Advertisement

700 ಕೋಟಿ ರೂ. ಅಟ್ಟಾರಿ ಮಾದಕ ದ್ರವ್ಯ ಪ್ರಕರಣ: ಪ್ರಮುಖ ಆರೋಪಿಗಳಿಬ್ಬರ ಬಂಧನ

09:11 PM Mar 22, 2024 | Team Udayavani |

ಹೊಸದಿಲ್ಲಿ : 700 ಕೋಟಿ ರೂ. ಮೌಲ್ಯದ 102 ಕೆಜಿಗೂ ಹೆಚ್ಚು ಹೆರಾಯಿನ್ ವಶಪಡಿಸಿಕೊಂಡಿರುವ ಅಟ್ಟಾರಿ ಡ್ರಗ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಇನ್ನಿಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದ್ದು, ಇದರೊಂದಿಗೆ ಪ್ರಕರಣದಲ್ಲಿ ಇದುವರೆಗೆ ಒಟ್ಟು ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಶುಕ್ರವಾರ ಅಧಿಕೃತ ಹೇಳಿಕೆ ತಿಳಿಸಿದೆ.

Advertisement

ಆರೋಪಿಗಳನ್ನು ಪಂಜಾಬ್‌ನ ಫಿರೋಜ್‌ಪುರದ ದೀಪಕ್ ಖುರಾನಾ ಅಲಿಯಾಸ್ ದೀಪು ಮತ್ತು ದೆಹಲಿಯ ಜಾಮಿಯಾ ನಗರದ ಅವತಾರ್ ಸಿಂಗ್ ಅಲಿಯಾಸ್ ಸನ್ನಿ ಎಂದು ಗುರುತಿಸಲಾಗಿದೆ.

ಹಣಕಾಸಿನ ತನಿಖೆಗಳು ಮತ್ತು ಆರೋಪಿಗಳ ಸಹಚರರ ತನಿಖೆಯಿಂದ ಬಂಧನಕ್ಕೊಳಗಾಗಿರುವ ದೀಪಕ್ ಖುರಾನಾ ಡ್ರಗ್ ಡೀಲರ್ ಮತ್ತು ಡ್ರಗ್ ಕ್ವಾಲಿಟಿ ಪರೀಕ್ಷಕ ಮಾತ್ರವಲ್ಲದೆ ಡ್ರಗ್ಸ್ ಆದಾಯ ನಿರ್ವಾಹಕ ಆಗಿದ್ದ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next