Advertisement

Next Gen ATP Finals: ಹಮಾದ್‌ ಮೆಜೆಡೋವಿಕ್‌ ಚಾಂಪಿಯನ್‌

11:30 PM Dec 03, 2023 | Team Udayavani |

ಜೆಡ್ಡಾ (ಸೌದಿ ಅರೇಬಿಯಾ): ಅಗ್ರ ಶ್ರೇಯಾಂಕದ ಆರ್ಥರ್‌ ಫಿಲ್ಸ್‌ ಅವರನ್ನು 5 ಸೆಟ್‌ಗಳ ಹೋರಾಟದಲ್ಲಿ ಬುಡಮೇಲು ಮಾಡಿದ ಸರ್ಬಿಯಾದ ಹಮಾದ್‌ ಮೆಜೆಡೋವಿಕ್‌ “ನೆಕ್ಸ್ಟ್ ಜೆನ್‌ ಫೈನಲ್ಸ್‌’ ಟೆನಿಸ್‌ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ.

Advertisement

20 ವರ್ಷದ ಮೆಜೆಡೋವಿಕ್‌ 3-4 (6-8), 4-1, 4-2, 3-4 (9-11), 4-1 ಅಂತರದಿಂದ ಫಿಲ್ಸ್‌ ಆಟಕ್ಕೆ ತೆರೆ ಎಳೆದರು. 2 ಗಂಟೆ, 11 ನಿಮಿಷಗಳ ತನಕ ಇವರ ಹೋರಾಟ ಸಾಗಿತು.

2017ರಲ್ಲಿ ಮಿಲಾನ್‌ನಲ್ಲಿ ಈ ಅಂಡರ್‌-21 ಟೆನಿಸ್‌ ಪಂದ್ಯಾವಳಿಯನ್ನು ಆರಂಭಿಸಲಾಗಿತ್ತು. ಸೌದಿ ಅರೇಬಿಯಾ ಮೊದಲ ಸಲ ಇದರ ಆತಿಥ್ಯ ವಹಿಸಿತ್ತು. ಇದು ಸರ್ಬಿಯನ್‌ ಟೆನಿಸಿಗನೋರ್ವನಿಗೆ ಒಲಿದ ಮೊದಲ ಪ್ರಶಸ್ತಿ. ಹಾಗೆಯೇ ಫೈನಲ್‌ ಹಣಾಹಣಿ 5 ಸೆಟ್‌ಗಳಿಗೆ ವಿಸ್ತರಿಸಲ್ಪಟ್ಟ ಮೊದಲ ನಿದರ್ಶನವೂ ಹೌದು.

“ಈ ಪ್ರಶಸ್ತಿ ಗೆಲ್ಲುತ್ತೇನೆಂದು ನಾನು ಭಾವಿಸಿರಲೇ ಇಲ್ಲ. ಇದರಿಂದ 2024ರ ಟೆನಿಸ್‌ ಸ್ಪರ್ಧೆಗಳಿಗೆ ಭಾರೀ ಆತ್ಮವಿಶ್ವಾಸ ಮೂಡಿದೆ’ ಎಂಬುದಾಗಿ ವಿಶ್ವ ರ್‍ಯಾಂಕಿಂಗ್‌ನಲ್ಲಿ 110ನೇ ಸ್ಥಾನದಲ್ಲಿರುವ ಮೆಜೆಡೋವಿಕ್‌ ಹೇಳಿದರು. ಸರ್ಬಿಯಾದ ಡೇವಿಸ್‌ ಕಪ್‌ ವಿಜೇತ ತಂಡದ ನಾಯಕ ವಿಕ್ಟರ್‌ ಟ್ರೊಯಿಕಿ ಬಳಿ ಇವರು ತರಬೇತಿ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next