Advertisement
ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ ಮುಖರ್ಜಿಯವರು ಅಕ್ಟೋಬರ್ 9ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಹೈಕೋರ್ಟ್‌ನ ಎರಡನೇ ಹಿರಿಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದ ನ್ಯಾ.ಎಚ್.ಜಿ ರಮೇಶ್ ಅವರನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ನೇಮಕಗೊಳಿಸಿ ಅ.10ರಿಂದ ಜಾರಿಯಾಗುವಂತೆ ಆದೇಶ ಹೊರಡಿಸಲಾಗಿದೆ. ನ್ಯಾಯಮೂರ್ತಿ ಎಚ್.ಜಿ ರಮೇಶ್ ಅವರು 1982ರಿಂದ2003ರವರೆಗೆ ರಾಜ್ಯ ಹೈಕೋರ್ಟ್ ವಕೀಲರಾಗಿ, 2003ರಿಂದ 14 ವರ್ಷಗಳ ಕಾಲ ಹೈಕೋರ್ಟ್
ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ, 2003ರ ಮೇ 12ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿ ಆಗಿ ನೇಮಕಗೊಂಡರು.
ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿಗೆ ಬೀಳ್ಕೊಡುಗೆ ನೀಡದಿರಲು ವಕೀಲರ ಪರಿಷತ್ ಹಾಗೂ ಬೆಂಗಳೂರು
ವಕೀಲರ ಸಂಘ ನಿರ್ಧರಿಸಿದೆ ಎಂದು ಹೈಕೋರ್ಟ್ ಮೂಲಗಳು ತಿಳಿಸಿವೆ. ಮುಖ್ಯ ನ್ಯಾಯಮೂರ್ತಿ ಎಸ್.ಕೆ.
ಮುಖರ್ಜಿ ಸೇವಾ ಅವಧಿಯಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ಕೆಲವು ಆರೋಪಗಳನ್ನು ಎದುರಿಸಿದ್ದಾರೆ ಹಾಗೂ ಇನ್ನಿತರ
ಕಾರಣಗಳಿಂದ ಅವರಿಗೆ ಬೀಳ್ಕೊಡುಗೆ ನೀಡದಿರುವ ತೀರ್ಮಾನಕ್ಕೆ ಬರಲಾಗಿದೆ ಎಂದು ಹಿರಿಯ ವಕೀಲರೊಬ್ಬರು
ತಿಳಿಸಿದರು.
Related Articles
ಸಮಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಬಹುದು ಎಂದು ವಕೀಲರ ಪರಿಷತ್‌ಗೆ ಹೈಕೋರ್ಟ್ ರಿಜಿಸ್ಟ್ರಾರ್ ಕಡೆಯಿಂದ ಪತ್ರ ಬರುವುದು ರೂಢಿಯಲ್ಲಿದೆ. ಆದರೆ, ಎಸ್.ಕೆ ಮುಖರ್ಜಿ ಬೀಳ್ಕೊಡುಗೆ ನೀಡುವ ಸಂಬಂಧ ಅಂತಹ ಪತ್ರ ಬಂದಿಲ್ಲ
ಎಂದು ವಕೀಲರ ಪರಿಷತ್‌ನ ಸದಸ್ಯರು ತಿಳಿಸಿದರು.
Advertisement