ಬೆಂಗಳೂರು: ಸಿರಿಯಾದಲ್ಲಿ ಸಕ್ರಿಯವಾಗಿರುವ ಐಸಿಸ್ ಉಗ್ರ ಸಂಘಟನೆಗೆ ಬೆಂಗಳೂರಿನ ಯುವಕರನ್ನು ಕಳುಹಿಸಿದ್ದ ಪ್ರಕರಣದಲ್ಲಿ ಮತ್ತೂಬ್ಬ ಬೆಂಗಳೂರು ಮೂಲದ ವೈದ್ಯನ ಕೈವಾಡ ಇರುವುದು ಎನ್‌ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಮೂಲಕ ಪ್ರಕರಣದಲ್ಲಿ ಬೆಂಗಳೂರು ಮೂಲದ ಎರಡನೇ ವೈದ್ಯ ಐಸಿಸ್ ಸಂಘಟನೆ ಜತೆ ಸಂಪರ್ಕ ದಲ್ಲಿರುವ ಸ್ಫೋಟಕ ವಿಚಾರ ಬಯಲಾಗಿದೆ.
ಬೆಂಗಳೂರಿನ ಆಗ್ನೇಯ ವಿಭಾಗದಲ್ಲಿ ವಾಸವಾಗಿದ್ದ ದಂತವೈದ್ಯ ತೌಕೀರ್ ಮತ್ತು ಕಂಪ್ಯೂಟರ್ ಅಪ್ಲೀ ಕೇಷನ್‌ಗಳ ತಜ್ಞ ಜುಹೇಬ್‌ಗಾಗಿ ಎನ್‌ಐಎ ಅಧಿಕಾರಿಗಳು ವಿದೇಶದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಶಂಕಿತ ಉಗ್ರರು ಆರೇಳು ವರ್ಷಗಳ ಹಿಂದೆ ಬೆಂಗಳೂರಿನ ಆರೇಳು ಯುವಕರನ್ನು ಸಿರಿಯಾಗೆ ಕಳುಹಿಸಿದ್ದಾರೆ. ಅನಂತರ ಅವರು ಕೂಡ ವಿದೇಶಕ್ಕೆ ತೆರಳಿ ತಲೆ ಮರೆಸಿಕೊಂಡಿದ್ದಾರೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಬಂಧನಕ್ಕೊಳಗಾದ ತಮಿಳುನಾಡು ಮೂಲದ ಅಹಮದ್ ಅಬ್ದುಲ್ ಖಾದೆರ್ ಮತ್ತು ನಗರದ ಅಕ್ಕಿ ವ್ಯಾಪಾರಿ ಇರ್ಫಾನ್ ನಾಸೀರ್‌ನನ್ನು ಎನ್‌ಐಎ ಬಂಧಿಸಿತ್ತು. ಈ ಶಂಕಿತರು ತೌಕೀರ್ ಮತ್ತು ಜುಹೇಬ್ ಬಗ್ಗೆ ಬಾಯಿಬಿಟ್ಟಿದ್ದರು. ಈ ಹಿಂದೆ ಬಂಧನಕ್ಕೊಳಗಾದ ನಗರದ ಪ್ರತಿಷ್ಟಿತ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಅಬ್ದರ್ ರೆಹಮಾನ್, ತಮಿಳುನಾಡಿನ ಅಹಮದ್ ಅಬ್ದುಲ್ ಖಾದೆರ್, ನಗರದ ಅಕ್ಕಿ ವ್ಯಾಪಾರಿ ಇರ್ಫಾನ್ ನಾಸೀರ್ ಹಾಗೂ ಇತರೆ ಶಂಕಿತರ ಜತೆ ಸೇರಿಕೊಂಡು ವಾಟ್ಸ್‌ಆ್ಯಪ್ ಗ್ರೂಪ್‌ವೊಂದನ್ನು ರಚಿಸಿಕೊಂಡಿದ್ದರು. ಬೆಂಗಳೂರಿನ ಯುವಕರಿಗೆ ಧರ್ಮದ ಬಗ್ಗೆ ಬೋಧಿಸಿ, ಸಿರಿಯಾಗೆ ಕಳುಹಿಸಲು ಆರ್ಥಿಕ ನೆರವು ನೀಡುತ್ತಿದ್ದರು.
