ಹೊಸದಿಲ್ಲಿ : ಅಬುಧಾಬಿಯ ISIS module ನಂಟನ್ನು ಪತ್ತೆ ಹಚ್ಚುವ ಸಲುವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಇಂದು ಶನಿವಾರ ಬೆಳಗ್ಗೆ ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ನಾಲ್ಕು ದಾಳಿಗಳನ್ನು ನಡೆಸಿರುವುದಾಗಿ ವರದಿಳು ತಿಳಿಸಿವೆ.
ಅಬುಧಾಬಿ ISIS module ಕೇಸಿನಲ್ಲಿ ಚಾರ್ಜ್ ಶೀಟ್ ಮಾಡಲ್ಪಟ್ಟಿರುವ ಅಬ್ದುಲ್ ಬಾಸಿತ್‌ನ ಎರಡನೇ ಪತ್ನಿಯು ವಿದೇಶದಲ್ಲಿರುವ ಐಸಿಸ್ ನಿರ್ವಾಹಕರ ಜತೆಗೆ ಸಂಪರ್ಕದಲ್ಲಿದ್ದಾಳೆ ಎಂಬ ಖಚಿತ ಮಾಹಿತಿಯನ್ನು ಅನುಸರಿಸಿ ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ಎನ್‌ಐಎ ದಾಳಿ ನಡೆಸಿತು. ಶಂಕಿತ ಮಹಿಳೆಯನ್ನು ಎನ್‌ಐಎ ವಶಕ್ಕೆ ತೆಗೆದುಕೊಂಡು ಪ್ರಶ್ನಿಸುತ್ತಿದೆ ಎಂದು ತಿಳಿದು ಬಂದಿದೆ.
ತೆಲಂಗಾಣದಲ್ಲಿ ಇನ್ನೂ ಎರಡು NIA ತಂಡಗಳು ಹೈದಾರಾಬಾದಿನ ಮೂರು ತಾಣಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಕಳೆದ ಫೆ.7ರಂದು ಎನ್‌ಐಎ, ಅಬುಧಾಬಿ ISIS module ಕೇಸಿಗೆ ಸಂಬಂಧಿಸಿ ಮೊಹಮ್ಮದ್ ಅಬ್ದುಲ್ಲ ಬಾಸಿತ್ ಮತ್ತು ಮೊಹಮ್ಮದ್ ಅಬ್ದುಲ್ ಖಾದೀರ್ ಎಂಬ ಇಬ್ಬರು ಆರೋಪಿಗಳ ವಿರುದ್ದ ಚಾರ್ಜ್ ಶೀಟ್ ದಾಖಲಿಸಿತು. ಈ ಇಬ್ಬರೂ ಆರೋಪಿಗಳು ಈಗ ಜೈಲಿನಲ್ಲಿದ್ದಾರೆ.