Advertisement

ಉಗ್ರ ಕೃತ್ಯಕ್ಕೆ ವಿದೇಶದಿಂದ ಹಣ ಪೂರೈಕೆ: ಬಂಧಿತ ಪುತ್ತೂರು, ಬಂಟ್ವಾಳದ ಐವರ ತೀವ್ರ ವಿಚಾರಣೆ

11:16 PM Mar 09, 2023 | Team Udayavani |

ಪುತ್ತೂರು: ಭಯೋತ್ಪಾದನ ಚಟುವಟಿಕೆಗೆ ಹಣ ವರ್ಗಾಯಿಸಿದ ಆರೋಪದಲ್ಲಿ ಬಿಹಾರದ ಪಟ್ನಾದ ಪುಲ್ವಾರಿ ಶರೀಫ್‌ನಲ್ಲಿ ಬಂಧಿತರಾಗಿರುವ ಪುತ್ತೂರು ಹಾಗೂ ಬಂಟ್ವಾಳದ ಐವರಿಗೆ ವಿದೇಶದಿಂದ ಹಣ ಪೂರೈಕೆ ಆಗಿರುವ ಅಂಶ ಎನ್‌ಐಎ ತನಿಖೆಯಲ್ಲಿ ಬಹಿರಂಗಗೊಂಡಿದೆ. ಬಂಧಿತರನ್ನು ಪಟ್ನಾದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

Advertisement

ದೇಶಾದ್ಯಂತ ಭಯೋತ್ಪಾದನ ಕೃತ್ಯಕ್ಕೆ ವಿದೇಶದಿಂದ ಹಣ ಪೂರೈಕೆ ಆಗುತ್ತಿದ್ದು, ಅದನ್ನು ಉಗ್ರ ಕೃತ್ಯಗಳಲ್ಲಿ ತೊಡಗು ವವರಿಗೆ ನೀಡಲು ಬೇರೆ ಬೇರೆ ರಾಜ್ಯಗಳಲ್ಲಿ ತಂಡ ಕಾರ್ಯಾಚರಿಸುತ್ತಿರುವ ಅಂಶ ಆತಂಕ ಮೂಡಿದೆ. ಪಟ್ನಾ ಘಟನೆಗೆ ಕರಾ ವಳಿಯಿಂದ ಹಣ ಸಂದಾಯ ಮಾಡಿರುವುದು ಇದಕ್ಕೆ ಉದಾ ಹರಣೆಯಾಗಿದೆ.

ಕರಾವಳಿಯೇ ಕೇಂದ್ರ
ಈಗಾಗಲೇ ಕೋಟ್ಯಂತರ ರೂ. ವರ್ಗಾಯಿಸಲಾಗಿದ್ದು, ಇದ ಕ್ಕಾಗಿ ಪಿಎಫ್‌ಐ ಸಹಿತ ಹಲವು ಸಂಘಟನೆ ಸದಸ್ಯರ ಖಾತೆಗಳನ್ನು ಬಳಸಿಕೊಳ್ಳಲಾಗಿದೆ. ಕೆಲವೆಡೆ ಸದಸ್ಯರಲ್ಲದವರ ಖಾತೆಯಿಂದಲೂ ಹಣ ವರ್ಗಾಯಿಸಲಾಗಿದೆ. ಇಡೀ ದೇಶದಲ್ಲಿ ಈ ಜಾಲ ಹಬ್ಬಿದ್ದು, ಕರಾವಳಿಯೇ ಇದರ ಮೂಲವಾಗಿ ರುವ ಅಂಶ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next