ತೌಕೀರ್, ತನ್ನ ಕ್ಲಿನಿಕ್‌ಗೆ ಬರುವ ಸಮುದಾಯದ ಯುವಕರಿಗೆ ಧರ್ಮ ಸ್ಥಾಪನೆ ಬಗ್ಗೆ ಸಾಕಷ್ಟು ಬೋಧನೆ ಮಾಡುತ್ತಿದ್ದ. ಅದರಿಂದ ಪ್ರೇರಿತಗೊಂಡ ಯುವಕರಿಗೆ ಸಿರಿಯಾಗೆ ಕಳುಹಿಸಲು ರೆಹಮಾನ್, ಜುಹೇಬ್ ಜತೆ ಸೇರಿ ಆರ್ಥಿಕ ಸಹಾಯ ಮಾಡುತ್ತಿದ್ದ. ಕಂಪ್ಯೂಟರ್ ಅಪ್ಲೀಕೇಷನ್‌ಗಳ ತಜ್ಞನಾಗಿರುವ ಜುಹೇಬ್, ವೈದ್ಯ ಅಬ್ದುರ್ ರೆಹಮಾನ್‌ಗೆ ಐಸಿಸ್‌ಗಾಗಿ ಭಾರತ ಮೂಲದ ಟೆಲಿಗ್ರಾಂಮತ್ತು ವಿದೇಶಿ ಮೂಲದ ತ್ರೀಮಾ ಎಂಬ ಆ್ಯಪ್ ಸಿದ್ದಪಡಿಸುವಲ್ಲಿ ನೆರವು ನೀಡಿದ್ದ. ಈ ಮೂಲಕ ಸಂಘಟನೆಯ ಅತ್ಯಂತ ಗೌಪ್ಯ ವಿಚಾರಗಳು ಹಾಗೂ ವೈದ್ಯಕೀಯ ಸೇವೆ ಒದಗಿಸುವುದು ಮತ್ತು ಶಸ್ತ್ರಾಸ್ತ್ರಪೂರೈಕೆ ಮಾಡುವ ಕುರಿತು ಆ್ಯಪ್ ಗಳನ್ನು ಸಿದ್ದಪಡಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ವಿವಿಧೆಡೆ ಕ್ಲಿನಿಕ್ ಬದಲು : ಬೆಂಗಳೂರಿನ ಆಗ್ನೇಯ ವಿಭಾಗದಲ್ಲಿ ಸಣ್ಣದಾದ ಕ್ಲಿನಿಕ್ ನಡೆಸುತ್ತಿದ್ದ ತೌಕೀರ್, ಪೊಲೀಸರಕಣ್ಣು ತಪ್ಪಿಸಲು ನಾಲ್ಕೈದುಕಡೆಗಳಲ್ಲಿಕ್ಲಿನಿಕ್ ಬದಲಿಸಿದ್ದಾನೆ. ಇನ್ನುಕಂಪ್ಯೂಟರ್ ಅಪ್ಲೀಕೇಷನ್‌ಗಳ ತಜ್ಞನಾಗಿರುವ ಜುಹೇಬ್‌ಕೂಡ ನಾಲ್ಕೈದುಕಡೆ ಮನೆ ಬದಲಿಸಿದ್ದ. ತಮ್ಮಕಾರ್ಯಚಟುವಟಿಕೆ ಗಳ ಬಗ್ಗೆ ಪೊಲೀಸರು ಹಾಗೂ ತನಿಖಾಧಿಕಾರಿ ಗಳುಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಸಿರಿಯಾಗೆ ಪಲಾಯ ನ ಮಾಡಿದ್ದರು. ಹಲವು ವರ್ಷಗಳ ಹಿಂದೆಯೇ ದೇಶ ಬಿಟ್ಟು ತೆರಳಿದ್ದು, ವಿದೇಶದಲ್ಲಿ ತಲೆಮರೆಸಿ ಕೊಂಡಿದ್ದಾರೆ. ಸಿರಿಯಾದಲ್ಲಿಕೆಲ ವರ್ಷಗಳ ತಂಗಿದ್ದ ಶಂಕಿತರು, ಅನಂತರ ಬೇರೆಡೆ ಸ್ಥಳಾಂತ ರಗೊಂಡಿದ್ದಾರೆ. ಅಲ್ಲಿಂದಲೇ ಬೆಂಗಳೂರು ಯುವಕರನ್ನು ಐಸಿಸ್ ಸಂಘಟನೆಗೆ ಸೆಳೆಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ.