Advertisement

ಪುಲ್ವಾಮ್ ದಾಳಿಯ ಜೈಶ್ ಸಂಘಟನೆ ರೂವಾರಿಗೆ ನೆರವು ನೀಡಿದ್ದ ವ್ಯಕ್ತಿ ಎನ್ ಐಎ ಬಲೆಗೆ

08:56 PM Jul 02, 2020 | Nagendra Trasi |

ನವದೆಹಲಿ: ದೇಶವನ್ನೇ ತಲ್ಲಣಗೊಳಿಸಿದ್ದ ಪುಲ್ವಾಮಾ ದಾಳಿ ಪ್ರಕರಣದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ(ಎನ್ ಐಎ) ಗುರುವಾರ ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಗೆ ನೆರವಾದ ಸಹಾಯಕನನ್ನು ಸೆರೆಹಿಡಿದಿರುವುದಾಗಿ ವರದಿ ತಿಳಿಸಿದೆ.

Advertisement

ಕಳೆದ ವರ್ಷ ಫೆಬ್ರುವರಿ ತಿಂಗಳಿನಲ್ಲಿ ಜೆಇಎಂ ಉಗ್ರರು ಎಸಗಿದ ಐಇಡಿ ಸ್ಫೋಟದಲ್ಲಿ 40 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಬಂಧನಕ್ಕೊಳಗಾದ ಶಂಕಿತ ವ್ಯಕ್ತಿಯನ್ನು ಮೊಹಮ್ಮದ್ ಇಕ್ಬಾಲ್ ರಾಥೇರ್(25ವರ್ಷ) ಎಂದು ಗುರುತಿಸಲಾಗಿದ್ದು, ಈತ ಜಮ್ಮು-ಕಾಶ್ಮೀರದ ಬದ್ಗಾಮ್ ಜಿಲ್ಲೆಯ ಚಾರಾರ್ ಎ ಶರೀಫ್ ನ ಫುಲ್ಟಿಪುರ್ ಪ್ರದೇಶದ ನಿವಾಸಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುಲ್ವಾಮ್ ದಾಳಿಯ ಮುಖ್ಯ ರೂವಾರಿ ಜೈಶ್ ಇ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಮಹಮ್ಮದ್ ಉಮರ್ ಫಾರೂಖ್ ನಿಗೆ ನೆರವು ಕಲ್ಪಿಸಿಕೊಟ್ಟ ವ್ಯಕ್ತಿಗಳಲ್ಲಿ ಮೊಹಮ್ಮದ್ ಇಕ್ಬಾಲ್ ಕೂಡಾ ಒಬ್ಬನಾಗಿದ್ದಾನೆ. 2018ರ ಏಪ್ರಿಲ್ ನಲ್ಲಿ ಫಾರೂಖ್ ಹಾಗೂ ಇತರರು ದಕ್ಷಿಣ ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ನುಸುಳಿ ಭಾರತಕ್ಕೆ ಬಂದಿದ್ದರು. ದಾಳಿ ನಡೆಸಲು ಫಾರೂಖ್ ಐಇಡಿ ಉಪಯೋಗಿಸಿದ್ದ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next