Advertisement

2017ರ ದಾಳಿ ರೂವಾರಿ ಜೈಶ್‌ ಉಗ್ರನನ್ನು ಬಂಧಿಸಿದ ಎನ್‌.ಐ.ಎ.

02:39 PM Apr 15, 2019 | Hari Prasad |

ಜಮ್ಮು-ಕಾಶ್ಮೀರ: 2017ರಲ್ಲಿ ಲೇಥ್‌ ಪೋರಾದಲ್ಲಿ ಸಿ.ಆರ್‌.ಪಿ.ಎಫ್. ಗ್ರೂಪ್‌ ಸೆಂಟರ್‌ ಮೇಲೆ ನಡೆದಿದ್ದ ದಾಳಿಯಲ್ಲಿ ಪಾಲ್ಗೊಂಡಿದ್ದ ಜೈಶ್‌ ಉಗ್ರ ಇರ್ಷಾದ್ ಅಹಮ್ಮದ್‌ ರೇಶಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಆದಿತ್ಯವಾರದಂದು ಬಂಧಿಸಿವೆ. ಈತ ಪುಲ್ವಾಮ ನಿವಾಸಿಯಾಗಿದ್ದಾನೆ.
ಈ ಪ್ರಕರಣದಲ್ಲಿ ಎನ್‌.ಐ.ಎ.ಯಿಂದ ಬಂಧಿಸಲ್ಪಟ್ಟವರಲ್ಲಿ ರೇಶಿ ಐದನೇ ಆರೋಪಿಯಾಗಿದ್ದಾನೆ. ಈ ಮೊದಲು ಬಂಧಿತರಾಗಿದ್ದ ದಾಳಿ ಪ್ರಕರಣದ ಆರೋಪಿಗಳಾದ ನಿಸಾರ್‌ ಅಹಮ್ಮದ್‌ ತಂತ್ರೆ ಮತ್ತು ಸೈಯದ್‌ ಹಿಲಾಲ್‌ ಅಂದ್ರಾಬಿಯನ್ನು ವಿಚಾರಣೆ ನಡೆಸಿದ ಬಳಿಕ ಎನ್‌.ಐ.ಎ. ನಡೆಸಿದ ಫಾಲೋ ಅಪ್‌ ತನಿಖೆಯಲ್ಲಿ ರೇಶಿಯ ಬಂಧನವಾಗಿದೆ.

Advertisement

ಜೈಶ್‌ ಎ ಮಹಮ್ಮದ್‌ ಸಂಘಟನೆಗೆ ಸೇರಿರುವ ರೇಶಿ ಒಬ್ಬ ಕ್ರಿಯಾಶೀಲ ಕಾರ್ಯಕರ್ತನಾಗಿದ್ದು ಸಂಘಟನೆಯ ಕೆಲಸಗಳನ್ನು ತಳಮಟ್ಟದಿಂದ ಮಾಡುತ್ತಿದ್ದ ಎಂದು ಎ.ಎನ್‌.ಐ. ಹೇಳಿದೆ. ಈತ ಜೈಶ್‌ ಕಮಾಂಡರ್‌ ನೂರ್‌ ಮಹಮ್ಮದ್‌ ತಾಂತ್ರೆ ಅಲಿಯಾಸ್‌ ನೂರ್‌ ತ್ರಾಲಿಯ ನಿಕಟವರ್ತಿಯಾಗಿದ್ದ ಎಂಬ ಮಾಹಿತಿಯೂ ಇದೀಗ ಲಭ್ಯವಾಗಿದೆ.

2017ರ ಡಿಸೆಂಬರ್‌ 30, 31ರಂದು ಲೇಥ್‌ ಪೋರಾದಲ್ಲಿರುವ ಸಿ.ಆರ್‌.ಪಿ.ಎಫ್.ಗ್ರೂಪ್‌ ಸೆಂಟರ್‌ ಮೇಲೆ ಜೈಶ್‌ ಉಗ್ರರು ದಾಳಿ ಮಾಡಿದ್ದರು. ಅದೇ ವರ್ಷ ಭದ್ರತಾ ಪಡೆಗಳಿಂದ ಎನ್‌ ಕೌಂಟರ್‌ ಗೊಳಗಾಗಿದ್ದ ಜೈಶ್‌ ಕಮಾಂಡರ್‌ ನೂರ್‌ ತ್ರಾಲಿ ಹತ್ಯಗೆ ಪ್ರತೀಕಾರವಾಗಿ ಉಗ್ರರು ಲೇಥ್‌ ಪೋರಾ ದಾಳಿ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next