ಹಾವೇರಿ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ ಜಿಲ್ಲೆಗೆ ಘೋಷಣೆಯಾಗಿದ್ದು, ತನ್ಮೂಲಕ ಏಲಕ್ಕಿ ಕಂಪಿನ ನಾಡಿನಿಂದ ಸಕ್ಕರೆ ನಾಡಿಗೆ ಸಮ್ಮೇಳನ ಸಂಭ್ರಮ ಅಡಿ ಇಟ್ಟಂತಾಗಿದೆ.
ಸಮ್ಮೇಳನದ ಕೊನೆಯ ದಿನವಾದ ಭಾನುವಾರ ನಡೆದ ಕಸಾಪ ಕಾರ್ಯಕಾರಿಣಿ ಸಭೆಯಲ್ಲಿ ಬಹುಮತದಿಂದ ಈ ತೀರ್ಮಾನ ಕೈಗೊಳ್ಳಲಾಯಿತು. ಸಮ್ಮೇಳನದ ಆತಿಥ್ಯ ಬಯಸಿ ಮಂಡ್ಯ, ಬಳ್ಳಾರಿ, ಚಿಕ್ಕಮಗಳೂರು, ಉತ್ತರಕನ್ನಡ ಸೇರಿದಂತೆ 9 ಜಿಲ್ಲೆಗಳಿಂದ ಮನವಿ ಸಲ್ಲಿಕೆಯಾಗಿತ್ತು. ಕೊನೆಗೆ ಮತದಾನದ ಮೂಲಕ ಸಮ್ಮೇಳನದ ಆತಿಥ್ಯ ನೀಡಲು ನಿರ್ಧರಿಸಲಾಯಿತು.
ಇದನ್ನೂ ಓದಿ:ಹೊಡೆದು ಸಾಯಿಸಿದ ನಾಯಿಯನ್ನು ಕೆರೆಗೆ ಬಿಸಾಕಲು ಹೋಗುವಾಗ ಕಾಲು ಜಾರಿ ತಾನೇ ಬಿದ್ದು ಮೃತಪಟ್ಟ ಮಹಿಳೆ.!
ಸಭೆಯಲ್ಲಿ ನಡೆದ ಮತದಾನದಲ್ಲಿ 46 ಸದಸ್ಯರು ಭಾಗವಹಿಸಿದ್ದರು. ಮಂಡ್ಯ ಜಿಲ್ಲೆಯ ಪರವಾಗಿ ಅತ್ಯಧಿಕ 17 ಮತಗಳು ಚಲಾವಣೆಯಾದ ಹಿನ್ನೆಲೆಯಲ್ಲಿ ಮುಂದಿನ ಸಮ್ಮೇಳನದ ಆತಿಥ್ಯವನ್ನು ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ನೀಡಲಾಯಿತು. ಬಳಿಕ ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಮಂಡ್ಯ ಮುಂದಿನ ಸಮ್ಮೇಳನದ ಆತಿಥ್ಯ ಪಡೆದಿರುವುದನ್ನು ಅಧಿಕೃತವಾಗಿ ಘೋಷಿಸಿದರು.
ಆತಿಥ್ಯ ಪಡೆದ ಕಸಾಪ ಜಿಲ್ಲಾಧ್ಯಕ್ಷ ರವಿಕುಮಾರ ಚಾಮ್ಲಾಪುರ ಮಾತನಾಡಿ, ಮಂಡ್ಯ ಜಿಲ್ಲೆಗೆ 87ನೇ ಸಾಹಿತ್ಯ ಸಮ್ಮೇಳನದ ಆತಿಥ್ಯ ದೊರೆತಿರುವುದು ಖುಷಿ ತಂದಿದೆ. ಈಗಿನ ಹಾಗೂ ಹಿಂದಿನ ಕಸಾಪ ರಾಜ್ಯಾಧ್ಯಕ್ಷ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಸಮ್ಮೇಳನ ಆಯೋಜಿಸಲಾಗುವುದು ಎಂದರು.