಸಾಹಬ್ ನೌಹಟ್ಟಾ ನನ್ನು ಬಂಧಿಸಲಾಗಿದೆ. ಆತನಿಂದ ಒಂದು ಲ್ಯಾಪ್ ಟಾಪ್ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.

ಲಷ್ಕರ್-ಇ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಜೈಶ್-ಇ-ಮೊಹಮ್ಮದ್ ನ ಬೆಂಬಲ ಹೊಂದಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಸಂಘಟನೆಯ ಮೇಲೆಯೂ ಎನ್ಐಎ ದಾಳಿ ಮಾಡಿದ್ದು, ಶ್ರೀನಗರ, ಸೋಪೋರ್ ಮತ್ತು ಅನಂತನಾಗ್ ನ ಏಳು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next