Advertisement

ಮಾಜಿ ಶಾಸಕ ಇದಿನಬ್ಬ ಪುತ್ರನ ಮನೆ ಮೇಲೆ ಎನ್ ಐ ಎ ಅಧಿಕಾರಿಗಳ ದಾಳಿ

10:03 AM Aug 04, 2021 | Team Udayavani |

ಉಳ್ಳಾಲ :  ಉಳ್ಳಾಲದ ಮಾಜಿ ಶಾಸಕ ದಿ‌ ಬಿ.ಎಂ‌ ಇದಿನಬ್ಬ ಅವರ ಪುತ್ರನ ಮನೆಗೆ ಬುಧವಾರ ನಸುಕಿನ ಜಾವಕ್ಜೆ ಬೆಂಗಳೂರಿನಿಂದ ಬಂದಿದ್ದ ಎನ್ ಐ ಎ ಅಧಿಕಾರಿಗಳು ದಾಳಿ ನಡೆಸಿ ತನಿಖೆ ನಡೆಸುತ್ತಿದ್ದಾರೆ.

Advertisement

ಸಿರಿಯಾ ಮೂಲದ ಐಸಿಸ್ ಉಗ್ರರ ನಂಟಿನ ಹಿನ್ನಲೆಯಲ್ಲಿ ದಾಳಿ ನಡೆದಿದ್ದು ಹತ್ತು ವರ್ಷಗಳ ಹಿಂದೆ ಭಾಷ ಅವರ ಮೊಮ್ಮಗಳು ಐಸಿಸ್ ನಂಟಿನ ಹಿನ್ನಲೆಯಲ್ಲಿ ಸಿರಿಯಾ ತೆರಳಿದ್ದ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿತ್ತು.

ಭಾಷಾ ಅವರ ಮೊಮ್ಮಗಳು ಅಜ್ಮಲ್ ಕಾಸರಗೋಡು ಮೂಲದ ಯುವಕನೊಂದಿಗೆ ಮದುವೆಯಾಗಿದ್ದು, ಸಿರಿಯಾ ಐಸಿಸ್ ಉಗ್ರರ ಸಂಪರ್ಕದಲ್ಲಿದ್ದ ಆಕೆಯ ಪತಿ ಮತ್ತು ಮಗುವಿನೊಂದಿಗೆ ನಾಪತ್ತೆಯಾಗಿದ್ದು ಇದೇ ಆಧಾರದ ಮೇಲೆ ದಾಳಿ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಜ್ಮಲ್ ತನ್ನ ಕುಟುಂಬದ ಜೊತೆ ಸಿರಿಯಾ ತಲುಪಿ ಬಳಿಕ ನಾಪತ್ತೆಯಾಗಿರುವ ಸಾಧ್ಯತೆ ಇದೆ.

6 ವರ್ಷದ ಹಿಂದೆ ಭಾಷಾ ಅವರ ಮೊಮ್ನಗಳು ಅಜ್ಮಲ್ ಆಕೆಯ ಕಾಸರಗೋಡು ಮೂಲದ ಪತಿ ಸಿಯಾಝ್ ಮತ್ತು ಮಗುವಿನೊಂದಿಗೆ 2015- 16ರ ಸುಮಾರಿಗೆ ಶ್ರೀಲಂಕಾ ಮಾರ್ಗವಾಗಿ ಕತಾರ್ ಗೆ ತೆರಳಿ ಅಲ್ಲಿಂದ ಸಿರಿಯಾ ದಲ್ಲಿದ್ಐಸಿಸ್ ಗೆ ಸೇರಿಕೊಂಡಿದ್ದರು ಎನ್ನುವ ಮಾಹಿತಿಇದ್ದು ಇದೇ ಆಧಾರದಲ್ಲಿ ಎನ್ ಐ ಎ ದಾಳಿ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next