Advertisement

ಮುಂದಿನ ತಿಂಗಳು ಮದುವೆ ಇತ್ತು

01:00 AM Feb 18, 2019 | Team Udayavani |

ಶನಿವಾರವಷ್ಟೇ ಗಡಿ ನಿಯಂತ್ರಣ ರೇಖೆ ಬಳಿ ನೆಲಬಾಂಬ್‌ ಸ್ಫೋಟದಿಂದ ಹುತಾತ್ಮರಾದ ಮೇಜರ್‌ ಚಿತ್ರೇಶ್‌ ಬಿಷ್ಟ್ ಅವರ ವಿವಾಹವು ಮಾರ್ಚ್‌ ತಿಂಗಳಲ್ಲಿ ನಿಶ್ಚಯವಾಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. ಉತ್ತರಾಖಂಡದ ಡೆಹ್ರಾಡೂನ್‌ನ ನೆಹರೂ ಕಾಲೊನಿಯವರಾದ ಮೇಜರ್‌ ಬಿಷ್ಟ್ ಇದೇ ತಿಂಗಳ 28ರಂದು ಮದುವೆಗಾಗಿ ರಜೆ ಪಡೆದು ಊರಿಗೆ ಮರಳುವವರಿದ್ದರು. ಮಾ.7ರಂದು ಅವರ ವಿವಾಹ ನಡೆಯುವುದರಲ್ಲಿತ್ತು. ಆದರೆ, ಅಷ್ಟರಲ್ಲಾಗಲೇ ಹೇಡಿಗಳ ಕುಕೃತ್ಯಕ್ಕೆ ಅವರು ಬಲಿಯಾಗಿದ್ದಾರೆ. ಇವರ ನಿಧನದಿಂದ ಇಡೀ ಊರಿಗೆ ಊರೇ ಸ್ತಬ್ಧವಾಗಿದೆ. ಸಾವಿರಾರು ಮಂದಿ ಇವರ ಮನೆಯತ್ತ ಧಾವಿಸುತ್ತಿದ್ದಾರೆ. ಮದುವೆಯ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next