Advertisement
ಬೆಳಪುವಿನ 20 ಎಕರೆ ಜಮೀನಿನಲ್ಲಿ ನಿರ್ಮಾಣ ಹಂತದಲ್ಲಿರುವ ಅತ್ಯಾಧುನಿಕ ವಿಜ್ಞಾನ ಸಂಶೋಧನ ಮತ್ತು ಸ್ನಾತಕೋತ್ತರ ಕೇಂದ್ರದ ಕಾಮಗಾರಿ ವೀಕ್ಷಿಸಿ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
Related Articles
Advertisement
ಪ್ರಥಮ ಹಂತದಲ್ಲಿ ಸುಮಾರು 50 ಕೋ.ರೂ. ವೆಚ್ಚದಲ್ಲಿ 8 ಬ್ಲಾಕ್‌ಗಳ ಕಟ್ಟಡ ನಿರ್ಮಾಣಗೊಳ್ಳಲಿದ್ದು ಮೂಲ ಸೌಕರ್ಯಗಳ ಜೋಡಣೆ ಯಾಗಲಿದೆ. ಕೇಂದ್ರ ತ್ವರಿತಗತಿಯಲ್ಲಿ ಕಾರ್ಯರೂಪಗೊಳಿಸಲು ಶಾಸಕ ಲಾಲಾಜಿ ಮೆಂಡನ್ ಅವರು ನಿರಂತರ ಪ್ರಯತ್ನಶೀಲರಾಗಿದ್ದಾರೆ ಎಂದರು.
ಕಾಪು ಶಾಸಕ ಲಾಲಾಜಿ ಮೆಂಡನ್, ಕರ್ನಾಟಕ ಗೃಹ ಮಂಡಳಿಯ ಎಇಇ ಸಹನಾ, ಕಾಮಗಾರಿಯ ಗುತ್ತಿಗೆದಾರ ಕೆ. ವಾಸುದೇವ ಶೆಟ್ಟಿ, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಕಾಪು ತಾ.ಪಂ. ಮಾಜಿ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ, ಸುಮಾ ಶೆಟ್ಟಿ, ನವೀನ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.