Advertisement
20ಕ್ಕೂ ಅಧಿಕ ಕಂಬಗಳು ಉಡುಪಿಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಲಾರಿಯೊಂದರಲ್ಲಿ ಅಪಾಯಕಾರಿ ರೀತಿಯಲ್ಲಿ 20ಕ್ಕೂ ಅಧಿಕ ವಿದ್ಯುತ್ ಕಂಬಗಳನ್ನು ಜೋಡಿಸಿಕೊಂಡು, ಯಾವುದೇ ರೀತಿಯ ಮುನ್ಸೂಚನೆ ನೀಡುವ ಅಥವಾ ಸಾರ್ವಜನಿಕ ಎಚ್ಚರಿಕೆ ಫಲಕ ಅಳವಡಿಸದೇ ಸಾಗಾಟ ಮಾಡಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಂದಾಪುರದಿಂದ ಮಂಗಳೂರಿ ನತ್ತ ತೆರಳಿದ ಲಾರಿ ಚಾಲಕನು, ಹಿಂಬದಿಯಲ್ಲಿ ಕಟ್ಟಿದ್ದ ಕಂಬಗಳು ರಸ್ತೆಗೆ ತಾಗುವಂತೆ ನೇತಾಡುತ್ತಿದ್ದರೂ ಕೂಡ ಗಮನಿಸಿಯೂ ಅಪಾಯಕಾರಿಯಾಗಿ ಚಲಾಯಿಸಿದ್ದನು. ಸಹಾಯಕನ ಮನವಿಗೂ ನಿರ್ಲಕ್ಷ್ಯ
ಲಾರಿಯಲ್ಲಿ ಹೇರಲಾಗಿದ್ದ ವಿದ್ಯುತ್ ಕಂಬಗಳ ಜತೆಗೆ ಕುಳಿತಿದ್ದ ವ್ಯಕ್ತಿ (ಸಹಾಯಕ) ಯೋರ್ವ ಪದೇ ಪದೇ ಚಾಲಕನಿಗೆ ಎಚ್ಚರ ನೀಡುತ್ತಿದ್ದರೂ, ಚಾಲಕ ಲಾರಿಯನ್ನು ಒಂದೆಡೆ ನಿಲ್ಲಿಸಿ, ಪರಿಶೀಲನೆ ನಡೆಸದೆ ಲಾರಿ ಓಡಿಸುವ ಮೂಲಕ ರಸ್ತೆ ಸಂಚಾರ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾನೆ ಎನ್ನುವುದು ಹೈವೇ ಸಂಚಾರಿಗಳ ಆರೋಪವಾಗಿದೆ.
Related Articles
ಹಿಂಭಾಗದಲ್ಲಿ ಜೋಡಿಸಲಾಗಿದ್ದ ವಿದ್ಯುತ್ ಕಂಬಗಳ ಭಾರ ತಾಳಲಾರದೆ ಲಾರಿ ಎಡಬದಿ ಮುರಿತಕ್ಕೊಳಗಾದಂತೆ ಸಂಚರಿಸಿದ್ದು, ಇದರಿಂದಾಗಿ ಲಾರಿಯ ಹಿಂದಿನಿಂದ ಸಂಚರಿಸಿದ ಮಂಗಳೂರು ಕಡೆಗೆ ತೆರಳುವ ವಾಹನಗಳು ಗರಿಷ್ಠ ಅಂತರ ಕಾಯ್ದುಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿತ್ತು.
Advertisement