Advertisement

ತೆಕ್ಕಟ್ಟೆಯಲ್ಲಿ  ರಾ.ಹೆ. ಇಕ್ಕೆಲದ ಹಳೆ ಕಟ್ಟಡ ತೆರವು

03:02 PM Dec 28, 2017 | |

ತೆಕ್ಕಟ್ಟೆ: ರಾಷ್ಟ್ರೀಯ ಹೆದ್ದಾರಿ 66ರ ಕುಂದಾಪುರ – ಸುರತ್ಕಲ್‌ ಚತುಷ್ಪಥ ಕಾಮಗಾರಿ ಸಂದರ್ಭ ಹಳೆಯ ಕಟ್ಟಡಗಳು ತೆರವಾಗಿದ್ದರೂ ತೆಕ್ಕಟ್ಟೆ ಗ್ರಾಮದಲ್ಲಿರುವ ಹಳೆಯ ಕಟ್ಟಡಗಳು ಹಾಗೇ ಉಳಿದುಕೊಂಡಿದ್ದವು. ಇದೀಗ ಆ ಕಟ್ಟಡಗಳನ್ನು ಕೊನೆಗೂ ತೆರವುಗೊಳಿಸಲಾಗುತ್ತಿದೆ. 

Advertisement

ಹಳೆ ಕಟ್ಟಡಗಳು ವಾಹನ ಚಾಲಕರಿಗೆ ಸೇರಿದಂತೆ ಸ್ಥಳೀಯರಿಗೂ ಅಪಾಯಕಾರಿಯಾಗಿದ್ದು ಇದರ ಬಗ್ಗೆ ಉದಯವಾಣಿ ವರದಿ ಪ್ರಕಟಿಸಿತ್ತು. ಈ ಬೆನ್ನಲ್ಲೇ ಎಚ್ಚೆತ್ತ ಇಲಾಖೆ ಹಳೆ ಕಟ್ಟಡಗಳ ತೆರವಿಗೆ ಮುಂದಾಗಿದೆ. ಇದೇ ವೇಳೆ 13 ವರ್ಷದಿಂದ ಬಾಗಿಲು ಮುಚ್ಚಿದ್ದ ಶ್ರೀ ಮೂಕಾಂಬಿಕಾ ಕ್ಲಾತ್‌ ಸ್ಟೋರ್ ಕುರಿತ ದಾವೆ ಇತ್ಯರ್ಥವಾಗಿದ್ದು ಕಟ್ಟಡ ತೆರವು ಸಾಗಿದೆ. 

ಈ  ಮೊದಲು ಉಡುಪಿ ಭಾಗದಲ್ಲಿ ಹಲವು ಕಟ್ಟಡಗಳನ್ನು ತೆರವುಗೊಳಿಸಿದ್ದರೂ, ತೆಕ್ಕಟ್ಟೆ ಭಾಗದಲ್ಲಿ ತೆರವು ಗೊಳಿಸದೇ ಇರುವುದು ಸಂಶಯಕ್ಕೆ ಕಾರಣವಾಗಿತ್ತು. ಇದರೊಂದಿಗೆ ಹೆದ್ದಾರಿ ಇಕ್ಕೆಲಗಳಲ್ಲಿ ಅವೈಜ್ಞಾನಿಕವಾಗಿರುವ ಕಟ್ಟಡಗಳು, ಜಾಹೀ ರಾತು ಫ‌ಲಕಗಳನ್ನು ತೆರವುಗೊಳಿಸಬೇಕು ಎಂದೂ ಗ್ರಾಮಸ್ಥರು ಆಗ್ರಹಿಸಿದ್ದಾರೆ. 

ಕತ್ತಲ ಹೆದ್ದಾರಿ 
ತೆಕ್ಕಟ್ಟೆ  ಪಂಚಾಯತ್‌ ವ್ಯಾಪ್ತಿಯ ಹೆದ್ದಾರಿಗಳಲ್ಲಿ ಬೀದಿದೀಪಗಳನ್ನು ಅಳವಡಿಸದಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಸಂಚರಿಸುವ ಪಾದಚಾರಿಗಳು, ವಾಹನ ಚಾಲಕರಿಗೆ ಅಪಾಯಕಾರಿಯಾಗಿದೆ. ಇದರೊಂದಿಗೆ ರಾತ್ರಿ ವೇಳೆ ಹೆದ್ದಾರಿಯ ಎರಡೂ ಭಾಗದಲ್ಲಿ ಸಾಲುಗಟ್ಟಿ ನಿಲ್ಲುವ ಲಾರಿಗಳಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆಯೂ ಕ್ರಮ ಕೈಗೊಳ್ಳಬೇಕೆಂದು ಜನರ ಆಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next