Advertisement
ಇತ್ತೀಚೆಗೆ ಸರಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಕುರಿತು ಹೈಕೋರ್ಟ್ ವ್ಯಕ್ತಪಡಿಸಿರುವ ಆಕ್ಷೇಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನಾವು ಅಧಿಕಾರಕ್ಕೆ ಬಂದು 140 ದಿನಗಳಾಗಿವೆ. ನಾವು ಯಾವ ಶೌಚಾಲಯವನ್ನೂ ಹಾಳು ಮಾಡಿಲ್ಲ. ಸರಕಾರಿ ಶಾಲೆ ತೊರೆದು ಖಾಸಗಿ ಶಾಲೆಗೆ ಹೋಗುವುದನ್ನು ನಾವೂ ಒಪ್ಪುವುದಿಲ್ಲ. ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳಿದ್ದರೆ ಖಾಸಗಿ ಶಾಲೆಗೆ ಹೋಗುವ ಪ್ರಮೇಯವೇ ಬರುವುದಿಲ್ಲ ಎಂದರು.
ಸರಕಾರಿ ಶಾಲೆ ಬಿಟ್ಟು ಹೋಗುವುದನ್ನು ತಪ್ಪಿಸುವ ಸಲುವಾಗಿ ಉತ್ತಮ ದರ್ಜೆಯ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ಯೋಜಿಸಿದ್ದು, ಮುಂದಿನ ವರ್ಷ 500 ಕೆಪಿಎಸ್‌ಗಳನ್ನು ಆರಂಭಿಸುವ ಸಂಬಂಧ ಬಜೆಟ್‌ನಲ್ಲಿ ಅನುದಾನ ಹಂಚಿಕೆಗೆ ಕೋರಲಾಗುತ್ತದೆ. ಇಲ್ಲಿ ಎಲ್ಲ ಸೌಕರ್ಯಗಳನ್ನೂ ಒದಗಿಸಲಾಗುತ್ತದೆ. ಕನಿಷ್ಠ ನಾಲ್ಕೈದು ಕಿ.ಮೀ. ದೂರದ ಮಕ್ಕಳಿಗೂ ವಾಹನ ಸೌಲಭ್ಯ ನೀಡಿ ಸಸಕಾರಿ ಶಾಲೆ ಬಿಟ್ಟು ಹೋಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಅಜೀಮ್ ಪ್ರೇಮ್‌ಜೀ ಪ್ರತಿಷ್ಠಾನದಿಂದ ಶಿಕ್ಷಕರಿಗೆ ತರಬೇತಿ ಕೊಡಿಸುವುದು, ಸಿಎಸ್‌ಆರ್ ಫಂಡ್ ಮೂಲಕ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಯೋಜನೆಗಳಿದ್ದು, ಎಲ್ಲವೂ ಒಂದು ಹಂತಕ್ಕೆ ಸರಿ ಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Related Articles
Advertisement